ವರದಿ ಮಾಡಬಹುದು, ಆದರೆ ಕೋರ್ಟ್ ನಡಾವಳಿಗಳನ್ನು ರೆಕಾರ್ಡ್ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ದೆಹಲಿ: ಗುರುತಿಸಲ್ಪಟ್ಟ ಸುದ್ದಿ ಸಂಸ್ಥೆಗಳು ನ್ಯಾಯಾಲಯದ ವಿಚಾರಣೆಗಳ ಕುರಿತು ಮುಕ್ತವಾಗಿ ವರದಿಗಳನ್ನು ಪ್ರಕಟಿಸಬಹುದು. ಆದರೆ, ನ್ಯಾಯಾಲಯದ ವಿಚಾರಣೆಗೆ ಸಂಬಂಧಿಸಿದ ಆಡಿಯೋ ಮತ್ತು ವಿಡಿಯೋ ಕ್ಲಿಪ್‌ಗಳನ್ನು ತಮ್ಮ ಸುದ್ದಿ ವರದಿಗಳಲ್ಲಿ ಬಳಸುವುದರ ಮೇಲೆ ನಿರ್ಬಂಧಗಳಿರುತ್ತವೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಾಲಯದ ನಡಾವಳಿಗಳ ನೇರ ಪ್ರಸಾರ ಹಾಗೂ ವಿಡಿಯೋ ರೆಕಾರ್ಡಿಂಗ್‌ಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಾತುಗಳನ್ನು ಹೇಳಿದೆ.

ನ್ಯಾಯಾಲಯದ ವಿಡಿಯೋಗಳ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪ್ರಮುಖ ಆದೇಶವೊಂದನ್ನು ಹೊರಡಿಸಿತ್ತು. ಪೂರ್ವಾನುಮತಿಯಿಲ್ಲದೆ ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಹಾಗೂ ಹಂಚಿಕೊಳ್ಳುವುದನ್ನು ನಿಷೇಧಿಸಿ ಮಧ್ಯಂತರ ಆದೇಶ ನೀಡಲಾಗಿತ್ತು. ಆದರೆ, ಜುಲೈ 24 ರ ಮಧ್ಯಂತರ ಆದೇಶದ 11ನೇ ಪ್ಯಾರಾ ವಿಷಯದಲ್ಲಿ ಸ್ವಲ್ಪ ಗೊಂದಲ ಉಂಟಾಗಿದ್ದರಿಂದ, ನ್ಯಾಯಾಲಯವು ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿದೆ.

ನ್ಯಾಯಾಲಯದ ಕಲಾಪಗಳ ಸುದ್ದಿಯನ್ನು ಪ್ರಸಾರ ಮಾಡುವುದು ಅಥವಾ ಪ್ರಕಟಿಸುವುದರ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಈ ಪ್ಯಾರಾವನ್ನು ಅರ್ಥೈಸಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು