Tuesday, January 7, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ನಾಯಕರ ಭಾವಚಿತ್ರ ಸುಟ್ಟುಹಾಕಿ ಕಾಂಗ್ರೆಸ್ ಪ್ರತಿಭಟನೆ, ಆಕ್ರೋಶ

ಹಾಸನ: ಸಚಿವರಾದ ಪ್ರಿಯಾಂಕ ಖರ್ಗೆ ವಿರುದ್ಧ ಬಿಜೆಪಿ ನಾಯಕರು ಸುಳ್ಳು ಅಪಾದನೆ ಮಾಡುತ್ತಿರುವುದನ್ನು ಖಂಡಿಸಿ ಮೆರವಣಿಗೆ ಮೂಲಕ ಬಂದು ನಗರದ ಅಂಬೇಡ್ಕರ್ ಪ್ರತಿಮೆ ಮುಂದೆ ಕಾಂಗ್ರೆಸ್ ಅಖಿಲ ಕರ್ನಾಟಕ ಡಾ|| ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಬಳಗದಿಂದ ಮುಖ್ಯ ರಸ್ತೆ ಮಧ್ಯೆ ಬಿಜೆಪಿ ನಾಯಕರ ಭಾವಚಿತ್ರ ಸುಟ್ಟು ಹಾಕಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಎಂ. ರಸ್ತೆ ಮೂಲಕ ಜಿಲ್ಲಾ ಪಂಚಾಯತ್ ಮುಂದೆ ವೃತ್ತದ ಬಳಿ ಇರುವ ಅಂಭೇಡ್ಕರ್ ಪ್ರತಿಮೆ ಮುಂದೆ ಕೆಲ ಸಮಯ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿದರು. ನಂತರ ಕೈಲಿ ಇಡಿದಿದ್ದ ಬಿಜೆಪಿ ನಾಯಕರ ಭಾವಚಿತ್ರವನ್ನು ಒಂದೆಡೆ ಎಸೆದು ಅದಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಸುಡಲಾಯಿತು. ಇದೆ ವೇಳೆ
ಕಾಂಗ್ರೆಸ್ ಜಿಲ್ಲಾ ಎಸ್.ಸಿ. ಘಟಕದ ಅಧ್ಯಕ್ಷ ದ್ಯಾವಪ್ಪ ಮಲ್ಲಿಗೆವಾಳ್ ಮಾಧ್ಯಮದೊಂದಿಗೆ ಮಾತನಾಡಿ, ಸಚಿವರಾದ ಪ್ರಿಯಾಂಕ ಖರ್ಗೆ ವಿರುದ್ಧ ಸುಳ್ಳು ಆಪಾದನೆ ಮಾಡುತ್ತಿರುವ ಬಿ.ಜೆ.ಪಿ. ನಾಯಕರ ಷಢ್ಯಂತರವಾಗಿದೆ. ಇತ್ತೀಚೆಗೆ ಬೀದರ್‌ನಲ್ಲಿ ನಡೆದ ಗುತ್ತಿಗೆದಾರನಾದ ಸಚಿನ್ ಪಾಂಚಾಳ್ ಎಂಬ ವ್ಯಕ್ತಿಯ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬAಧಿಸಿದAತೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ. ರವಿ, ರವಿಕುಮಾರ್ ಇನ್ನು ಹಲವಾರು ಬಿ.ಜೆ.ಪಿ ಮುಖಂಡರು ವಿನಾಕಾರಣ ರಾಜಕೀಯ ಲಾಭಕ್ಕಾಗಿ ಮನಬಂದತ ವರ್ತಿಸುತ್ತಿರುವುದು ಸಾರ್ವಜನಿಕವಾಗಿ ಖಂಡಿಸುತ್ತೇವೆ ಎಂದರು. ನಾವು ಬೀದಿಗೀಳಿದರೇ ಬಿಜೆಪಿ ಕಥೆ ಏನಾಗುತ್ತದೆ ಬಗ್ಗೆ ನೋಡಬೇಕಾಗುತ್ತದೆ. ಈ ಬಿಜೆಪಿ ನಡವಳಿಕೆಯನ್ನು ಖಂಡಿಸುತ್ತೇವೆ. ಕೂಡಲೇ ಅವರ ಹರುಕು ಬಾಯಿತನವನ್ನು ನಿಲ್ಲಿಸಬೇಕು. ಸುಖ ಸುಮ್ಮನೆ ಸುಳ್ಳು ಆರೋಪವನ್ನು ಮಾಡುವುದನ್ನು ನಿಲ್ಲಿಸಲಿ. ಸಂಬಂಧಪಟ್ಟಂತೆ ತನಿಖೆ ಆಗುತ್ತದೆ.ಸಿಓಡಿಗೆ ಈಗಾಗಲೇ ಕೊಡಲಾಗಿದ್ದು, ತನಿಖೆ ನಂತರ ಸತ್ಯಸತ್ಯತೆ ಹೊರ ಬರಲಿದೆ. ನಂತರ ಅವರ ವಿರುದ್ಧ ಮುಷ್ಕರ ಮಾಡಲಿ ಎಂದು ಸಲಹೆ ನೀಡಿದರು.
ಪ್ರತಿಭಟನೆಯಲಿ ಅಖಿಲ ಕರ್ನಾಟಕ ಡಾ|| ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಬಳಗ ಜಿಲ್ಲಾಧ್ಯಕ್ಷ ಎಂ.ಕೆ. ಪರಮೇಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮ, ಹೆಚ್.ಎಂ. ಪ್ರಕಾಶ್, ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಮುಖಂಡರಾದ ರಾಮಚಂದ್ರ ಕಬಳಿ, ಕುಮಾರಸ್ವಾಮಿ, ರಘು ದಾಸರಕೊಪ್ಪಲು, ಚೆಲುವನಹಳ್ಳಿ ಶೇಖರಪ್ಪ, ವೆಂಕಟರಾಮು, ಕರುಣಾಕರ್, ಅಶೋಕ್ ನಾಯಕರಹಳ್ಳಿ, ಸೀಗೂರು ನಾಗರಾಜು, ಬಾಲು, ಶಿವಕುಮಾರ್, ಸಯ್ಯಾದ್ ಆರೀಫ್, ಅಶ್ರು, ಹರ್ಷ, ಲಕ್ಷಣ್, ಮನು ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page