ಬೆಂಗಳೂರು: ಶಾಪಿಂಗ್ ಮುಗಿಸಿದ ನಂತರ ಕ್ಯಾರಿ ಬ್ಯಾಗ್ ಒಂದಕ್ಕೆ ಗ್ರಾಹಕರಿಂದ 20 ರೂಪಾಯಿ ಪಡೆದ ತಪ್ಪಿಗೆ ಬಹುರಾಷ್ಟ್ರೀಯ ಕಂಪನಿ IKEA ಸಾವಿರ ರೂಪಾಯಿಗಳ ದಂಡ ತೆರಬೇಕಿದೆ.
ಬೆಂಗಳೂರಿನ ಸಂಗೀತಾ ಬೊಹ್ರಾ ಎನ್ನುವ ಮಹಿಳೆಯೊಬ್ಬರು ಬೆಂಗಳೂರಿನ IKEA ಸ್ಟೋರ್ ಮಾಲಿನಲ್ಲಿ ಶಾಪಿಂಗ್ ಮಾಡಿದ್ದರು. ಶಾಪಿಂಗ್ ಮುಗಿದ ನಂತರ ಬಿಲ್ ಮಾಡಿಸುವಾಗ ಅವರಿಗೆ ಕ್ಯಾರಿ ಬ್ಯಾಗ್ ಒಂದಕ್ಕೆ ಅವರು ಖರೀದಿಸಿದ ಸಾಮಾಗ್ರಿ ತುಂಬಿಸಿ ನೀಡಿದ ಸಿಬ್ಬಂದಿ ಕ್ಯಾರಿ ಬ್ಯಾಗಿಗೆ 20 ರೂಪಾಯಿ ಚಾರ್ಜ್ ಮಾಡಿದ್ದಾರೆ.
ತಾನು ಖರೀದಿಸಿದ ವಸ್ತುಗಳನ್ನು ತುಂಬಿಸಿಕೊಂಡು ಹೋಗಲು ಕಂಪನಿ ಅದರ ಲೋಗೊ ಇರುವ ಕ್ಯಾರಿ ಬ್ಯಾಗ್ ನೀಡಿ ಅದಕ್ಕೆ ಇಪ್ಪತ್ತು ರೂಪಾಯಿ ವಸೂಲಿ ಮಾಡುವುದನ್ನು ವಿರೋಧಿಸಿ ಪ್ರತಿಭಟಿಸಿದ್ದರು. ಆದರೆ ಇದಕ್ಕೆ ಅಲ್ಲಿನ ಆಡಳಿತ ವರ್ಗ ಸ್ಪಂದಿಸಿರಲಿಲ್ಲ.
ನಂತರ ಅವರು ಕಂಪನಿ ತನ್ನ ಲೋಗೊ ಹೊಂದಿರುವ ಕೈಚೀಲಕ್ಕೆ 20 ರೂಪಾಯಿ ಬೆಲೆ ವಿಧಿಸುತ್ತಿರುವುದು ಕಾನೂನು ಬಾಹಿರ ಎಂದು ಆರೋಪಿಸಿ ರಾಜ್ಯ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ಅರ್ಜಿದಾರರ ವಾದವನ್ನು ಆಲಿಸಿದ ಆಯೋಗವು ಈಗ ಕಂಪನಿಗೆ ಒಂದು
ತಿಂಗಳಿನೊಳಗೆ ಸಂಗೀತಾ ಅವರಿಗೆ 3,000 ರೂಪಾಯಿಗಳ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.