Home ವಿದೇಶ ರೀಲ್ಸ್‌ ಮಾಡಲು ಪದವಿ ಕಡ್ಡಾಯ! ತಪ್ಪಿದರೆ 12 ಲಕ್ಷ ದಂಡ!

ರೀಲ್ಸ್‌ ಮಾಡಲು ಪದವಿ ಕಡ್ಡಾಯ! ತಪ್ಪಿದರೆ 12 ಲಕ್ಷ ದಂಡ!

0

ಬೀಜಿಂಗ್: ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು (ರೀಲ್ಸ್‌) ಮಾಡುವವರಿಗೆ ಕಡ್ಡಾಯವಾಗಿ ಸೂಕ್ತ ವಿದ್ಯಾರ್ಹತೆಗಳು ಇರಬೇಕು ಎಂದು ಚೀನಾ ಸರ್ಕಾರ (China) ಘೋಷಿಸಿದೆ. ವೈದ್ಯಕೀಯ, ಕಾನೂನು, ಶಿಕ್ಷಣ, ಹಣಕಾಸು ಮುಂತಾದ ಸೂಕ್ಷ್ಮ ವಿಷಯಗಳ ಕುರಿತು ವಿಡಿಯೋ ಮಾಡುವವರು ಮೂರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅದು ತಿಳಿಸಿದೆ.

ಪಾಲಿಸಬೇಕಾದ ಮೂರು ನಿಯಮಗಳು:

ವಿದ್ಯಾರ್ಹತೆ: ಎರಡು ತಿಂಗಳ ಒಳಗಾಗಿ ತಮ್ಮ ಪ್ರಮಾಣಪತ್ರ, ಪದವಿ (Degree) ಅಥವಾ ವೃತ್ತಿಪರ ಅರ್ಹತೆಗಳ ದಾಖಲೆಗಳನ್ನು (Professional Credentials) ಸಲ್ಲಿಸಬೇಕು.

ಮಾಹಿತಿ ನಿಖರತೆ: ತಾವು ನೀಡುತ್ತಿರುವ ಮಾಹಿತಿಯು ಸಂಪೂರ್ಣವಾಗಿ ಸರಿಯಾಗಿದೆ ಎಂದು ಸಾಬೀತುಪಡಿಸಬೇಕು.

ಮೂಲದ ಬಹಿರಂಗ: ಆ ಮಾಹಿತಿಯನ್ನು ಎಲ್ಲಿಂದ ಸಂಗ್ರಹಿಸಲಾಗಿದೆ? ಅದನ್ನು ಕೃತಕ ಬುದ್ಧಿಮತ್ತೆ (AI) ಮೂಲಕ ಅಥವಾ ನಾಟಕೀಕರಣದ (Dramatisation) ಮೂಲಕ ಸೃಷ್ಟಿಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು.

ಡೌಯಿನ್ (ಚೀನಾದ ಟಿಕ್‌ಟಾಕ್), ಬಿಲಿಬಿಲಿ, ವೀಬೋ ಮುಂತಾದ ವೇದಿಕೆಗಳು ಈ ಕಂಟೆಂಟ್ ರಚನೆಕಾರರ ಪದವಿಗಳು ಮತ್ತು ಪ್ರಮಾಣಪತ್ರಗಳು ಸರಿಯಾಗಿವೆಯೇ ಅಥವಾ ವಂಚನೆಯವೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ಈ ನಿಯಮಗಳನ್ನು ಪಾಲಿಸದ ಕಂಟೆಂಟ್ ರಚನೆಕಾರರ ಖಾತೆಗಳನ್ನು ಅಮಾನತುಗೊಳಿಸಲಾಗುತ್ತದೆ ಅಥವಾ ಅಳಿಸಿಹಾಕಲಾಗುತ್ತದೆ ಮತ್ತು 12 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಸುಳ್ಳು ವಿಷಯಗಳಿಂದ (Fake Content) ಜನರನ್ನು ರಕ್ಷಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚೀನಾ ಸರ್ಕಾರ ತಿಳಿಸಿದೆ.

You cannot copy content of this page

Exit mobile version