ಗೋಸುಂಬೆ ಗುಣದ ಬಿಜೆಪಿಯವರ ಡಬಲ್ ಸ್ಟ್ಯಾಂಡರ್ಡ್ ಬುದ್ದಿ ಹಲವು ಬಾರಿ ಸಾಬೀತಾಗಿದೆ. ಈಗ ಮತ್ತೊಂದು ನಿದರ್ಶನ ಸಿಕ್ಕಿದೆ. ಗ್ಯಾರಂಟಿ ಯೋಜನೆಗಳನ್ನು “ದಿವಾಳಿಯ ರೇವಡಿ“ ಎಂದು ಲೇವಡಿ ಮಾಡಿದ್ದರು. ನಂತರ ತಾವೇ ”ಮೋದಿ ಕಿ ಗ್ಯಾರಂಟಿ“ ಎನ್ನುತ್ತಾ ಗ್ಯಾರಂಟಿ ಪದವನ್ನು ಕದ್ದರು ಎಂದು ಬಿಜೆಪಿ ಗ್ಯಾರಂಟಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆದರು, ಝಾರ್ಖಂಡ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಕರ್ನಾಟಕ ಮಾದರಿಯನ್ನು ಅನುಸರಿಸಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಪ್ರಧಾನಿ ಮೋದಿಯವರು ಈಗ ಅದೇ ಗ್ಯಾರಂಟಿ ಮಾದರಿಯನ್ನು ಅನುಸರಿಸಿದ್ದನ್ನು ಹಿಪಾಕ್ರಸಿ ಎನ್ನಬೇಕೋ, ನಿರ್ಲಜ್ಜತನ ಎನ್ನಬೇಕೋ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಯಥಾವತ್ ನಕಲು ಮಾಡಿ ಝಾರ್ಖಂಡ್ ಚುನಾವಣೆಯ ಪ್ರಣಾಳಿಕೆ ತಯಾರಿಸಿರುವ ಬಿಜೆಪಿಯ ಈ ನಡೆಯ ಬಗ್ಗೆ ಪ್ರಹ್ಲಾದ್ ಜೋಷಿ ಅವರ ಪ್ರತಿಕ್ರಿಯೆ ಏನು? ಗ್ಯಾರಂಟಿಗಳನ್ನು ನಕಲು ಮಾಡಿರುವ ಬಗ್ಗೆ ನಾಯಕರ ಪ್ರತಿಕ್ರಿಯೆ ಕೇಳುವ ಕುತೂಹಲ ಹೆಚ್ಚಿದೆ ನನ್ನಲ್ಲಿ ಎನ್ನುವ ಮೂಲಕ ಗ್ಯಾರಂಟಿ ಯೋಜನೆಗಳ ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.