ಉತ್ತರಾಖಂಡದಲ್ಲಿ ಚಾರಣಕ್ಕೆ ಹೋಗಿದ್ದ ಕರ್ನಾಟಕದ ಐವರು ಸೇರಿದಂತೆ ಒಂಭತ್ತು ಮಂದಿ ಸಾವನ್ನಪ್ಪಿದ್ದು, ಇದೀಗ ನಾಲ್ವರು ಕನ್ನಡಿಗರ ಮೃತದೇಹ ಪತ್ತೆಯಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ಉತ್ತರಾಖಾಂಡ ರಾಜ್ಯದಲ್ಲಿ ಚಾರಣಕ್ಕೆ ಹೋಗಿದ್ದ ಸಂದರ್ಭದಲ್ಲಿ ಹವಾಮಾನ ವೈಪರಿತ್ಯದ ನಂತರ ಭೀಕರ ಅಪಘಾತ ಸಂಭವಿಸಿದೆ. ಹವಮಾನ ವೈಪರೀತ್ಯದಿಂದಾಗಿ ಸಾವನ್ನಪ್ಪಿದ ಐವರು ಕನ್ನಡಿಗರ ಪೈಕಿ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಉತ್ತರ ಕಾಶಿಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ.
ಉತ್ತರಾಖಾಂಡ ರಾಜ್ಯದ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ರಾಧಾ ರಥೂರಿ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಅಲ್ಲಿನ ಸಂಪೂರ್ಣ ಮಾಹಿತಿ ಪಡೆದ ಸಚಿವ ಕೃಷ್ಣಭೈರೇಗೌಡ ಮೃತದೇಹಗಳನ್ನು ರಾಜ್ಯಕ್ಕೆ ತರಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ.
ಸಂಪೂರ್ಣ ಮಾಹಿತಿ ಕೆಳಕಂಡಂತಿದೆ.
ಇನ್ನೂ 4 ಮೃತದೇಹಗಳು ಪತ್ತೆ
ಈ ಕೆಳಗಿನ ಚಾರಣಿಗರನ್ನು ನಿನ್ನೆ (ಬುಧವಾರ) ರಕ್ಷಿಸಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ.
- ಸೌಮ್ಯಾ ಕೆನಾಲೆ
- ಸ್ಮೃತಿ ಡೋಲಾಸ್
- ಶೀನಾ ಲಕ್ಷ್ಮಿ
- ಎಸ್. ಶಿವ ಜ್ಯೋತಿ
- ಅನಿಲ್ ಜಮತಿಗೆ ಅರುಣಾಚಲ ಭಟ್
- ಭರತ್ ಬೊಮ್ಮನ ಗೌಡರ್
- ಮಧು ಕಿರಣ್ ರೆಡ್ಡಿ
- ಜೈಪ್ರಕಾಶ್ ಬಿ.ಎಸ್.
ಇಂದು (ಗುರುವಾರ) ಬೆಳಗ್ಗೆ 5 ಚಾರಣಿಗರನ್ನು ರಕ್ಷಿಸಲಾಗಿದ್ದು, ಬೆಳಗ್ಗೆ 11 ಗಂಟೆಗೆ ವಿಮಾನದ ಮೂಲಕ ರಕ್ಷಿಸಲ್ಪಟ್ಟವರನ್ನು ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ಕಳುಹಿಸಲು ಸಿದ್ದತೆ ನಡೆಸಲಾಗಿದೆ.
- ಎಸ್ ಸುಧಾಕರ್
- ವಿನಯ್ ಎಂ.ಕೆ
- ವಿವೇಕ್ ಶ್ರೀಧರ್
- ನವೀನ್ ಎ
- ರಿತಿಕಾ ಜಿಂದಾಲ್
5 ಚಾರಣಿಗರ ಮೃತದೇಹಗಳನ್ನು ನಿನ್ನೆ (ಬುಧವಾರ) ಉತ್ತರಕಾಶಿಗೆ ವಿಮಾನದಲ್ಲಿ ರವಾನಿಸಲಾಗಿದೆ
- ಸಿಂಧು ವಕೆಲಂ
- ಆಶಾ ಸುಧಾಕರ್
- ಸುಜಾತಾ ಮುಂಗುರವಾಡಿ
- ವಿನಾಯಕ್ ಮುಂಗುರವಾಡಿ
- ಚಿತ್ರಾ ಪ್ರಣೀತ್
ಇಂದು ಮುಂಜಾನೆ ಕಾರ್ಯಾಚರಣೆಯಲ್ಲಿ ಇನ್ನೂ 4 ಶವಗಳನ್ನು ಪತ್ತೆ ಮಾಡಲಾಗಿದ್ದು, ಉತ್ತರಕಾಶಿಗೆ ವಿಮಾನದಲ್ಲಿ ರವಾನಿಸಲಾಗಿದೆ.
- ಪದ್ಮನಾಭ ಕೆ.ಪಿ
- ವೆಂಕಟೇಶ್ ಪ್ರಸಾದ್ ಕೆ
- ಅನಿತಾ ರಂಗಪ್ಪ
- ಪದ್ಮಿನಿ ಹೆಗ್ಡೆ
ಉತ್ತರಕಾಶಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಗೆ ಎಲ್ಲಾ 9 ಮೃತದೇಹಗಳನ್ನು ವಿಮಾನದ ಮೂಲಕ ಡೆಹ್ರಾಡೂನ್‌ಗೆ ತರಲಾಗುವುದು. ಡೆಹ್ರಾಡೂನ್‌ನಲ್ಲಿ ಎಂಬಾಮಿಂಗ್ ಮಾಡಲಾಗುತ್ತದೆ.
ಎಲ್ಲಾ 9 ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ಈಗಾಗಲೇ ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡಿದ್ದೇವೆ. ನಾನೀಗ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯವರ ಭೇಟಿಗೆ ಹೊರಟಿದ್ದೇನೆ. ಮುಖ್ಯ ಕಾರ್ಯದರ್ಶಿಯವರೊಂದಿಗಿನ ಸಭೆಯ ನಂತರ ಮೃತದೇಹಗಳ ಸಾಗಣೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ನಾನು ಭಾವಿಸುತ್ತೇನೆ.
-ಕೃಷ್ಣ ಬೈರೇಗೌಡ