ಬೆಂಗಳೂರು : ಕಾಂಗ್ರೆಸ್ ನಾಯಕರು ಭೂಕಬಳಿಕೆ ಮಾಡಿರುವ ಬಗ್ಗೆ ಬಿಜೆಪಿ ನಾಯಕ ಎನ್.ಆರ್ ರಮೇಶ್ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದಾರೆ
ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಮತ್ತು ಅವರ ಧರ್ಮಪತ್ನಿ ರಾಧ ಬಾಲಕೃಷ್ಣ ಅವರು ಭಾಗಿಯಾಗಿರುವ ಬೃಹತ್ ಭೂ ಹಗರಣದ ಕುರಿತು ಬಿಜೆಪಿ ನಾಯಕ ಎನ್ ಆರ್ ರಮೇಶ್ (N R Ramesh ) ದಾಖಲೆ ಸಮೇತ ಲೋಕಾಯುಕ್ತ (Lokayukta) ಪೊಲೀಸರಿಗೆ ದೂರು ನೀಡಿದ್ದಾರೆನಕಲಿ ದಾಖಲೆಗಳನ್ನು ಸೃಷ್ಟಿಸಿ ₹ 165 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ 26.10 ಎಕರೆಗಳಷ್ಟು ವಿಸ್ತೀರ್ಣದ ಅತ್ಯಮೂಲ್ಯ ಸರ್ಕಾರಿ ಗೋಮಾಳ ಸ್ವತ್ತನ್ನು ಕಬಳಿಸಿರುವ ಹಗರಣದ ಕುರಿತು ದಾಖಲೆ ಬಿಡುಗಡೆ ಮಾಡಿದ ರಮೇಶ್ ₹ 54 ಕೋಟಿ ಮೌಲ್ಯದ 8.00 ಎಕರೆ ಸರ್ಕಾರಿ ಗೋಮಾಳವನ್ನು ಕಬಳಿಸಿರುವ H. C. ಬಾಲಕೃಷ್ಣರವರ ಪತ್ನಿ ಹೆಸರಿಗೆ ನೊಂದಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಬೃಹತ್ ಭೂ ಹಗರಣ ನಡೆಸಿರುವ H. C. ಬಾಲಕೃಷ್ಣ ಮತ್ತವರ ಧರ್ಮಪತ್ನಿ ಮತ್ತು ಒಂಬತ್ತು ಮಂದಿ ಹಾಗೂ ಮಾಜಿ ಸಚಿವರೊಬ್ಬರ ಆರು ಜನ ಆಪ್ತರ ವಿರುದ್ಧ ED ಹಾಗೂ ಲೋಕಾಯುಕ್ತದಲ್ಲಿ ರಮೇಶ್ ದೂರು ದಾಖಲು ಮಾಡಿದ್ದಾರೆ“ಸರ್ಕಾರಿ ಭೂ ಕಬಳಿಕೆ”ಗೆ ಎಲ್ಲ ರೀತಿಯ ಸಹಕಾರ ನೀಡಿರುವ ಕುರುಬರ ಹಳ್ಳಿ ಗ್ರಾಮದ ರಾಜಸ್ವ ನಿರೀಕ್ಷಕ ಮೋನಿಷ್, ಗ್ರಾಮ ಲೆಕ್ಕಿಗ (VA) ನಂಜೇಗೌಡ, ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಸೀಲ್ದಾರ್ ಕೃಷ್ಣಮೂರ್ತಿ, ಬೆಂಗಳೂರು ನಗರ ಜಿಲ್ಲೆಯ ಉಪ ವಿಭಾಗಾಧಿಕಾರಿ (AC) ಅಪೂರ್ವ ಬಿದರಿ ಅವರುಗಳ ವಿರುದ್ಧವೂ ಸಹ ದೂರು ದಾಖಲು ಮಾಡಲಾಗಿದೆ
ಶಾಸಕ H. C. ಬಾಲಕೃಷ್ಣ ಮತ್ತವರ ಪತ್ನಿ ರಾಧ ಬಾಲಕೃಷ್ಣ ಸೇರಿದಂತೆ ಇನ್ನಿತರ ಹದಿನೈದು ಮಂದಿ ಸರ್ಕಾರಿ ನೆಲಗಳ್ಳರ ವಿರುದ್ಧ ತನಿಖೆ ನಡೆಸಲು Prosecution Permission ನೀಡಬೇಕೆಂದು ಘನತೆವೆತ್ತ ರಾಜ್ಯಪಾಲರಿಗೆ ದೂರು ನೀಡಲಾಗಿದೆ ಎಂಧು ಇದೇ ವೇಳೆ ಎನ್ ಆರ್ ರಮೇಶ್ ತಿಳಿಸಿದ್ರು