ಕೊಡಗು, ಜ.01 : ಯರವ ಸಮುದಾಯದ (ಪರಿಶಿಷ್ಟ ಪಂಗಡ) 23 ವರ್ಷದ ಯುವಕನನ್ನು ತನ್ನ ತೋಟದಿಂದ ಹಲಸಿನ ಹಣ್ಣು ಕೀಳುತ್ತಿದ್ದ ಎಂಬ ಕಾರಣಕ್ಕಾಗಿ ತೋಟದ ಮಾಲೀಕ ಗುಂಡಿಕ್ಕಿ ಕೊಂದಿದ್ದಾನೆ. ಡಿಸೆಂಬರ್ 27 ರಂದು ಕೊಡಗು ಜಿಲ್ಲೆಯ ಕರ್ನಾಟಕದ ಚೆಂಬೆಬೆಳ್ಳೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಪಣಿಯೆರವರ ಮೊನ್ನಣ್ಣ ಎಂಬ ಹುಡುಗ ʼಪೊರುಕೊಂಡ ಚಿನ್ನಪ್ಪ ಎಂಬುವರ ಒಡೆತನದ ಕಾಫಿತೋಟದಲ್ಲಿ ಕಾರ್ಮಿಕನಾಗಿದ್ದ. ಹಾಲಸು ಕಿತ್ತಿದ್ದಕ್ಕಾಗಿ ಚಿನ್ನಪ್ಪ ಜಾತಿ ನಿಂದನೆ ಮಾಡಿ ನಂತರ ತನ್ನ ಡಬಲ್ ಬ್ಯಾರೆಲ್ ಶಾಟ್ ಗನ್ ನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಎನ್ನಾಲಗಿದೆ.
ಎಫ್ ಐ ಆರ್ ಪ್ರಕಾರ ಪೊನ್ನಣ್ಣ ಮತ್ತು ಆತನ ಪತ್ನಿ ಗೀತ ಕೆಲಸ ಮುಗಿದ ಮೇಲೆ ಅದೇ ತೋಟದಲ್ಲಿ ಹಲಸಿನ ಹಣ್ಣು ಕೀಳುತ್ತಿದ್ದಾಗ ಚಿನ್ನಪ್ಪ ಡಬಲ್ ಬ್ಯಾರೆಲ್‌ಶಾಟ್ ಗನ್ ನೊಂದಿಗೆ ಬಂದು ಜಾತಿ ನಿಂದನೆ ಮಾಡಿ ಗುಂಡು ಹಾರಿಸಿದ್ದಾರೆ. ಇದರಿಂದ ಮರದಿಂದ ಕೆಳಗೆ ಬಿದ್ದ ಪೊನ್ನಣ್ಣನಿಗೆ ತೀರ್ವ ಗಾಯಗಳಾಗಿವೆ. ಚಿನ್ನಣ್ಣ ಅಲ್ಲಿಂದ ನಿರ್ಗಮಿಸಿದ ಮೇಲೆ ತೋಟದ ಮಾಲೀಕ ಪೋರುಕೊಂಡ ಬನ್ಸಿ ಪೂಣಚ್ಚ ಅವರು ಪೊನ್ನಣ್ಣನನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಆಸ್ಪತ್ರೆಗೆ ಸೇರುವ ಮೊದಲೇ ಪೊನ್ನಣ್ಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸರು ಚಿನ್ನಪ್ಪನನ್ನು ಬಂಧಿಸಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.
ಚಿನ್ನಪ್ಪನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) (ಕೊಲೆ), ಪರಿಷ್ಕೃತ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(v) (ಎಸ್‌ಸಿ/ಎಸ್‌ಟಿ ವ್ಯಕ್ತಿಯ ವಿರುದ್ಧದ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತು ಸೆಕ್ಷನ್ 3 (ಪರವಾನಗಿ ಇಲ್ಲದೆ ಬಂದೂಕು ಒಯ್ಯುವುದು) ಮತ್ತು ಸೆಕ್ಷನ್ 25 (ಅಪರಾಧಗಳಿಗೆ ಶಿಕ್ಷೆ ಭಾರತೀಯ ಶಸ್ತ್ರಾಸ್ತ್ರ ಕಾಯಿದೆ) ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದೇ ವೇಳೆ ಸಿಪಿಐ(ಎಂಎಲ್) ಮುಖಂಡರು ಹಾಗೂ ಆದಿವಾಸಿ ಸಂಘರ್ಷ ಮೋರ್ಚಾದ ಸದಸ್ಯರು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್, ಜಿಲ್ಲಾ ಐಟಿಡಿಪಿ ಅಧಿಕಾರಿ ಹೊನ್ನೇಗೌಡ ಅವರನ್ನು ಭೇಟಿ ಮಾಡಿ ಪೊನ್ನಣ್ಣ ಕುಟುಂಬಕ್ಕೆ ಹಾಗೂ ಯರವ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಚಿನ್ನಪ್ಪನ ಶಿಕ್ಷೆಗೆ ತ್ವರಿತ ತನಿಖೆ ಮತ್ತು ವಿಚಾರಣೆ ಹಾಗೂ ಪೊನ್ನಣ್ಣನ ಕುಟುಂಬಕ್ಕೆ ರೂ 20 ಲಕ್ಷ ಪರಿಹಾರ, ಪೊನ್ನಣ್ಣನ ಪತ್ನಿ ಗೀತಾಗೆ ಸರ್ಕಾರಿ ಉದ್ಯೋಗ, ಕುಟುಂಬಕ್ಕೆ ವಸತಿ ಮತ್ತು ಪೊನ್ನಣ್ಣನ ಕಿರಿಯ ಸಹೋದರನಿಗೆ ಶಿಕ್ಷಣದ ಬೆಂಬಲ ನೀಡಬೇಕು ಎಂಬು ಭೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ʼದ ನ್ಯೂಸ್ ಮಿನಿಟ್ʼ ನಲ್ಲಿ ಸುದ್ದಿ ಪ್ರಕಟವಾಗಿದ್ದು ಹೆಚ್ಚನ ಮಾಹಿತಿಗಳು ಇನ್ನಷ್ಟು ಬರಬೇಕಿದೆ.