ಕಾಂಗ್ರೆಸ್‌ ನಾಯಕರ ಬಣಗಳ ನಡುವೆ ಶೀತಲ ಸಮರ: ಬಿಜೆಪಿ ವ್ಯಂಗ್ಯ

ಬೆಂಗಳೂರು: ಕೆಲವೇ ದಿನಗಳಲ್ಲಿ ಭಾರತ್‌ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಆರಂಭಗೊಳ್ಳಲಿದ್ದು, ಈ ವೇಳೆ ರಾಜ್ಯದ ಕಾಂಗ್ರೆಸ್‌ ನಾಯಕರುಗಳಾದ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣಗಳ ನಡುವೆ ಶೀಲತ ಸಮರ ಶುರುವಾಗಿದ್ದು, ಈ ಹಿನ್ನೆಲೆ ಭಾರತೀಯ ರಾಷ್ಟೀಯ ಕಾಂಗ್ರೆಸ್‌ ಪಕ್ಷವು ಭಾರತ್‌ ಜೋಡೋ ಯಾತ್ರೆ ಮುಗಿದ ಬಳಿಕ ಇನ್ನೊಂದು ಯಾತ್ರೆ ಕೈಗೊಳ್ಳುತ್ತದೆಯೇ? ಎಂದು ಬಿಜೆಪಿ ವ್ಯಂಗಿಸಿದೆ.

ಈ ಕುರಿತು ಟ್ವೀಟ್‌ ಮಾಡಿರು ರಾಜ್ಯ ಕಾಂಗ್ರೆಸ್‌ ಘಟಕ, ಭಾರತ್‌ ಜೋಡೋ ಯಾತ್ರೆಯ ಸಿದ್ಧತೆಯ ನಡುವೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಆಂತರಿಕ ಕಲಹ ಮುಗಿಲು ಮುಟ್ಟಿದೆ. ಹೀಗಾಗಿ ಭಾರತ್‌ ಜೋಡೋ ಯಾತ್ರೆಯ ಬಳಿಕ ಡಿ.ಕೆ.ಶಿ ಮತ್ತು ಸಿದ್ದರಾಮಯ್ಯ ಬಣ ಜೋಡಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತೊಂದು ಯಾತ್ರೆ ಆಯೋಜಿಸಲಿದೆಯೇ? ಎಂದು ಬಿಜೆಪಿ ಟೀಕಿಸಿದೆ.

ಭಾರತ್‌ ಜೋಡೋ ಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಆಹ್ವಾನವಿಲ್ಲ. ಸಿದ್ದರಾಮೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಸ್ಥಾನವಿರಲಿಲ್ಲ, ಹೀಗಾಗಿ ಅದರ ಕೋಪವನ್ನು ಭಾರತ್‌ ಜೋಡೋ ಯಾತ್ರೆಯ ಮೂಲಕ  ಡಿ.ಕೆ.ಶಿವಕುಮಾರ್ ತೀರಿಸಿಕೊಳ್ಳುತ್ತಿದ್ದಾರೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

Related Articles

ಇತ್ತೀಚಿನ ಸುದ್ದಿಗಳು