Home ರಾಜಕೀಯ ವಿಧಾನಸೌಧದಲ್ಲೇ ಡಿ.ಕೆ. ಶಿವಕುಮಾರ್‌ಗೆ ದಿಢೀರ್ ಅಸ್ವಸ್ಥ: ಬಿಪಿ ಏರುಪೇರು, ವೈದ್ಯರಿಂದ ಚಿಕಿತ್ಸೆ

ವಿಧಾನಸೌಧದಲ್ಲೇ ಡಿ.ಕೆ. ಶಿವಕುಮಾರ್‌ಗೆ ದಿಢೀರ್ ಅಸ್ವಸ್ಥ: ಬಿಪಿ ಏರುಪೇರು, ವೈದ್ಯರಿಂದ ಚಿಕಿತ್ಸೆ

0

ಬೆಂಗಳೂರು: ಬಿಡುವಿಲ್ಲದ ಕಾರ್ಯಕ್ರಮಗಳು ಹಾಗೂ ನಿರಂತರ ಕೆಲಸದ ಒತ್ತಡದ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಮಂಗಳವಾರ ದಿಡೀರ್ ಅಸ್ವಸ್ಥಗೊಂಡಿದ್ದಾರೆ.

ತಮ್ಮ ಕಚೇರಿಯಲ್ಲಿ ಕೆಲಸದಲ್ಲಿ ತೊಡಗಿದ್ದ ವೇಳೆ ಶಿವಕುಮಾರ್ ಅವರಿಗೆ ಏಕಾಏಕಿ ಆಯಾಸ ಹಾಗೂ ಸುಸ್ತು ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ವೈದ್ಯರ ತಂಡವನ್ನು ಕರೆಸಲಾಗಿದ್ದು, ತಪಾಸಣೆ ನಡೆಸಿ ಅಗತ್ಯ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿದೆ.

ಕಳೆದ ದಿನದಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು, ಮಂಗಳವಾರ ಬೆಳಗ್ಗೆಯೇ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ ಹಲವು ಸಭೆಗಳಲ್ಲಿ ಭಾಗವಹಿಸಿ ಸರ್ಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

ಸತತ ಓಡಾಟ ಹಾಗೂ ವಿಶ್ರಾಂತಿಯ ಕೊರತೆಯಿಂದ ದೈಹಿಕ ಬಳಲಿಕೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಕ್ತದೊತ್ತಡದಲ್ಲಿ ಏರುಪೇರು ಕಂಡುಬಂದಿದೆ ಎಂದು ತಿಳಿದುಬಂದಿದೆ. ವೈದ್ಯರ ತಕ್ಷಣದ ಚಿಕಿತ್ಸೆಯ ಬಳಿಕ ಅವರ ಬಿಪಿ ಕ್ರಮೇಣ ನಿಯಂತ್ರಣಕ್ಕೆ ಬಂದಿದ್ದು, ಆರೋಗ್ಯ ಸ್ಥಿತಿ ಸುಧಾರಿಸಿದೆ ಎನ್ನಲಾಗಿದೆ.

You cannot copy content of this page

Exit mobile version