Home ಬೆಂಗಳೂರು ಮುತ್ತಪ್ಪ ರೈ ಜೊತೆಗಿದ್ದು ಲೂಟಿ ಮಾಡುತ್ತಿದ್ದ ಮನುಷ್ಯನಿಗೆ ದುಡ್ಡಿನ ಅಮಲು ಹತ್ತಿದೆ: ಎಸ್‌ ಆರ್‌ ವಿಶ್ವನಾಥ್‌...

ಮುತ್ತಪ್ಪ ರೈ ಜೊತೆಗಿದ್ದು ಲೂಟಿ ಮಾಡುತ್ತಿದ್ದ ಮನುಷ್ಯನಿಗೆ ದುಡ್ಡಿನ ಅಮಲು ಹತ್ತಿದೆ: ಎಸ್‌ ಆರ್‌ ವಿಶ್ವನಾಥ್‌ ವಿರುದ್ಧ ಡಿವಿಎಸ್‌ ವಾಗ್ದಾಳಿ

0

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಕುರಿತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಪ್ರದೀಪ್ ಎಂಬುವರ ಜತೆ ನಡೆಸಿದ್ದಾರೆನ್ನಲಾದ ಆಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಆಡಿಯೊ ವಿವಾದ ಬೆನ್ನಲ್ಲೇ ಬಿಜೆಪಿಯ ಇಬ್ಬರು ಪ್ರಮುಖ ಒಕ್ಕಲಿಗ ನಾಯಕರಾದ ಡಿ.ವಿ.ಸದಾನಂದಗೌಡ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ತಮ್ಮ ವಿರುದ್ಧ ಟೀಕೆ ಮಾಡಿದ್ದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ವಿರುದ್ಧ ತೀವ್ರವಾಗಿ ಗುಡುಗಿರುವ ಸದಾನಂದಗೌಡರು, ವಿಶ್ವನಾಥ್ ಈ ಹಿಂದೆ ಭೂಗತ ಲೋಕದ ಡಾನ್ ಮುತ್ತಪ್ಪ ರೈ ಕೈಕೆಳಗೆ ಕೆಲಸ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದ ವ್ಯಕ್ತಿ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಗೂಂಡಾಗಿರಿ ಮಾಡುತ್ತಿದ್ದ ಮತ್ತು ಹಣ ಕೊಳ್ಳೆ ಹೊಡೆಯುವುದನ್ನೇ ಉದ್ಯೋಗವಾಗಿಸಿಕೊಂಡಿದ್ದ ವ್ಯಕ್ತಿಯ ಬಗ್ಗೆ ತಾವೇನು ಮಾತನಾಡುವುದು ಎಂದು ಡಿವಿಎಸ್ ಆಕ್ರೋಶ ಹೊರಹಾಕಿದ್ದಾರೆ. ತಾವು ಮುತ್ತಪ್ಪ ರೈ ವಿರುದ್ಧ ಹೋರಾಟ ನಡೆಸಿ ಬಂದವರಾಗಿದ್ದು, ವಿಶ್ವನಾಥ್‌ಗೆ ಸದ್ಯ ದುಡ್ಡಿನ ಅಮಲು ಹೆಚ್ಚಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ತಮ್ಮ ಜಾತಿಗೆ ಸಂಬಂಧಿಸಿದಂತೆ ವಿಶ್ವನಾಥ್ ನೀಡಿದ್ದಾರೆನ್ನಲಾದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಿಎಂ, ಯಲಹಂಕದಲ್ಲಿ ನಡೆದ ಕೆಂಪೇಗೌಡ ಜಯಂತಿಗೆ ತಮಗೆ ಹೋಗದಂತೆ ಕರೆ ಮಾಡಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.

ವಿಶ್ವನಾಥ್ ನನ್ನನ್ನು ಒಕ್ಕಲಿಗ ಅಲ್ಲ ಎನ್ನಲು ಅವರಾರು ಎಂದು ಪ್ರಶ್ನಿಸಿರುವ ಸದಾನಂದಗೌಡರು, ಈ ಅಪಮಾನದ ವಿರುದ್ಧ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆದಿವೆ ಮತ್ತು ಈ ಇಡೀ ವಿದ್ಯಮಾನವನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರುವುದಾಗಿ ಎಚ್ಚರಿಸಿದ್ದಾರೆ.

You cannot copy content of this page

Exit mobile version