ಹಾಸನ: ನಗರದ ಹೇಮಾವತಿ ಪ್ರತಿಮೆ ಮುಂದೆ ಪ್ರಗತಿಪರ ಸಂಘಟನೆಗಳು ಮನುಸ್ಮೃತಿಯನ್ನು ಪ್ರತಿಯನ್ನು ಸುಟ್ಟು, ಕೇಂದ್ರ ಗೃಹ ಸಚಿವಅಮಿತ್ ಶಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕರಾದ ಧರ್ಮೇಶ್ ಮತ್ತು ಹೆಚ್.ಕೆ. ಸಂದೇಶ್ ಮಾತನಾಡಿ, ಅಂಬೇಡ್ಕರ್‌ಎAದರೇ ನಮಗೆ ದೇವರಲ್ಲಅದು ವಿಚಾರ. ಅಂಬೇಡ್ಕರ್, ಅಂಬೇಡ್ಕರ್‌ಎಂದು ಹೇಳುವ ಬದಲುದೇವರೆಂದು ಹೇಳಿದ್ದರೇ ಸ್ವರ್ಗಕ್ಕೆ ಹೋಗುತ್ತಿದ್ದರು ಎಂದು ಕೇಂದ್ರ ಗೃಹ ಮಂತ್ರಿಅಮಿತ್ ಶಾ ಹೇಳಿದ್ದಾರೆ. ನೀವು ಅಂಬೇಡ್ಕರ್ ಹೇಳಿದರೇ ಇಡೀದೇಶವೇ ಸ್ವರ್ಗವಾಗುತ್ತದೆ. ಅಂಬೇಡ್ಕರ್‌ಎಂದರೇ ಪ್ರಜಾಪ್ರಭುತ್ವ. ಸಮಾನತೆ, ಸಮಾಜವಾದ. ಈ ದೇಶದಲ್ಲಿ ನಡೆಯುತ್ತಿದೆ. ಅಂಬೇಡ್ಕರ್ ವಿಚಾರಗಳ ಆದಾರದಲ್ಲಿ ನಡೆದರೇಕಂಡಿತವಾಗಿ ಭಾರತ ಸ್ವರ್ಗವಾಗುತ್ತದೆಎಂದರು. ಸ್ವರ್ಗ ಹುಡುಕಿಕೊಂಡು ಮೇಲೆ ಹೋಗುವಾಗಿಲ್ಲಎಂಬುದುಅಮಿತ್ ಶಾ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಜಾಪ್ರಭುತ್ವ ಮತು ಅಂಬೇಡ್ಕರ್ ಇರುವ ದೇಶ. ನೀವು ಪ್ರತಿನಿತ್ಯ ದೇವರ ಜಪ ಮಾಡುವುದನ್ನು ಬಿಟ್ಟುಅಂಬೇಡ್ಕರ್ ಹೆಸರು ಹೇಳಿ ಎಂದು ಗೃಹ ಮಂತ್ರಿ ಮತ್ತು ಪ್ರದಾನಿಗೆ ಹೇಳಿದರು.
ಸಂಘಟನೆಗಳ ಮುಖಂಡರು ಮನುಸ್ಮೃತಿ ವಿರುದ್ಧಕಿಡಿಕಾರುತ್ತಾ, ಅದು ಸಮಾನತೆಯನ್ನು ಹಾನಿ ಮಾಡುವ ಸಿದ್ಧಾಂತಗಳನ್ನು ಹೊಂದಿದ್ದು, ಸಮಾಜದ ಪ್ರಗತಿಗೆ ಅಡಚಣೆಯಾಗಿತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಮನುಸ್ಮöÈತಿಯನ್ನು ಸುಟ್ಟು ಸಮ ಸಮಾಜಕ್ಕೆ ನಾಂದಿ ಹಾಡಿದರುಎಂದರು.ಅಮಿತ್ ಶಾ ವಿರುದ್ಧಆಕ್ರೋಶ ವ್ಯಕ್ತಪಡಿಸಿದ ಅವರು, ಅವರ ಕೆಲವು ಹೇಳಿಕೆಗಳು ಸಂವಿಧಾನದ ತತ್ತಗಳಿಗೆ ವಿರುದ್ಧವಾಗಿದ್ದು, ಇದನ್ನುಗಂಭೀರವಾಗಿ ಪರಿಗಣಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಪ್ರತಿಭಟನೆಯು ಶಾಂತಿಯುತವಾಗಿ ನಡೆಯಿತು. ಮುಂದಿನ ದಿನಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲುತೀರ್ಮಾನಿಸಲಾಗಿದೆ.
ಇದೆ ವೇಳೆ ದಲಿತ ಮುಖಂಡರಾದ ಹೆಚ್.ಕೆ. ಸಂದೇಶ್, ರಮೇಶ್ ಹಾಸನ್, ಜೈಭೀಮ್ ಸಂಘಟನೆಜಿಲ್ಲಾಧ್ಯಕ್ಷರಾಜೇಶ್, ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್, ಹುಡಾ ಮಾಜಿಅಧ್ಯಕ್ಷಕೃಷ್ಣಕುಮಾರ್, ಜಗದೀಶ್, ಅರವಿಂದ್‌ಇತರರು ಉಪಸ್ಥಿತರಿದ್ದರು.