ಹಿಮಾಚಲ ಪ್ರದೇಶ : ರೋಜ್‌ಗಾರ್ ಸಂಘರ್ಷ ಯಾತ್ರೆಯ ವೇಳೆ ಹಿಮಾಚಲ ಪ್ರದೇಶದ ನಹಾನ್‌ನಲ್ಲಿ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ತಾರಾಮಾರಿ ನಡೆದ ಘಟನೆ ವರದಿಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ರೋಜ್ಗಾರ್ ಸಂಘರ್ಷ ಯಾತ್ರೆ ನಡೆಸುತ್ತಿದೆ. ಶಿಮ್ಲಾ ಗ್ರಾಮಾಂತರ ಕ್ಷೇತ್ರದ ಶಾಸಕ ವಿಕ್ರಮಾದಿತ್ಯ ಸಿಂಗ್ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿದೆ. ಸಿರ್ಮೌರ್‌ನ ಶಿಲ್ಲೈನಿಂದ ಆರಂಭವಾದ ಈ ಯಾತ್ರೆ ಇಂದು ನಹಾನ್ ತಲುಪಿತ್ತು. ಈ ವೇಳೆ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಏಕಾಏಕಿ ಘರ್ಷಣೆ ಶುರುವಾಗಿದ್ದು, ಎರಡು ಬಣಗಳ ಕಾರ್ಯಕರ್ತರನ್ನು ನೂಕಾಡುವ ದೃಶ್ಯ ಕಂಡುಬಂದಿದೆ. ಹಾಗಾಗಿ ಈ ಘರ್ಷಣೆಗೆ ಕಾರಣ ಏನಿರಬಹುದು ಎಂಬುದು ತಿಳಿದುಬಂದಿಲ್ಲ.