ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಧಿಕಾರಾವಧಿ ಸದ್ಯದಲ್ಲೇ ಮುಗಿಯಲಿದ್ದು, ಎರಡನೇ ಅವಧಿಗೂ ಮುಂದುವರೆಯುವ ಬಗ್ಗೆ ವಿಜಯೇಂದ್ರ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಆಂತರಿಕ ಕಲಹವೇ ಈಗ ವಿಜಯೇಂದ್ರ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇತ್ತ ಮಗನನ್ನು ಇನ್ನೊಂದು ಅವಧಿಗೂ ರಾಜ್ಯಾಧ್ಯಕ್ಷನನ್ನಾಗಿ ಮುಂದುವರೆಸಿದರೆ, ಮುಂದಿನ ಚುನಾವಣೆಗೂ ವಿಜಯೇಂದ್ರರಿಗೆ ದೊಡ್ಡ ಜವಾಬ್ಧಾರಿ ಸಿಕ್ಕಂತಾಗಲಿದೆ ಎಂಬ ಉದ್ದೇಶ ಯಡಿಯೂರಪ್ಪ ಹೊಂದಿದ್ದು, ಹೈಕಮಾಂಡ್ ಮಟ್ಟದಲ್ಲಿ ಮಾತುಕತೆಗೆ ಮುಂದಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಬಂಡಾಯವೆದ್ದಿದ್ದಾರೆ. ಹೀಗಾಗಿ ಮತ್ತೆ ಅವರನ್ನೇ ಮುಂದುವರಿಸಿದರೆ ಈ ನಾಯಕರ ಆಕ್ರೋಶ ಹೆಚ್ಚಾಗುವುದು ಖಚಿತ. ಈ ಹಿನ್ನಲೆಯಲ್ಲಿ ವಿಜಯೇಂದ್ರ ವಿಚಾರದಲ್ಲಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯಿಡಬೇಕಾಗುತ್ತದೆ.ಆದರೆ ಅಷ್ಟು ಸುಲಭವಾಗಿ ರಾಜ್ಯ ಬಿಜೆಪಿ ಚುಕ್ಕಾಣಿ ತಮ್ಮ ಕೈ ತಪ್ಪಿ ಹೋಗಲು ಬಿಎಸ್ ಯಡಿಯೂರಪ್ಪ ಬಿಡಲ್ಲ ಎನ್ನುವುದೂ ಅಷ್ಟೇ ಸತ್ಯ.