ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಹುದ್ದೆಗಳ ಭರ್ತಿ ವಿಚಾರ ಬಿಜೆಪಿಗೆ ಕಾಂಗ್ರೆಸ್‌ ಟೀಕೆ

ಬೆಂಗಳೂರು: ಆರ್ಟಿಕಲ್ 371ಜೆ ಮೀಸಲಾತಿಯಡಿ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನೂ ಭರ್ತಿ ಮಾಡುತ್ತೇವೆ ಎಂದು ಕೊಟ್ಟ ಮಾತನ್ನು ಬಿಜೆಪಿ ಮರೆತಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ರಾಜ್ಯ ಸರ್ಕಾರವು ಅಧಿಕಾರಕ್ಕ್ಕೆ ಬಂದಾಗ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಮಾತುಕೊಟ್ಟಿತ್ತು, ಆದರೆ ರಾಜ್ಯದಲ್ಲಿ ಹುದ್ದೆಗಳನ್ನು ಮಾರಾಟ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ  ತಮ್ಮ ಮಾತು ನೆನಪಾಗುವುದಾದರೂ ಹೇಗೆ! ಎಂದು ಪ್ರಶ್ನಿಸಿದ್ದು, ಭರ್ತಿಯಾಗುತ್ತಿರುವುದು ಹುದ್ದೆಗಳಲ್ಲ ಬಿಜೆಪಿಗರ ಜೇಬು ಮಾತ್ರ! ಎಂದು ಕಿಡಿಕಾರಿದೆ.

Related Articles

ಇತ್ತೀಚಿನ ಸುದ್ದಿಗಳು