ಬರ್ಮಿಂಗ್ ಹ್ಯಾಮ್ : ಕಾಮನ್ ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡವು ತಮ್ಮ ಚೊಚ್ಚಲ ಪ್ರದರ್ಶನದಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದು, ಭಾರತ ತಂಡವು ಬೆಳ್ಳಿಗೆ ತೃಪ್ತಿ ಪಡೆದುಕೊಂಡಿದೆ.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಕಣಕ್ಕೆ ಇಳಿದ ಆಸ್ಟ್ರೇಲಿಯಾ ಆಟಾಗಾರ್ತಿ ಅಲಸ್ಯಾ ಹೀಲಿ 7 ರನ್ ಇರುವಾಗಲೇ ರೇಣುಕಾ ಸಿಂಗ್ ಬೌಲಿಂಗ್ ದಾಳಿಗೆ ಎಲ್ ಬಿಡಬ್ಲ್ಯು ಆಗಿ ಪೆವಿಲಿಯನ್ ಸೇರಿದರು. ಆದರೆ ಎರಡನೇ ವಿಕೆಟ್‌ಗೆ ಜೊತೆಯಾದ ಆರಂಭಿಕ ಆಟಗಾರ್ತಿ ಬೆತ್ ಮೂನಿ ಹಾಗೂ ನಾಯಕಿ ಮೆಗ್ ಲ್ಯಾನಿಂಗ್, 72 ರನ್ ಕಲೆಹಾಕಿದರೆ. ಮೂನಿ 41 ಎಸೆತಗಳಲ್ಲಿ 61 ರನ್ ಗಳಿಸಿದರು, ಅವರೊಂದಿಗೆ ಉತ್ತಮ ಪಾಟ್ನರಶಿಪ್ ಗಳಿಸಿದ ಮೆಗ್, 36 ರನ್ ಬಾರಿಸಿದರು. ಹೀಗಾಗಿ ಆಸಿಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು.
161 ಗುರಿಯತ್ತ ಸಾಗಿದ ಭಾರತ ತಂಡಕ್ಕೆ ಮೊದಲೇ ಆಘಾತಕ್ಕೆ ಸಿಲುಕಿತು. ಭಾರತ ತಂಡದ ಭರವಸೆಯ ಆಟಗಾರ್ತಿ ಸ್ಮೃತಿ ಮಂದಾನ 6 ರನ್ ಗಳಿಸಿ ಹಾಗೂ ಶೆಫಾಲಿ ವರ್ಮಾ 11 ರನ್ ಗಳಿಸಿ ತಂಡಕ್ಕೆ ಆಸರೆಯಾಗದೆ ಬೇಗ ಪವಲಿಯನ್ ಸೇರಿದರು. ಆದರೆ ಭರವಸೆ ಆಟವಾಡಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಯಾ ರಾಡ್ರಿಗಸ್ ತಂಡಕ್ಕೆ ಆಸರೆಯಾದರು. 96 ರನ್ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಗೆಲುವಿನ ಭರವಸೆ ಹುಟ್ಟಿಸಿದರು.
ಆದರೆ ಜೊತೆಯಾಟವನ್ನ ಬೇರ್ಪಡಿಸಿದ ಮೇಘನ್ ಸ್ಕಟ್ ಭಾರತದ ಗೆಲುವಿನ ಹಾದಿಯನ್ನು ದಿಕ್ಕುತಪ್ಪಿಸಿದರು. ನಂತರ ಬಂದ ಆಟಗಾರ್ತಿಯರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದ ಕಾರಣ 19.3 ಓವರ್ ಗಳಿಗೆ ಆಲ್ ಔಟ್ ಆಗಿ 152 ರನ್ ಕಲೆಹಾಕಿ ಆಸಿಸ್ ವಿರುದ್ಧ ಮಣಿದರು.
ಅತ್ಯತ್ತಮ ಪ್ರದರ್ಶನ ನೀಡಿದ ಆಸಿಸ್ ತಂಡ ಕಾಮನ್ ವೆಲ್ತ್ ಗೇಮ್ಸ್ ಮಹಿಳಿಯರ ಕ್ರಿಕೆಟ್ ನಲ್ಲಿ ದಾಖಲೆ ಮಾಡುವುದರೊಂದಿಗೆ ದೇಶಕ್ಕೆ ಚಿನ್ನದ ಪದಕಗಳಿಸಿ ಕೊಟ್ಟಿತು. ಇದರ ಜೊತೆಗೆ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಬೆಳ್ಳಿಗಳಿಸಿ ಅಷ್ಟಕ್ಕೆ ತೃಪ್ತಿಹೊಂದಿದೆ.