Home ರಾಜ್ಯ ಚಿಕ್ಕಮಗಳೂರು ಎದೆ ಸೀಳಿದರೆ ಮೂರಕ್ಷರ ಇಲ್ಲದ ಮುಲ್ಲಾನಿಗೂ, ನೀಟ್‌ ಪರೀಕ್ಷೆಗೂ ಏನು ಸಂಬಂಧ? ಮತ್ತೆ ನಾಲಿಗೆ ಹರಿಬಿಟ್ಟ...

ಎದೆ ಸೀಳಿದರೆ ಮೂರಕ್ಷರ ಇಲ್ಲದ ಮುಲ್ಲಾನಿಗೂ, ನೀಟ್‌ ಪರೀಕ್ಷೆಗೂ ಏನು ಸಂಬಂಧ? ಮತ್ತೆ ನಾಲಿಗೆ ಹರಿಬಿಟ್ಟ ಸಿ ಟಿ ರವಿ

0

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪ್ರತಿಭಟನೆಯಲ್ಲಿ ‘ತುಕಡೆ ಗ್ಯಾಂಗ್’ ಮತ್ತು ಮುಸ್ಲಿಂ ಸಮುದಾಯದವರು ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ? ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ. ಆತ ಬಂದು ನೀಟ್ ವಿರುದ್ಧ ಹೋರಾಟ ಮಾಡುತ್ತಾನಂತೆ! ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ‘ಮೋದಿ ಹಟಾವೋ’ ಎಂದು ಘೋಷಣೆ ಕೂಗುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಮುಂದುವರಿದು ಮಾತನಾಡಿದ ಸಿ.ಟಿ. ರವಿ, “ಎದೆ ಸೀಳಿದರೆ ಮೂರು ಅಕ್ಷರ ಇಲ್ಲದವರು ನೀಟ್ ಪರೀಕ್ಷೆ ಬಗ್ಗೆ ಮಾತನಾಡುತ್ತಿದ್ದಾರೆ. ಸಿಎಎ (CAA) ಮತ್ತು ಎನ್‌ಆರ್‌ಸಿ (NRC) ವಿಚಾರಕ್ಕೂ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದಕ್ಕೂ ಏನು ಸಂಬಂಧ? ಸಿಎಎ ವಿರೋಧಿಗಳು ಹಾಗೂ ‘ಭಾರತ್ ತೇರೆ ತುಕಡೆ ಹೊಂಗೆ ಇನ್ಶಾ ಅಲ್ಲಾ’ ಎಂದು ಘೋಷಣೆ ಕೂಗಿದ ದೇಶವಿರೋಧಿ ತುಕಡೆ ಗ್ಯಾಂಗ್‌ಗಳು ಈ ಹೋರಾಟದಲ್ಲಿ ಭಾಗವಹಿಸಿ ಮಾತುಗಳನ್ನಾಡುತ್ತಿವೆ” ಎಂದು ಕಿಡಿಕಾರಿದ್ದಾರೆ.

You cannot copy content of this page

Exit mobile version