ಹೊಸದಿಲ್ಲಿ: ದೇಶದಲ್ಲಿರುವ 28 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 1,861 ಮಂದಿ ಶಾಸಕರು ತಮ್ಮ ವಿರುದ್ಧ ದಾಖ ಲಾಗಿರುವ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 1,205 ಶಾಸಕರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ಇವೆ. ಈ ಬಗ್ಗೆ ಎಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾಮ್ಸ್ ಸಂಸ್ಥೆ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.
4,123 ಶಾಸಕರ ಪೈಕಿ 4,092 ಮಂದಿಯ ಅಫಿದವಿತ್ ಪರಿಶೀಲನೆ ನಡೆಸಿದಾಗ ಈ ಅಂಶ ಗೊತ್ತಾಗಿದೆ.
ಈ ಪಟ್ಟಿಯಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿ ಇದೆ. ಆ ರಾಜ್ಯದ 138 ಶಾಸಕರು (ಶೇ.79) ತಮ್ಮ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಘೋಷಿಸಿ ಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕೇರಳದಲ್ಲಿ 93, (ಶೇ.69), ತೆಲಂಗಾಣದ 82 (ಶೇ.69) ಶಾಸಕರ ವಿರುದ್ಧ ಕೇಸು ದಾಖಲಾಗಿದೆ.
ಕರ್ನಾಟಕಕ್ಕೆ 8ನೇ ಸ್ಥಾನದಲ್ಲಿದೆ. ರಾಜ್ಯದ 122 ಮಂದಿ ಶಾಸಕರ ವಿರುದ್ಧ ಕೇಸು ದಾಖಲಾಗಿದೆ. ಬಿಜೆಪಿಯ 1653 ಶಾಸಕರ ಪೈಕಿ 638, ಕಾಂಗ್ರೆಸ್‌ನ 646 ಶಾಸಕರ ಪೈಕಿ 436 ಶಾಸಕರು ತಮ್ಮ ವಿರುದ್ಧ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.