ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆಗಳನ್ನು ನಿರ್ಮಿಸುವುದು ಹೊಸದೇನಲ್ಲ. ಮೈದಾನದಲ್ಲಿ ಹಲವು ದಾಖಲೆಗಳನ್ನು ಮುರಿದ ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಯೂಟ್ಯೂಬಿಲ್ಲಿಯೂ ವಿಶ್ವದಾಖಲೆಯೊಂದನ್ನು ಮುರಿದಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ 24 ಗಂಟೆಗಳಲ್ಲಿ, ಅವರು 25 ಮಿಲಿಯನ್ ಚಂದಾದಾರರನ್ನು ಗಳಿಸಿದರು. ಇದೊಂದು ವಿಶ್ವ ದಾಖಲೆಯಾಗಿದೆ. ಪ್ರಸ್ತುತ, ರೊನಾಲ್ಡೊ ಅವರ ಯೂಟ್ಯೂಬ್ ಚಾನೆಲ್ ಸುಮಾರು 3 ಕೋಟಿ ಚಂದಾದಾರರನ್ನು ಹೊಂದಿದೆ.
ರೊನಾಲ್ಡೊ ಕಂಟೆಂಟ್ ಕ್ರಿಯೇಟರ್ ಆಗುವ ಆಲೋಚನೆಯೊಂದಿಗೆ ‘ಯುಆರ್ ಕ್ರಿಸ್ಟಿಯಾನೋ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಈ ಚಾನಲ್ ಪ್ರಾರಂಭವಾದ ಒಂದು ಗಂಟೆಯೊಳಗೆ 10 ಲಕ್ಷ ಚಂದಾದಾರರು ರೊನಾಲ್ಡೊ ಖಾತೆಯನ್ನು ಅನುಸರಿಸಿದ್ದಾರೆ. ಅದು ಅತಿವೇಗದ ಮಿಲಿಯನ್ ಚಂದಾದಾರರ ವಿಶ್ವ ದಾಖಲೆಯನ್ನು ಮುರಿಯಿತು. ಮತ್ತು 24 ಗಂಟೆಗಳಲ್ಲಿ ಯುಆರ್ ಕ್ರಿಸ್ಟಿಯಾನೋ ಚಾನೆಲ್‌ಗೆ ಚಂದಾದಾರರಾಗಿರುವವರ ಸಂಖ್ಯೆ ಎರಡು ಕೋಟಿ ತಲುಪಿದೆ. ಇದು ವಿಶ್ವ ದಾಖಲೆಯೂ ಹೌದು. ಪೋರ್ಚುಗೀಸ್ ಹೀರೋ ಒಂದು ದಿನದೊಳಗೆ ಗೋಲ್ಡನ್ ಪ್ಲೇ ಬಟನ್ ಪಡೆದರು.
ಕ್ರಿಸ್ಟಿಯಾನೊ ರೊನಾಲ್ಡೊ ಸಾಮಾಜಿಕ ಮಾಧ್ಯಮದಲ್ಲಿ 900 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. X, Instagram, Facebook, YouTube… ಎಲ್ಲಾ ಸೇರಿ 900 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರೊನಾಲ್ಡೊ ತನ್ನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ಕೂಡಲೇ 12 ವೀಡಿಯೊಗಳನ್ನು ಅಪ್ಲೋಡ್ ಮಾಡಿದರು. ರೊನಾಲ್ಡೊ ತಾನು ಮಾಡುವ ಎಲ್ಲವನ್ನೂ ಯೂಟ್ಯೂಬ್‌ನಲ್ಲಿ ಹಾಕುತ್ತಿದ್ದಾರೆ