ಹಾಸನ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ ಅವರು ಹಂದಿಜೋಗಿ ಸಮುದಾಯ ಕಾಲೋನಿಗೆ ಭೇಟಿ ನೀಡಿ ಇಲ್ಲಿನ ಜನರ ಸಮಸ್ಯೆ ಆಲಿಸಿ ಇದುವರೆಗೂ ನಿವಾಸಿಗಳಿ ಹಕ್ಕುಪತ್ರ ಸಿಗದೆ ವಂಚಿತರಾಗಿ ಮಾಡಿದ ಅಧಿಕಾರಿಗಳ ವಿರುದ್ಧ ಅಸಮಧಾನವ್ಯಕ್ತಪಡಿಸಿದರು. ನಂತರ ಬಂಬೂ ಬಜಾರಿಗೆ ಭೇಟಿ ನೀಡಿ ಸಭೆ ನಡೆಸಿ ಸಮಸ್ಯೆ ಆಲಿಸಿ ಅಸಮಧಾನವ್ಯಕ್ತಪಡಿಸಿ ಬಗೆಹರಿಸುವ ಭರವಸೆ ನೀಡಿದರು.
ಮೊದಲು ಸಿದ್ದೇಶ್ವರ ನಗರದ ಹಂದಿಜೋಗಿ ಸಮುದಾಯ ಕಾಲೋನಿಗೆ ತೆರಳೀದ ಅವರು ಇಲ್ಲಿ ಬೀದ್ದಿರುವ ಹೆಂಚಿನ ಮನೆಗಳು, ಬೀಳುವ ಸ್ಥಿತಿಯಲ್ಲಿರುವ ಮನೆಗಳು, ಮನೆಮೇಲೆ ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ ಹಾಗೂ ಇದುವರೆಗೂ ಸಿಗದ ಹಕ್ಕು ಪತ್ರ ವಿಚಾರ ಕೇಳಿದ ಅಧ್ಯಕ್ಷರು ತಕ್ಷಣ ಸಂಬAಧಪಟ್ಟ ಅಧಿಕಾರಿಗೆ ಮೊಬೈಲ್ ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಕೂಡಲೇ ಸರಿಪಡಿಸುವಂತೆ ಸೂಚಿಸಿದರು. ಇದಾದ ನಂತರ ಬಂಬೂ ಬಜಾರಿಗೆ ತೆರಳಿ ಸಭೆಯಲ್ಲಿ ಪಾಲ್ಗೊಂಡು ಮನವಿ ಸ್ವೀಕರಿಸಿದರು. ನಂತರ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದವತಿಯಿಂದ ಹಾಸನ ಜಿಲ್ಲೆಯಲ್ಲಿ ನಮ್ಮ ನಿಗಮದಿಂದ ಅನುಷ್ಠಾನ ಮಾಡಿರುವಂತಹ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ಕುಂದುಕೊರತೆಗಳ ಸಭೆಯಲ್ಲಿ ವಿಷಯ ಚರ್ಚೆ ಮಾಡಲಾಗಿದೆ.
ಅಲೆಮೇರಿ ಮೇದಾ ಸಮುದಾಯ ಇರುವಂತಹ ಬಂಬೂ ಬಜಾರು ಭೇಟಿ ಮಾಡಲಾಗಿದೆ. ಇಲ್ಲಿರುವ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ನಾನೆ ಖುದ್ಧು ಪರಿಶೀಲನೆ ಮಾಡಿ ಸಮಸ್ಯೆ ಆಲಿಸುತ್ತಿದ್ದೇನೆ ಜೊತೆಗೆ ಹಂದಿ ಜೋಗಿ ಸಮುದಾಯ ಕಾಲೋನಿಗೂ ಕೂಡ ಭೇಟಿ ಮಾಡಿದ್ದು, ಸುಮಾರು 70 ವರ್ಷಗಳಿಂದ ಆ ಸ್ಥಳದಲ್ಲಿ 68 ಮನೆಗಳಿದ್ದು, ಇದುವರೆಗೂ ಹಕ್ಕುಪತ್ರ ಸಿಕ್ಕಿರುವುದಿಲ್ಲ. ಯಾರಿಗೆ ಕೇಳುವುದು ಎಂದು ತೊಂದರೆ ಅನುಭವಿಸುತ್ತಿದ್ದಾರೆ. ಇದುವರೆಗೂ ಹಕ್ಕು ಪತ್ರ ನೀಡಿರುವುದಿಲ್ಲ. ನಮ್ಮದು ಎಂದು ಒಂದು ಪತ್ರ ಇಲ್ಲ ಎಂದು ಮನವಿ ಮಾಡಿದ್ದಾರೆ ಎಂದರು. ಇಡೀ ರಾಜ್ಯದಲ್ಲಿ ಹಾಸನದ ಸ್ಥಿತಿಯನ್ನೆ ಕಾಣುತ್ತಿದ್ದೇವೆ. ಅಲೆಮಾರಿಗಳ ಮೂಲ ಸಮಸ್ಯೆ ಎಂದರೇ ನೆಲೆ ಇಲ್ಲ. ಇವರು ಯಾರು ಸೋಮಾರಿಗಳಲ್ಲ. ಪಾರಂಪರಿಕ ವೃತ್ತಿ ಮಾಡುತ್ತಿದ್ದಾರೆ. ಒಬ್ಬ ಮನುಷ್ಯನಿಗೆ ಹಕ್ಕು ಕೊಡುವುದು ನಮ್ಮ ಕರ್ತವ್ಯ. ಎಲ್ಲೆಲ್ಲಿ ಅಲೆಮಾರಿ ಎಸ್.ಸಿ.ಎಸ್.ಟಿ. ಅಲೆಮಾರಿ ಇದ್ದಾರೆ ಅವರಿಗೆ ನೆಲೆ ಕೊಡಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಸಮಾಜದಲ್ಲಿ ನೊಂದಂತಹ ಶೋಷಿತ ಧ್ವನಿ ಇಲ್ಲದಂತಹ ತಿಳುವಳಿಕೆ ಇಲ್ಲದಿರುವ ಸಮುದಾಯವನ್ನು ಮುಖ್ಯವಾಹಿನಿಗೆ ತರುವುದು ಸಮಾಜ ಕಲ್ಯಾಣ ಇಲಾಖೆಯ ಕರ್ತವ್ಯ. ಅಧಿಕಾರಿಗಳು ಕೆಲಸ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ನಿಗಮದಿಂದ ವಸತಿಗಾಗಿ ಹಣ ಕೊಡಲಾಗುತ್ತಿದೆ. ಭೂಮಿ ಇಲ್ಲದಿಲ್ಲದ ಮೇಲೆ ಮನೆ ಹೇಗೆ ಕೊಡುವುದು ಎಂದು ಪ್ರಶ್ನೆ ಮಾಡಿದರು. ಪರಿಶಿಷ್ಟ ಜಾತಿಗೆ ಸೇರಿದ ಹಲವು ಸಮುದಾಯಗಳ ಜನರು ಇಂದಿಗೂ ನಿವೇಶನಗಳು ಹಾಗೂ ವಸತಿ ಸೌಲಭ್ಯಗಳಿಂದ ಬಳಲುತ್ತಿದ್ದಾರೆ ಅಂತಹ ಸಣ್ಣ ಸಣ್ಣ ಸಮುದಾಯದ ಜನರೂ ಕೂಡ ವಸತಿಗಳನ್ನು ಹೊಂದಬೇಕು ಎಂಬ ಉದ್ದೇಶದಿಂದ ಸರ್ಕಾರ ಪ್ರತಿಯೊಂದು ಕುಟುಂಬಕ್ಕೂ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದರು. ರಾಜ್ಯಾದ್ಯಂತ ಪ್ರವಾಸ ಮಾಡಿ ಪ.ಜಾತಿ ಪ.ಪಂಗಡದ ಹಲವು ಸಣ್ಣ ಸಣ್ಣ ಸಮುದಾಯಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅವುಗಳನ್ನ ಪರಿಹರಿಸುವ ನಿಟ್ಟಿನಲ್ಲಿ ತಾನು ಕೆಲಸ ಮಾಡುತ್ತಿದ್ದೇನೆ, ಹಾಸನ ಜಿಲ್ಲೆಯಲ್ಲಿ ಕೂಡ ಹಲವು ಸಮಸ್ಯೆಗಳು ತನ್ನ ಗಮನಕ್ಕೆ ಬಂದಿದೆ ಕೂಡಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು. ಕುಡಿಯುವ ನೀರು, ವಿದ್ಯುತ್, ರಸ್ತೆ, ಒಳಚರಂಡಿ, ವ್ಯಾಪಾರ ವ್ಯವಹಾರಗಳಿಗೆ ಮತ್ತು ಮನುಷ್ಯ ಬದುಕಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಹಾಗೂ ಜಿಲ್ಲಾಡಳಿತದ ಕರ್ತವ್ಯ, ಆದುದರಿಂದ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಿ ಇಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.
ಇದೆ ವೇಳೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಬೂ ಬಜಾರಿನ ಮನೆಗಳನ್ನು ಎತ್ತಂಗಡಿ ಮಾಡಬೇಕೆಂದು ಕಳೆದ ಸರಕಾರದಲ್ಲಿ ನಿರ್ಧರಿಸಲಾಗಿತ್ತು. ಆದರೇ ತಾತ್ಕಾಲಿಕ ಖಾತೆಗಳನ್ನು ಶಾಶ್ವತ ಮಾಡಿಕೊಡಬೇಕು. ಮೂಲಭೂತ ಸೌಕರ್ಯ ಕಲ್ಪಿಸಬೇಕು. ಒಂದೊAದು ಕುಟುಂಬಕ್ಕೆ 20*40 ಅಳತೆಯ ಭೂಮಿ ಕೊಡಬೇಕು. ಪಟ್ಟಿ ಆಗಿದೆ. ಅವಕಾಶ ಇದ್ದರೇ ಸಲ್ಪ ಕಾನೂನು ಉಲ್ಲಂಘನೆ ಆದರೂ ಪರವಾಗಿಲ್ಲ. ಇವರಿಗೆ ಸೂರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು.ಇದೆ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ದೂದ್ ಫೀರ್, ನಗರಸಭೆ ಸದಸ್ಯ ಸಿ.ಆರ್. ಶಂಕರ್, ಹಂದಿಜೋಗಿ ಸಮುದಾಯದ ರಾಜ್ಯ ಉಪಾಧ್ಯಕ್ಷ ಗೋವಿಂದರಾಜು, ನಿಡುಗರಹಳ್ಳಿ ಸಿದ್ದಪ್ಪ, ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.