Home ವಿಶೇಷ ದೇಶಭಕ್ತ ಸೈಕಲ್ ಸಾಹು ಬರುತ್ತಿದ್ದಾರೆ….

ದೇಶಭಕ್ತ ಸೈಕಲ್ ಸಾಹು ಬರುತ್ತಿದ್ದಾರೆ….

0

ಬಿಹಾರ ಮೂಲದ ಸೈಕಲ್ ಯಾತ್ರಿಕ ಸಾಹುರವರು ದುಶ್ಚಟಗಳ ಹೋಗಲಾಡಿಸುವ ಸಲುವಾಗಿ ದೇಶವನ್ನು ಸೌಹಾರ್ಧಯುತವಾಗಿ ಕಟ್ಟುವ ಸಲುವಾಗಿ ಕಳೆದ 8 ವರ್ಷಗಳಿಂದಲೂ ದೇಶಾದ್ಯಂತ ಸೈಕಲ್ ಯಾತ್ರೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಬಿಹಾರದಿಂದ ಕನ್ಯಾಕುಮಾರಿಯವರೆಗು ಯಾತ್ರೆ ಆರಂಭಿಸಿದ್ದಾರೆ. ಇದೀಗ ಬೆಂಗಳೂರು ತಲುಪಲು ಮಂಗಳೂರು ಹಾಸನ ಕುಣಿಗಲ್ ಮೂಲಕ ಸಾಗುತ್ತಿದ್ದಾರೆ. ಬಿಹಾರದ ಪಾಟ್ನಾ ಮೂಲದ ಈ ಧನಯ್ ಸಾಹ್ ನಾಲ್ಕನೇ ಬಾರಿ ದೇಶವನ್ನು ಸುತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ, ಮುಂದಿನ ವಾರದಲ್ಲಿ ಬೆಂಗಳೂರು ತಲುಪಲಿದ್ದು ಇನ್ನು ಮೂರು ತಿಂಗಳುಗಳಲ್ಲಿ ಕನ್ಯಾಕುಮಾರಿ ತಲುಪಲಿದ್ದಾರೆ.

ಇಡೀ ದೇಶ ಜಾತಿ, ಮತ, ಧರ್ಮಗಳಿಂದ ಇಬ್ಬಾಗವಾಗಿ ಮನುಷ್ಯ ವಿರೋಧಿ ರಾಜರಣದಿಂದ ಮನುಷ್ಯ ಪ್ರೀತಿ ದೂರಾಗಿದೆ ಇದನ್ನು ಮತ್ತೆ ಮರಳಿ ಪಡೆಯಬೇಕು ಮತ್ತು ಯುವ ಜನತೆ ದುಷ್ಚಟಗಳಿಂದ ದೂರಾಗಿ ಸ್ವಾಮಿವಿವೇಕಾನಂದರ ದಾರಿಯತ್ತ ಸಾಗಬೇಕು ಎನ್ನುವ ಉದ್ದೇಶದಿಂದ ಬಿಹಾರದಿಂದ ಕನ್ಯಾಕುಮಾರಿಯವರೆಗೆ ತಮ್ಮ ಸೈಕಲ್ ಯಾತ್ರೆಯನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದಾರೆ.

ಆಟೋ ಶೈಲಿಯಲ್ಲಿ ಸೈಕಲ್ ವಿನ್ಯಾಸ

ಸೈಕಲ್ ಯಾತ್ರಿಕ ಸಾಹ್ ರವರು ತಮ್ಮ ಯಾತ್ರೆಯಲ್ಲಿ ಮಳೆ, ಗಾಳಿ, ಚಳಿ ಈ ಎಲ್ಲವನ್ನು ತಡೆಯುವ ಸಲವಾಗಿ ಆಟೋ ರೀತಿಯಯಲ್ಲ ತಮ್ಮ ಸೈಕಲ್‌ಅನ್ನು ವಿನ್ಯಾಸಗೊಳಿಸಿರುತ್ತಾರೆ. ಈ ಸೈಕಲ್ ಎಲ್ಲಾ ರೀತಿಯಯಲ್ಲಿ ಸಾಹ್ ರವರಿಗೆ ಸಹಕಾರಿಯಾಗಿದೆ ಇದನ್ನು ತಮ್ಮ ಊರಿನ ಯುವಕರು ವಿನ್ಯಾಸಗೊಳಿಸಿ ಇವರಿಗೆ ವಿತರಿಸಿರುತ್ತಾರೆ. ಇಡೀ ಸೈಕಲ್ ನ ಸುತ್ತಾ ಭಾರತದ ಮಹಾನ್ ಚೇತನಗಳ ಪೋಟೋಗಳಿವೆ. ಅದರಲ್ಲಿಯೂ ಡಾ.ಅಂಬೇಡ್ಕರ್ ರವರು ಜ್ಯೋತಿಬಾ ಪುಲೆ, ಗಾಂಧೀಜಿ, ಸುಭಾಷ್ ಚಂದ್ರಬೋಸ್, ಅಬ್ದುಲ್ ಕಲಾಂ ವಿವೇಕಾನಂದರ ಪೋಟೋಗಳಿಂದ ಸಿಂಗಾರಗೊಂಡಿರುತ್ತದೆ.

ಜನರು ಹೆಚ್ಚು ಪ್ರೀತಿ ಮಾಡುತ್ತಿದ್ದಾರೆ

ಕಳೆದ ಒಂದು ತಿಂಗಳುಗಳಿಂದ ಸಾವಿರ ಕಿ. ಮೀ. ಕ್ರಮಿಸುವಾಗಲೂ ಜನರು ಆಹಾರ, ಬಟ್ಟೆ, ಹಣ ಇನ್ನಿತರ ವಸ್ತುಗಳನ್ನು ಕೊಟ್ಟು ನನ್ನ ಪ್ರೀತಿಯಿಂದ ಕಾಣುತ್ತಿದ್ದಾರೆ, ಜನರ ಪ್ರೀತಿಗೆ ಶರಣು ಎನ್ನುತ್ತಾರೆ ಈ  ದೇಶಭಕ್ತ ಸೈಕಲ್  ಸಾಹು. ನಾನು ಹೋದಲ್ಲೆಲ್ಲಾ ಒಂದು ಮಾತು, ಜನರೊಂದಿಗೆ ಸಂವಾದವನ್ನು ನಡೆಸಿ ನನ್ನ ಕೈಲಾದ ಬದಲಾವಣೆಯನ್ನು ಮಾಡುತ್ತಿದ್ದಾರೆ. ನಾನು ಬದುಕಿರುವವರೆಗು ಈ ಕಾರ್ಯ ಮುಂದುವರೆಯುತ್ತದೆ ಎನ್ನುತ್ತಾರೆ ಸಾಹು.

You cannot copy content of this page

Exit mobile version