ಹೊಬಾರ್ಟ್ (ಆಸ್ಟ್ರೇಲಿಯಾ): ಟಿಟ್ವೆಂಟಿ ವಿಶ್ವಕಪ್-2022ರ ನಾಲ್ಕನೇ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 31 ರನ್ ಗಳಿಂದ ಮಣಿಸಿದ ಜಿಂಬಾಬ್ವೆ ಮಹತ್ವದ ಅಂಕಗಳನ್ನು ಸಂಗ್ರಹಿಸಿತು.
ಗೆಲ್ಲಲು 175 ರನ್ ಗಳಿಸಬೇಕಿದ್ದ ಐರ್ಲೆಂಡ್ ತಂಡ, ಜಿಂಬಾಬ್ವೆ ಬೌಲರ್‌ಗಳ ಮಾರಕ ಬೌಲಿಂಗ್ ಎದುರಿಸಲಾಗದೆ ಪರದಾಡಿದರು. ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಕರ್ಟೀಸ್ ಕ್ಯಾಂಪರ್, ಜಾರ್ಜ್ ಡಾಕ್ರೆಲ್, ಗೆರೇತ್ ಡಿಲೇನಿ ಉತ್ತಮ ಆರಂಭ ಗಳಿಸಿದರೂ ಬೇಗನೇ ಔಟಾಗಿ ಪೆವಿಲಿಯನ್‌ಗೆ ತೆರಳಿದರು. ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಾಬಾನಿ ಮೂರು ವಿಕೆಟ್ ಗಳಿಸಿ ಗಮನ ಸೆಳೆದರು.
ಟಾಸ್ ಗೆದ್ದ ಐರ್ಲೆಂಡ್ ತಂಡ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಜಿಂಬಾಬ್ವೆ ಸಿಕಂದರ್ ರಾಜಾ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು.
ಒಂದೆಡೆ ವಿಕೆಟ್ ಗಳು ಕುಸಿಯುತ್ತಿದ್ದರೂ, ನೆಲಕಚ್ಚಿ ಆಡಿದ ಸಿಕಂದರ್ ರಾಜಾ ಕೇವಲ 48 ಎಸೆತಗಳಲ್ಲಿ 82 ರನ್ ಗಳಿಸಿದರು. ಐದು ಬೌಂಡರಿ ಬಾರಿಸಿದ ಅವರು ಐದು ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದರು.
ಐರಿಷ್ ವೇಗದ ಬೌಲರ್ ಜೋಷ್ ಲಿಟ್ಲ್ ಮೂರು ವಿಕೆಟ್ ಪಡೆದು ಮಿಂಚಿದರು. ಮಾರ್ಕ್ ಅಡೇರ್, ಸಿಮಿ ಸಿಂಗ್ ತಲಾ ಎರಡು ವಿಕೆಟ್ ಗಳಿಸಿದರು.
ಸ್ಕೋರ್ ಕಾರ್ಡ್
ಜಿಂಬಾಬ್ವೆ : 174/7 (20)
ರೆಗಿನ್ಸ್ ಚಕಬ್ವಾ : 0(2), ಕ್ರೈಗ್ ಎರ್ವಿನ್ : 9(12), ವೆಸ್ಲೆ ಮದೆವೆರೆ : 22(19), ಸೀನ್ ವಿಲಿಯಮ್ಸ್ : 12(11), ಸಿಕಂದರ್, ರಾಜ಼ಾ : 82(48), ಮಿಲ್ಟೊನ್ ಶುಂಬಾ : 16(14), ರ‌್ಯಾನ್ ಬುರಿ : 1(4), ಲುಕ್ ಜೊಂಗ್ವೆ : 20(10), ಇತರೆ : 12
ಬೌಲಿಂಗ್
ಜೋಸುವ ಲಿಟ್ಲ್ : 4-0-24-3, ಮಾರ್ಕ್ ಅದೈರ್ : 4-0-39-2, ಬೆರ್ರಿ ಮೆಕ್‌ಕಾರ್ಥಿ : 4-0-24-0, ಕರ್ಟೀಸ್ ಕ್ಯಾಂಪೆರ್ : 3-0-29-0, ಸಿಮಿ ಸಿಂಗ್ : 3-0-31-2, ಗ್ಯಾರೆತ್ ಡೆಲಾನಿ : 2-0-21-0
ಐರ್ಲೆಂಡ್ 143/9(20)
ಪಾಲ್ ಸ್ಟಿರ್ಲಿಂಗ್ : 0(2), ಅ್ಯಂಡ್ರ್ಯೂ ಬಾಲ್ಬಿರ್ನಿ : 3(4), ಲೋರ್ಕೆನ್ ಟುಕರ್ : 11(11), ಹ್ಯಾರಿ ಟೆಕ್ಟರ್ : 1(4), ಕರ್ಟೀಸ್ ಕ್ಯಾಂಪರ್ : 27(22), ಜಾರ್ಜ್ ಡೋಕ್ರೆಲ್ : 24(20), ಮಾರ್ಕ್ ಅದೈರ್ : 9(10), ಸಿಮಿ ಸಿಂಗ್ : 0(1), ಬ್ಯಾರಿ ಮೆಕ್‌ಕಾರ್ಥಿ : 22(16), ಜೋಸುವ ಲಿಟ್ಲ್ : 7(11), ಇತರೆ : 15
ಬೌಲಿಂಗ್
ರಿಚರ್ಡ್ ನಾಗರವ : 4-0-22-2, ಟೆಂಡೈ ಚಟರ : 4-0-22-2, ಬ್ಲೆಸಿಂಗ್ ಮುಜಾರಬಾನಿ : 4-0-23-3, ಲುಕ್ ಜೋಗ್ವೆ : 2-0-24-0, ಸೀನ್ ವಿಲಿಯಮ್ಸ್ : 3-0-20-1, ಸಿಕಂದರ್ ರಾಜ಼ಾ : 3-0-22-1