Wednesday, July 31, 2024

ಸತ್ಯ | ನ್ಯಾಯ |ಧರ್ಮ

ರಾಹುಲ್‌ ಗಾಂಧಿ ಹುತಾತ್ಮರ ಕುಲದವರು: ಜಾತಿ ನಿಂದನೆ ಮಾಡಿದ ಅನುರಾಗ್ ಠಾಕೂರ್‌ಗೆ ಕಾಂಗ್ರೆಸ್ ತಿರುಗೇಟು

ಹೊಸದಿಲ್ಲಿ: ಗಾಂಧಿ ಕುಟುಂಬದ ಜಾತಿ ಹೆಸರು ಹುತಾತ್ಮ, ಆದರೆ ಬಿಜೆಪಿ-ಆರ್‌ಎಸ್‌ಎಸ್‌ಗೆ ಅದು ಎಂದಿಗೂ ಅರ್ಥವಾಗುವುದಿಲ್ಲ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ, ಅದರ ಸಂಸದ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿಯವರ ಜಾತಿಯನ್ನು ಸ್ಪಷ್ಟವಾಗಿ ಪ್ರಶ್ನಿಸಿದ್ದಕ್ಕಾಗಿ ಆಡಳಿತ ಪಕ್ಷವನ್ನು ಅದು ತರಾಟೆಗೆ ತೆಗೆದುಕೊಂಡಿದೆ.

ಜಾತಿ ನಿಂದನೆಗೆ ಕಿವಿಗೊಡಲು ತಮ್ಮ ಪಕ್ಷ ಸಿದ್ಧವಿದೆ, ಆದರೆ ಜಾತಿ ಗಣತಿ ಮಾಡಿಯೇ ತೀರುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

“ಹೌದು, ನಾನು ಭಾರತೀಯ ಮತ್ತು ದಲಿತ, ಆದರೆ ನಾವು ಎಷ್ಟು ಮಂದಿ ಇದ್ದೇವೆ ಎನ್ನುವುದು ನನಗೆ ತಿಳಿದಿಲ್ಲ, ಹೌದು, ನಾನು ಬುಡಕಟ್ಟು ಸಮುದಾಯದವನು, ಆದರೆ ನಾವು ಎಷ್ಟು ಮಂದಿ ಎಂದು ನನಗೆ ತಿಳಿದಿಲ್ಲ. ಹೌದು, ನಾನು ಒಬಿಸಿ, ಆದರೆ ಇಂದು ನಾವು ಎಷ್ಟು ಜನರಿದ್ದೇವೆ ಏನ್ನುವುದು ನಮಗೆ ತಿಳಿದಿಲ್ಲ, ಈ ದೇಶದ ಪ್ರಗತಿಯಲ್ಲಿ ನಮ್ಮ ಭಾಗವಹಿಸುವಿಕೆ ಎಷ್ಟು ಎನ್ನುವುದನ್ನು ನಾವು ನಿರ್ಣಯಿಸಬೇಕಾಗಿದೆ.

“ಬಿಜೆಪಿ-ಆರ್‌ಎಸ್‌ಎಸ್‌ನವರು ಇದನ್ನು ನಮ್ಮಿಂದ ಮರೆಮಾಚಲು ಪಿತೂರಿ ನಡೆಸುತ್ತಿದ್ದಾರೆ, ಈ ಮೂಲಕ ಅವರು ನಮ್ಮನ್ನು ಹಿಂದುಳಿದವರನ್ನಾಗಿ ಮಾಡಿ ನಮ್ಮ ಮೀಸಲಾತಿ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ” ಎಂದು ಖರ್ಗೆ ಹೇಳಿದ್ದಾರೆ.

ಬಿಜೆಪಿ-ಆರ್‌ಎಸ್‌ಎಸ್‌ಗೆ ಮನುಸ್ಮೃತಿಯಲ್ಲಿ ನಂಬಿಕೆಯಿದೆ, ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಎ‍ಳ್ಳಷ್ಟೂ ನಂಬಿಕೆಯಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಅವರು ಈ ದೇಶದಲ್ಲಿ 5,000 ವರ್ಷಗಳ ಹಿಂದಿನ ಸಾಮಾಜಿಕ ಶೋಷಣೆಯನ್ನು ಮುಂದುವರಿಸಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.

ಜಾತಿ ಗಣತಿ ಇಂದಿನ ಅಗತ್ಯವಾಗಿದ್ದು, ಇದರಿಂದ ಸಮಾಜದ ಕಟ್ಟಕಡೆಯ ಜನರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣವನ್ನು ಸಾಧಿಸಬಹುದಾಗಿದೆ ಎಂದು ಅವರು ಪ್ರತಿಪಾದಿಸಿದರು.

“ಬಿಜೆಪಿಯ ಅಸಲಿ ಮುಖ ಬಯಲಿಗೆ ಬಂದಿದೆ, ಹುತಾತ್ಮರ ಕುಟುಂಬದ ಮಗನಾಗಿರುವ ವ್ಯಕ್ತಿಗೆ ಈ ರೀತಿ ನಿಂದನೆ ಮಾಡುತ್ತಾರೆಂದರೆ ಇಂತಹ ಮನಸ್ಥಿತಿ ಬಿಜೆಪಿಯವರಿಗೆ ಮಾತ್ರ ಇರಲು ಸಾಧ್ಯ. ಅವು ರಾಹುಲ್‌ ಅವರಿಗೆ ನಿಮಗೆ ನಿಮ್ಮ ಜಾತಿ ಗೊತ್ತಿಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯ ತಂದೆ ಹುತಾತ್ಮ ಮತ್ತು ಈ ಕುಟುಂಬದ ಜಾತಿ ಹುತಾತ್ಮರ ಜಾತಿ, ಹುತಾತ್ಮರಾಗುವದು ಎಂದರೆ ಏನು ಎನ್ನುವುದು ಆರ್‌ಎಸ್‌ಎಸ್, ಬಿಜೆಪಿ ಮತ್ತು ಠಾಕೂರ್‌ಗೆ ಎಂದಿಗೂ ಅರ್ಥವಾಗುವುದಿಲ್ಲ” ಅರ್ಥವಾಗಲು ಸಾಧ್ಯವಿಲ್ಲ ಎಂದು ಪವನ್‌ ಖೇರಾ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು