Home ಮೀಡಿಯಾ “ನನ್ನ ಹಿನ್ನೆಲೆ” : ಮುನಿರತ್ನ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ಮುಖಂಡೆ ಕುಸುಮಾ ಹನುಮಂತರಾಯಪ್ಪ ಸ್ಪಷ್ಟನೆ

“ನನ್ನ ಹಿನ್ನೆಲೆ” : ಮುನಿರತ್ನ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ಮುಖಂಡೆ ಕುಸುಮಾ ಹನುಮಂತರಾಯಪ್ಪ ಸ್ಪಷ್ಟನೆ

0

ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಒಡೆದ ಪ್ರಕರಣ ಸುದ್ಧಿ ಆಗುತ್ತಿದ್ದಂತೆ ಶಾಸಕ ಮುನಿರತ್ನ ನೇರವಾಗಿ ಡಿಸಿಎಂ ಡಿ. ಕೆ. ಶಿವಕುಮಾರ್​, ಮಾಜಿ ಸಂಸದ ಡಿ. ಕೆ. ಸುರೇಶ್​, ಹನುಮಂತರಾಯಪ್ಪ, ಕುಸುಮಾ ಹನುಮಂತರಾಯಪ್ಪ ಅವರೇ ಕಾರಣ” ಎಂದು ಆರೋಪಿಸಿದ್ದಾರೆ. ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅಲ್ಲಗಳೆದಿದ್ದರೆ, ಕಾಂಗ್ರೆಸ್ ಮುಖಂಡೆ ಕುಸುಮಾ ಹನುಮಂತರಾಯಪ್ಪ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಮುನಿರತ್ನಗೆ ಟಾಂಗ್ ನೀಡಿದ್ದಾರೆ. ಅದರ ಸಾರಾಂಶ ಈ ಕೆಳಕಂಡಂತಿದೆ.

ನಾನು ಕುಸುಮ, ಇಂಜಿನಿಯರಿಂಗ್ ಹಾಗೂ ಎಂಎಸ್ ಸ್ನಾತಕೋತ್ತರ ಪದವಿಧರೆ, ಪ್ರಾಧ್ಯಪಕಿಯ ವೃತ್ತಿಯಲ್ಲಿದ್ದು ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ.

ಮಾಗಡಿ ಮೂಲದವರಾದ ನನ್ನ ತಾತ ಹನುಮೇಗೌಡ ಹಾಗೂ ಅಜ್ಜಿ ಪುಟ್ಟಮ್ಮ ಕೃಷಿಕರು. ಮಲ್ಲತ್ತಹಳ್ಳಿ ಮೂಲದ ಮತ್ತೊಬ್ಬ ತಾತ ಕೆಂಪಯ್ಯ ಮತ್ತು ಅಜ್ಜಿ ಗಂಗಮ್ಮ ಕೂಡ ಕೃಷಿಕರು.

ಇನ್ನೂ ನನ್ನ ತಂದೆ ಹನುಮಂತರಾಯಪ್ಪ ಬಿಎಂಟಿಸಿಯಲ್ಲಿ ಕಂಡಕ್ಟರ್ ವೃತ್ತಿಯಲ್ಲಿದ್ದವರು ಸ್ವಯಂನಿವೃತ್ತಿಯ ನಂತರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ, ತಾಯಿ ಭೈರಮ್ಮ ಗೃಹಿಣಿ.

ನನ್ನ ತಂಗಿ ಎಂಬಿಎ ಪದವಿಧರೆ. ಸಹೋದರ ಕೂಡ ಲಂಡನ್ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಕಾನೂನು ಪದವಿಧರ. ನನ್ನ ಹಿನ್ನೆಲೆ ಬಗ್ಗೆ ಮಾತನಾಡುವವರು ಒಮ್ಮೆ ಕಣ್ಣೆರೆದು ನೋಡಲಿ.

  1. ನಮ್ಮ ಕುಟುಂಬದಲ್ಲಿ ಯಾರೂ ಕೂಡ ಕ್ರಿಮಿನಲ್ ಹಿನ್ನಲೆಯುಳ್ಳವರಿಲ್ಲ.
  2. ಯಾರೂ ಕೂಡ ಜಾತಿ ನಿಂದನೆ ಮಾಡಿಲ್ಲ.
  3. ನನ್ನ ಕುಟುಂಬದ ಯಾರೊಬ್ಬರೂ ಕೂಡ ಹೆಣ್ಣುಮಕ್ಕಳ ಅವಹೇಳನ ಮಾಡಿಲ್ಲ.
  4. ನನ್ನ ಕುಟುಂಬದ ಯಾವೊಬ್ಬ ಸದಸ್ಯರೂ ರೇಪ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿಲ್ಲ.
  5. ನನ್ನ ಕುಟುಂಬದ ಯಾರೊಬ್ಬರೂ ಕಳ್ಳ ಬಿಲ್ ಮಾಡಿಸಿಕೊಂಡ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿಲ್ಲ.
  6. ನಾನು ದಲಿತರ ಬಗ್ಗೆ ಯಾವುದೇ ರೀತಿಯ ತುಚ್ಚ ಮಾತುಗಳನ್ನು ಎಂದಿಗೂ
  7. ನಮ್ಮ ಕುಟುಂಬದ ಯಾರೊಬ್ಬರೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿರಲಿಲ್ಲ.
  8. ನನ್ನ ವೈಯುಕ್ತಿಕ ಸ್ವಾರ್ಥ ಸಾಧನೆಗಾಗಿ ಯಾವ ಅಧಿಕಾರಿಗಳ ಅಮಾನತಿಗೆ ನಾನು ಕಾರಣಳಾಗಿಲ್ಲ.
  9. ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ಮನೆಗೆ ಕರೆದು ಹಣ ನೀಡುವಂತೆ ಹೆದರಿಸಲಿಲ್ಲ.
  10. ಹೆಚ್ಚಿನದಾಗಿ ನನ್ನ ಸಹೋದರನ ವೃತ್ತಿ ವಕೀಲಿಕೆ ನೆನಪಿರಲಿ, ಆತ ಯಾವುದೇ ರೌಡಿ ಶೀಟರ್ అల్ల.

ನನ್ನ ಬಗ್ಗೆ ಆಧಾರರಹಿತವಾಗಿ ಮಾತನಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ.

You cannot copy content of this page

Exit mobile version