ಹಾಸನ : ನಮ್ಮ ಜೀವನದ ನಿಜವಾದ ಆಸ್ತಿ ಎಂದರೆ ಆರೋಗ್ಯ. ಚಾಲಕರಾಗಿರಲಿ, ವೈದ್ಯರಾಗಿರಲಿ, ಅಧಿಕಾರಿಗಳಾಗಿರಲಿ, ಯಾರೆ ಆಗಿರಲಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಾಹನ ಚಾಲಕರಿಗೆ ಆರೋಗ್ಯ ತಪಾಸಣೆ ಹಾಗೂ ಹೃದಯಘಾತ ತಡೆ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರವನ್ನು ಗಿಡಕ್ಕೆ ನೀರು ಹಾಕಿ ಮಾತನಾಡಿದ ಅವರು, ಚಾಲಕರು ಎಂದರೇ ಒತ್ತಡವಾಗಿ ಕೆಲಸ ಮಾಡಬೇಕು. ರಾತ್ರಿ ಎಲ್ಲಾ ನಿದ್ದೆ ಇರುವುದಿಲ್ಲ. ಸರಿಯಾದ ಆಹಾರ ಸೇವನೆ ಮಾಡುವುದಿಲ್ಲ. ಆರೋಗ್ಯದ ಕಡೆ ಗಮನ ಇರುವುದಿಲ್ಲ. ಎಲ್ಲಾದಕ್ಕಿಂತ ಹೆಚ್ಚಾಗಿ ಒತ್ತಡ ಇರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ ಹೃದಯ ಸಂಬಂಧಿ ಖಾಯಿಲೆಗಳು ಬಂದಾಗ ಜೀವನಶೈಲಿಗೆ ನೇರವಾಗಿ ಕಾರಣ ಆಗಿರುತ್ತದೆ. ಈ ಕಾರ್ಯಕ್ರಮ ಚಾಲಕರಿಗಾಗಿ ಏರ್ಪಡಿಸಿದ್ದು, ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ವಾಹನ ಚಾಲಕರಿಗೆ ಆರೋಗ್ಯ ತಪಾಸಣೆ ಇದ್ದರೂ ಅವರು ಇಲ್ಲಿಗೆ ಬರುವುದಕ್ಕೆ ಭಯವಾಗುತ್ತಿದ್ದು, ಏನಾದರೂ ಹೇಳಿಬಿಟ್ಟರೇ, ಏನಾದರೂ ಇದ್ದು ಬಿಟ್ಟರೇ ಒಂದು ಹಿಂಜರಿಕೆ ಮೂಡಿದೆ. ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು. ಜೀವನ ಹೇಗೆ ಇದ್ದರೂ ನಡೆಯುತ್ತದೆ. ಆ ಜೀವನ ಚನ್ನಾಗಿ ನಡೆಯಬೇಕು ಎಂದರೇ ದೇಹದ ಆರೋಗ್ಯ ತುಂಬ ಮುಖ್ಯ. ಅದೆ ರೀತಿ ಮಾನಸಿಕ ಆರೋಗ್ಯ ಕೂಡ ಅಷ್ಟೆ ಮುಖ್ಯ ಎಂದು ಕಿವಿಮಾತು ಹೇಳಿದರು. ಆರೋಗ್ಯದ ಜೀವನ ಎಂದರೇ ಏನು? ನಮ್ಮ ಜೀವನದ ನಿಜವಾದ ಆಸ್ತಿ ಎಂದರೇ ಏನು? ಆರೋಗ್ಯ. ದೇಹವೇ ದೇಗುಲ. ನಾವು ಏತಕ್ಕಾಗಿ ದುಡಿಮೆ ಮಾಡುತ್ತಿದ್ದೇವೆ ? ಏತಕ್ಕಾಗಿ ಬೇರೆಯವರಿಗೆ ಸಹಾಯ ಮಾಡುತ್ತೇವೆ. ನಾನು ಚನ್ನಾಗಿ ಇದ್ದರೇ ತಾನೆ ಬೇರೆಯವರಿಗೆ ಸಹಾಯ ಮಾಡಬಹುದು. ಕೆಲಸ ಮಾಡಬಹುದು, ಕುಟುಂಬ ನೋಡಬಹುದು, ಸಮಾಜ ನೋಡಬಹುದು, ಆರೋಗ್ಯನೇ ಸರಿಯಿಲ್ಲ ಎಂದರೇ ಏನು ಮಾಡುವುದು ಅವರು ಚಾಲಕರಾಗಿರಲಿ, ವೈದ್ಯರಾಗಿರಲಿ, ಅಧಿಕಾರಿಗಳಾಗಿರಲಿ, ಯಾರೆ ಆಗಿರಲಿ ಆರೋಗ್ಯ ತುಂಬ ಮುಖ್ಯ. ಈ ನಿಟ್ಟಿನಲ್ಲಿ ಇಂತಹ ಆರೋಗ್ಯ ಮೇಳ ಏರ್ಪಡಿಸಲು ಸಹಕರಿಸಿರುವ ಆರೋಗ್ಯ ಕುಟುಂಬ ಇಲಾಖೆಯ ಎಲ್ಲಾರಿಗೂ ಅಭಿನಂದನೆ ಹೇಳುತ್ತೇನೆ ಎಂದು ಹೇಳಿದರು. ಇನ್ನು ಚಾಲಕರಿಗೆ ಅನೇಕ ಯೋಜನೆಗಳಿದ್ದು, ಜೊತೆಗೆ ವಿಮೆಯನ್ನು ಪಡೆಯುವ ಮೂಲಕ ಅದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಾಗೂರು, ಹಿಮ್ಸ್ ಜಿಲ್ಲಾ ಶಸ್ತçಚಿಕಿತ್ಸಕ ಡಾ. ನಾಗಪ್ಪ, ವೈದ್ಯಕೀಯ ಅಧೀಕ್ಷಕ ರಾಘವೇಂದ್ರ, ಜಿಲ್ಲಾ ಆಯುಷ್ ಅಧಿಕಾರಿ ವಸುದೇವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ಲತಾ ಸರಸ್ವತಿ, ಆಯುಷ್ ಸಂಘದ ವೈದ್ಯಾಧೀಕಾರಿ ಡಾ. ಲಕ್ಷಿ÷್ಮÃಕಾಂತ್, ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್, ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶ್ರೀರಂಗ ಡಾಂಗೆ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ವಿಜಯಗುರು, ಫನಾ ಅಧ್ಯಕ್ಷ ಡಾ. ಯತೀಶ್, ಆರ್.ಸಿ.ಹೆಚ್. ಅಧಿಕಾರಿ ಡಾ. ಶಿವಶಂಕರ್ ಇತರರು ಉಪಸ್ಥಿತರಿದ್ದರು.