ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಂತಹ ಏಷ್ಯಾದ ದೇಶಗಳಲ್ಲಿ ಕಳೆದ ಕೆಲವು ವಾರಗಳಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಈ ದೇಶಗಳಲ್ಲಿನ ಆರೋಗ್ಯ ಅಧಿಕಾರಿಗಳ ಪ್ರಕಾರ, ಸೋಂಕಿಗೆ ಜನಸಂಖ್ಯೆಯ ಮಟ್ಟದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು ಮತ್ತು ಕಡಿಮೆ ವಯಸ್ಸಿನವರು ಬೂಸ್ಟರ್ ಚುಚ್ಚುಮದ್ದು ಪಡೆಯುವುದರಿಂದ ಈ ಹೆಚ್ಚಳ ಉಂಟಾಗಿರಬಹುದು ಎಂದು ಹೇಳಿದ್ದಾರೆ.
“ಸ್ಥಳೀಯವಾಗಿ ಹರಡುತ್ತಿರುವ ರೂಪಾಂತರಗಳ ಹೋಲಿಕೆಯಲ್ಲಿ ಹಿಂದೆ ಹರಡುವ ರೂಪಾಂತರಿ ವೈರಸ್ ನಲ್ಲಿ ಹೋಲಿಸಿದರೆ ಹೆಚ್ಚು ಹರಡುವ ಅಥವಾ ಹೆಚ್ಚು ತೀವ್ರವಾಗಿ ಹಾನಿ ಉಂಟುಮಾಡುವ ಯಾವುದೇ ಸೂಚನೆಯಿಲ್ಲ” ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ.
ಸಿಂಗಾಪುರದಲ್ಲಿ ಸಿಕ್ಕ ದತ್ತಾಂಶಗಳ ಮಾದರಿಯಲ್ಲಿ ವಾರದ ಹಿಂದೆ 11,100 ಪ್ರಕರಣ ಪತ್ತೆಯಾದರೆ ಒಂದು ವಾರದ ನಂತರ 14,200 ಪ್ರಕರಣ ಪತ್ತೆಯಾಗಿದೆ. ಈ ಅವಧಿಯಲ್ಲಿ ಸೋಂಕು ಕಾಣಿಸಿಕೊಂಡವರು ಆಸ್ಪತ್ರೆಗೆ ದಾಖಲಾದ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 102 ರಿಂದ 133 ಕ್ಕೆ ಏರಿದೆ. ಆದರೆ ಐಸಿಯುಗೆ ದೈನಂದಿನ ದಾಖಲಾತಿಗಳು 3 ರಿಂದ 2 ಕ್ಕೆ ಇಳಿಕೆ ಕಂಡುಬಂದಿದೆ.
ಭಾರತದಲ್ಲಿ ಈಗ ಹೆಚ್ಚಿನವರು ಕೋವಿಡ್ -19 ಪರೀಕ್ಷೆಗಳಿಗೆ ಒಳಗಾಗುತ್ತಿಲ್ಲವಾದರೂ, ಐಸಿಎಂಆರ್ ಪ್ರಯೋಗಾಲಯಗಳಿಂದ ಸಂಗ್ರಹಿಸಿದ ದತ್ತಾಂಶವು ಕಳೆದ ಕೆಲವು ವಾರಗಳಲ್ಲಿ ಕೋವಿಡ್ -19 ಸೋಂಕುಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ತೋರಿಸಿದೆ.
ಸೋಂಕು ಹೊಂದಿರುವವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು ಹಾಗೂ ನಿರೋಧಕ ಶಕ್ತಿಯ ಹೀನತೆ ಹೊಂದಿರುವವರೇ ಆಗಿದ್ದಾರೆ ಎಂದು ಹಾಂಕಾಂಗ್ ಆರೋಗ್ಯ ಇಲಾಖೆ ತಿಳಿಸಿದೆ. ಸಾರ್ವಜನಿಕರಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಮತ್ತು ಹಳೆಯ ಶಿಸ್ತುಗಳನ್ನು ಮತ್ತೆ ಅನುಸರಿಸುವಂತೆ ಸಲಹೆ ನೀಡಲಾಗಿದೆ.
ಇತ್ತ ಸಿಂಗಾಪುರದಲ್ಲಿಯೂ ಸ್ಥಿತಿ ಗಂಭೀರವಾಗುತ್ತಿದೆ. ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ಆಸ್ಪತ್ರೆಗಳ ದಾಖಲೆ ಪ್ರಕಾರ, ಸೋಂಕಿತರ ಸಂಖ್ಯೆಯಲ್ಲಿ ಶೇ. 25ರಷ್ಟು ಏರಿಕೆಯಾಗಿದೆ.