ಉತ್ತರ ಕನ್ನಡ : ಬಸ್ ನಲ್ಲಿ (Bus) ಸಾಕಷ್ಟು ಜನ ಒಂದೂರಿನಿಂದ ಇನ್ನೊಂದು ಕಡೆಗೆ ಪ್ರಯಾಣ ಬೆಳೆಸುತ್ತಾರೆ. ತಮ್ಮ ಜೊತೆಗೆ ಒಂದಿಸ್ಟು ಲಗೇಜ್ ನ (Luggage) ಕೂಡ ಕೊಂಡಯ್ಯುತ್ತಾರೆ..ಆದ್ರೆ ಇಲ್ಲಿಬ್ಬರು ತಮ್ಮ ಲಗೇಜ್ ಬ್ಯಾಗ್ನಲ್ಲಿ ಒಂದು ಕೋಟಿ ರೂ. (1 crore) ನಗದನ್ನು ಸಾಗೀಸುವಾಗ ಸಿಕ್ಕಿಬಿದ್ದಿದ್ದಾನೆ.
ಹೌದು ಗೋವಾದಿಂದ ಬೆಂಗಳೂರಿನ ಹೊಸೂರಿಗೆ ಹೋಗುವ ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು ಈ ವೇಳೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಚೆಕ್‌ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ಮಾಡುತ್ತ ಪ್ರಯಾಣಿಕರ ಬ್ಯಾಗ್‌ಗಳನ್ನು ಚೆಕ್ ಮಾಡಿದ್ದಾರೆ. ಈ ಸಂದರ್ಭ ದಲ್ಲಿ ಕಲ್ಲೇಶ್ ಕುಮಾರ ಎಂಬಾತನ ಬ್ಯಾಗ್‌ನಲ್ಲಿ ಒಂದು ಕೋಟಿ ಹಣ ಸಿಕ್ಕಿದೆ. ಕಲ್ಲೇಶ್ ಕುಮಾರ್ ಮತ್ತು ಭಮ್ರು ಕುಮಾರ್ ಖಾಸಗಿ ಬಸ್‌ನಲ್ಲಿ ಹಣ ಸಾಗಿಸುತ್ತಿದ್ದು.ಇವರು ರಾಜಸ್ಥಾನ ಮೂಲದವರು ಎಂದು ತಿಳಿದು ಬಂದಿದೆ .ಇನ್ನು ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಾಗೂ , ಪೋಲಿಸರು ವಶಪಡಿಸಿಕೊಂಡ ಹಣವು ಇತರೆ ವ್ಯವಹಾರಗಳಿಗೆ, ರಾಜಕಾರಣಿಗಳು ಕೈವಾಡವೋ ಅಥವಾ ಅಕ್ರಮ ವಿಚಾರಕ್ಕೆ ಸಂಬಂಧಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇನ್ನು ಈ ಹಣದ ಬಗ್ಗೆ ಪೊಲೀಸರು ಆ ಇಬ್ಬರು ವ್ಯಕ್ತಿಗಳ ವಿಚಾರಣೆ ನೆಡೆಸಿ, ಈ ಹಣ ಯಾರದ್ದು ಯಾರಿಗೆ ಕೊಡಲು ಸಾಗಿಸುತ್ತಿದ್ದರು ಎಂಬುವುದನ್ನ ತನಿಕೆ ಮಾಡಬೇಕಾಗಿದೆ
