Home ಬೆಂಗಳೂರು ಡಾ.ರಾಜ್ ಮತ್ತು ಪುನೀತ್ ರಾಜ್‌ಕುಮಾರ್‌ಗೆ ಪುಷ್ಪ ನಮನ

ಡಾ.ರಾಜ್ ಮತ್ತು ಪುನೀತ್ ರಾಜ್‌ಕುಮಾರ್‌ಗೆ ಪುಷ್ಪ ನಮನ

0

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನವು ಶುಕ್ರವಾರ ಆರಂಭವಾಗಲಿದ್ದು, ಮುಂದಿನ 10 ದಿನಗಳಲ್ಲಿ 10-15 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ತೋಟಗಾರಿಕೆ ಉಪನಿರ್ದೇಶಕಿ (ಲಾಲ್‌ಬಾಗ್) ಕುಸುಮಾ ಜಿ. ಹೇಳಿದ್ದಾರೆ.

ಈ ಕಾರ್ಯಕ್ರಮ ಸಿದ್ಧತೆಯ ಕುರಿತು ಮಾತನಾಡಿದ ಕುಸುಮಾ, ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ವಿದೇಶದಿಂದ ಸುಮಾರು 50 ವಿಧದ ಹೂಗಳು ಮತ್ತು ಇನ್ನೂ 50-60 ಬಗೆಯ ಸ್ಥಳಿಯ ಹೂಗಳು ಭಾಗಿಯಾಗಲಿವೆ ಎಂದು ಹೇಳಿದರು.

ಈ ಪ್ರದರ್ಶನದಲ್ಲಿ ಕನ್ನಡದ ಹೆಮ್ಮೆಯ ನಟ ಡಾ. ರಾಜ್‌ಕುಮಾರ್ ಮತ್ತು ಅವರ ಮಗ ಹಾಗೂ ನಟ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ಪುಷ್ಪ ನಮನ ಸಲ್ಲಿಸಲಾಗಿದೆ. ಈ ಇಬ್ಬರೂ ನಟರ ಜನಪ್ರಿಯ ಚಲನಚಿತ್ರಗಳ ಪಾತ್ರ ಪ್ರತಿಮೆಗಳನ್ನು ಸ್ಥಾಪಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕೆಲಸದ ದಿನದಲ್ಲಿ ಪ್ರವೇಶ ದರವು 70 ರೂ. ಆಗಿರುತ್ತದೆ. ಆದರೆ ರಜಾ ದಿನಗಳಲ್ಲಿ ಈ ಹಿಂದೆ 80 ರೂ.ಗಳಿದ್ದ ಪ್ರವೇಶ ದರವನ್ನು 75 ರೂ.ಗಳಿಗೆ ಕಡಿತಗೊಳಿಸಿರುವುದಾಗಿ, ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶಾಂತಿನಗರ ಬಸ್ ಟರ್ಮಿನಲ್ ಮತ್ತು ಜೆಸಿ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ನಿಲುಗಡೆಯು ಸೀಮಿತವಾಗಿರುವುದರಿಂದ, ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ವೀಕ್ಷಕರಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಉಪನಿರ್ದೇಶಕಿ ಕುಸುಮಾ ಜಿ. ಮನವಿ ಮಾಡಿದ್ದಾರೆ.

You cannot copy content of this page

Exit mobile version