Home ರಾಜ್ಯ ಸಂಸ್ಕೃತಿ ಮಾರಾಟದ ಸರಕಾಗುತ್ತಿದೆ : ಡಾ. ಸಿದ್ದನಗೌಡ ಪಾಟೀಲ

ಸಂಸ್ಕೃತಿ ಮಾರಾಟದ ಸರಕಾಗುತ್ತಿದೆ : ಡಾ. ಸಿದ್ದನಗೌಡ ಪಾಟೀಲ

0

ಬೆಂಗಳೂರು: “ಸಂಸ್ಕೃತಿ ವಾಣಿಜ್ಯಕರಣಗೊಂಡಿದೆ., ಶತ್ರುಗಳು ಇಂದು ಕೋಮುವಾದ, ಜಾತಿವಾದದ ರೂಪದಲ್ಲಿ ನಮ್ಮೊಳಗೇ ಇದೆ, ಇವತ್ತಿನ ಸಂದರ್ಭದಲ್ಲಿ ಸಂಕಟಗಳನ್ನು ಅರ್ಥೈಸಿಕೊಂಡು ಎಲ್ಲಾ ಜನಚಳುವಳಿಯ ಸಂಘಟನೆಗಳು ಒಂದೆಡೆ ಸೇರಿ ಕುಳಿತು ಜೊತೆಜೊತೆಯಲಿ ಕೆಲಸ ಮಾಡಬೇಕಾಗಿದೆ,” ಎಂದು ಸಿದ್ದನಗೌಡ ಪಾಟೀಲರು ಹೇಳಿದರು.

‘ಸಮುದಾಯ -50: ಮನುಷ್ಯತ್ವದೆಡೆಗೆ ಸಮುದಾಯ ಜಾಥಾʼ ನಾಟಕೋತ್ಸವದ ನಾಲ್ಕನೇಯ ದಿನ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಿದ್ದನಗೌಡ ಪಾಟೀಲರು
“ವರ್ಗ ಶತ್ರುವನ್ನು, ಸಮಾಜದ ಶತ್ರುವನ್ನು ಗುರ್ತಿಸಿ ಅವರ ವಿರುದ್ಧ ನಮ್ಮ ಹಾಡು ನಾಟಕ ತಮಟೆ ಎಲ್ಲಾ ಸಿಡಿದೇಳಬೇಕಾಗುತ್ತದೆ,” ಎಂದು ಸಿದ್ದನಗೌಡ ಪಾಟೀಲರು ಎಚ್ಚರಿಸಿದರು.

ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ಸಂವಿಧಾನ ವಿರೋಧಿಗಳಿಂದ ಸಂವಿಧಾನ ಉಳಿಸಿಕೊಳ್ಳುವ ಕೆಲಸ ಆಗಬೇಕಾಗಿದೆ ಇಂದು ಚಳುವಳಿಗಳನ್ನ ವಿಭಜಿಸುವ, ವಿಘಟಿಸುವ ಕುತಂತ್ರ ನೆಡೆಯುತ್ತಿದೆ, ಇದನ್ನು ಅರ್ಥಮಾಡಿಕೊಂಡು ಹೋರಾಡಬೇಕಾಗಿದೆ, ನಾನೂ ಸಮುದಾಯದ ಭಾಗವಾಗಿದ್ದವನು ಸಮುದಾಯದ ಜಾಥಾಗಳಲ್ಲಿ ಭಾಗವಹಿಸಿ ಜನಚಳುವಳಿಗೆ ಬಂದವನು, ಇಂದು ಎಲ್ಲಾ ಜನಚಳುವಳಿಗಳು ಸಮುದಾಯದ ಜೊತೆ ಇವೆ, ಸಮುದಾಯ ಜನಚಳುವಳಿಗಳ ಜೊತೆ ಇದೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕವಯತ್ರಿ ಕೆ ಶರೀಫಾ, ಶಿವಮೊಗ್ಗ ಸಮುದಾಯದ ರಂಗ ನಿರ್ದೇಶಕ ಲಕ್ಷ್ಮಿ ನಾರಾಯಣ, ಸ್ಪಂದನ ತಂಡದ ಸುರೇಶ್ ಅನಗಳ್ಳಿ,
ರಮೇಶ್ ಸಾಲುಗುಂದಿ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು. ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ಪ್ರಭಾಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

You cannot copy content of this page

Exit mobile version