ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲಂ ಚೇಂಬರ್) ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಜಯಮಾಲಾ ಆಯ್ಕೆಯಾಗಿದ್ದಾರೆ. ನಡೆದ ಚುನಾವಣೆಯಲ್ಲಿ ಭಾ.ಮಾ. ಹರೀಶ್ ಅವರನ್ನು 170 ಮತಗಳ ಅಂತರದಿಂದ ಸೋಲಿಸಿ ಜಯಮಾಲಾ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಚಲಾವಣೆ ಆಗಿದ್ದು, ಇದರಲ್ಲಿ ಜಯಮಾಲಾ 512 ಮತಗಳನ್ನು ಪಡೆದು ಸ್ಪಷ್ಟ ಬಹುಮತದಿಂದ ಗೆಲುವು ದಾಖಲಿಸಿದ್ದಾರೆ. ಪ್ರತಿಸ್ಪರ್ಧಿ ಭಾ.ಮಾ. ಹರೀಶ್ ಅವರಿಗೆ ಉಳಿದ ಮತಗಳು ಲಭಿಸಿವೆ.
ಈ ಮೂಲಕ ಮುಂದಿನ ಅವಧಿಗೆ ಫಿಲಂ ಚೇಂಬರ್ ಅಧ್ಯಕ್ಷರಾಗಿರುವ ಜಯಮಾಲಾ ಅವರು, ಎರಡನೇ ಬಾರಿ ಈ ಸ್ಥಾನವನ್ನು ಅಲಂಕರಿಸಲಿದ್ದಾರೆ. ಈ ಹಿಂದೆ 2008ರಲ್ಲಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು ವಿಶೇಷವಾಗಿದೆ.
