Home ರಾಜ್ಯ ದಕ್ಷಿಣ ಕನ್ನಡ ಪದ್ಮಲಾತ ಕೇಸ್ ಮರು ತನಿಖೆಗೆ ಎಸ್ ಐ ಟಿ (SIT) ಅಧಿಕಾರಿಗಳಿಗೆ ಮೃತಳ ಸಹೋದರಿ ದೂರು

ಪದ್ಮಲಾತ ಕೇಸ್ ಮರು ತನಿಖೆಗೆ ಎಸ್ ಐ ಟಿ (SIT) ಅಧಿಕಾರಿಗಳಿಗೆ ಮೃತಳ ಸಹೋದರಿ ದೂರು

ದಕ್ಷಿಣ ಕನ್ನಡ : ಧರ್ಮಸ್ಥಳ ಅಸಹಜ (Dharmasthala Case) ಸಾವು ಪ್ರಕರಣ ಹೊಸ ಹೊಸ ತಿರುಹು ಪಡೆದುಕೊಳ್ಳುತ್ತಿದ್ದು, ಇದೀಗ 39ವರ್ಷದ ಹಿಂದೆ ಸಾವನ್ನಪ್ಪಿದ ಪದ್ಮಲಾತ ಕೇಸ್ ಅನ್ನು ಮರು ತನಿಖೆ ಮಾಡುವಂತೆ ಎಸ್ ಐ ಟಿ (SIT) ಅಧಿಕಾರಿಗಳಿಗೆ ಮೃತಳ ಸಹೋದರಿ ದೂರು ನೀಡಿದ್ದಾರೆ.

ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಬೆನ್ನಲ್ಲೇ 39ವರ್ಷದ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಪದ್ಮಲತಾ ಅವರ ಅಕ್ಕ ಇಂದ್ರಾವತಿ ಅವರು ಬೆಳ್ತಂಗಡಿಯಲ್ಲಿರುವ ಎಸ್ ಐಟಿ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ನಾನು ಪ್ರಸ್ತುತ ನೆಲ್ಯಾಡಿ ನಿವಾಸಿಯಾಗಿದ್ದು, ದಿವಂಗತ ದೇವಾನಂದ ಅವರ ಮಗಳು. ಕೊಲೆಗೀಡಾದ ಪದ್ಮಲತಾಳ ಅಕ್ಕ. ಕಳೆದ 39 ವರ್ಷಗಳ ಹಿಂದೆ ಎಸ್‌ಡಿಎಂ ಕಾಲೇಜು ಉಜಿರೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ನನ್ನ ತಂಗಿ ಪದ್ಮಲತಾ ದಿನಾಂಕ 22.12.1986ರಂದು ಉಜಿರೆ ಕಾಲೇಜಿಗೆ ಹೋದವಳು ಸಂಜೆ ಧರ್ಮಸ್ಥಳ ತನಕ ಬಂದು ನಾಪತ್ತೆಯಾಗಿದ್ದಾಳೆ.

ಇದಾಗಿ 56 ದಿನಗಳ ಬಳಿಕ ಆಕೆಯ ಮೃತದೇಹ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಇನ್ನು ಕೂಡ ನ್ಯಾಯ ಸಿಗಲಿಲ್ಲ.. ಆದ್ದರಿಂದ ನನ್ನ ತಂಗಿಯ ಪ್ರಕರಣವನ್ನು ರಿ – ಓಪನ್ ಮಾಡಿ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

You cannot copy content of this page

Exit mobile version