Home ದೇಶ ಅಶುತೋಷ್‌ ರಾಣಾ ತರಹದ ಜನರು ನನಗೆ ʼನಾಯಿಯಂತೆ ಬೊಗಳುತ್ತಾಳೆʼ ಎನ್ನುವ ಮೂಲಕ ಫೇಮಸ್‌ ಆಗಲು ನೋಡುತ್ತಿದ್ದಾರೆ:...

ಅಶುತೋಷ್‌ ರಾಣಾ ತರಹದ ಜನರು ನನಗೆ ʼನಾಯಿಯಂತೆ ಬೊಗಳುತ್ತಾಳೆʼ ಎನ್ನುವ ಮೂಲಕ ಫೇಮಸ್‌ ಆಗಲು ನೋಡುತ್ತಿದ್ದಾರೆ: ಕಂಗನಾ ರಣಾವತ್

0

ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್, “ನಾನು ನಾಯಿಯಂತೆ ಬೊಗಳುತ್ತೇನೆ ಎಂದು ಹೇಳುವ ಅಶುತೋಷ್ ರಾಣಾ, ಸೋನು ಸೂದ್, ನನ್ನ ಚಾರಿತ್ರ್ಯದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವ ರಾಖಿ ಸಾವಂತ್ ಹಾಗೂ ನನ್ನ ಪೋಷಕರು, ಪಾಲನೆ-ಪೋಷಣೆ ಮತ್ತು ಹಿನ್ನೆಲೆಯನ್ನು ಅವಮಾನಿಸುವ ತಾಪ್ಸೀ ಪನ್ನು ಅವರಂತಹವರನ್ನು ಪ್ರತಿದಿನ ನೋಡುತ್ತಿದ್ದೇನೆ.

ಜೀವನದಲ್ಲಿ ನಾನು ಗಳಿಸಿದ ಯಶಸ್ಸಿನ ಶೇಕಡಾ ಒಂದರಷ್ಟನ್ನೂ ಸಾಧಿಸದ ಇಂತಹವರ ಮಾತುಗಳನ್ನು ನಾನು ಕೇಳಿಸಿಕೊಳ್ಳುವುದಿಲ್ಲ ಎಂಬುದೇ ಅವರಿಗೆ ನನ್ನ ಏಕೈಕ ಸಂದೇಶ. ಇವರೆಲ್ಲರೂ ಸಂಪೂರ್ಣ ವಿಫಲರಾದ ಮತ್ತು ಅಪ್ರಸ್ತುತ ವ್ಯಕ್ತಿಗಳಾಗಿದ್ದು, ಕೇವಲ ಮಾಧ್ಯಮಗಳ ಗಮನ ಸೆಳೆಯಲು ನನ್ನ ಮೇಲೆ ನಿರಂತರವಾಗಿ ನಿಂದನೆಗಳನ್ನು ಸುರಿಸುತ್ತಿದ್ದಾರೆ. ಇಂತಹ ಮಾತುಗಳನ್ನು ನಾನು ಸಹಿಸುವುದಿಲ್ಲ ಮತ್ತು ಈ ನಗಣ್ಯ ವ್ಯಕ್ತಿಗಳು ನನ್ನ ಹೆಸರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳಲು ಬಿಡುವುದಿಲ್ಲ” ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಬಾಬಾ ರಾಮದೇವ್ ವಿರುದ್ಧವೂ ಆಕ್ರೋಶ ಹೊರಹಾಕಿದ ಅವರು, “ಬಾಬಾ ರಾಮದೇವ್ ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಮಹಿಳೆಯೊಬ್ಬರ ಕುರಿತು ಅವರು ಮಾಡಿರುವ ಕೀಳುಮಟ್ಟದ ಕಾಮೆಂಟ್‌ಗಳು ಸಮಾಜವೇ ತಲೆತಗ್ಗಿಸುವಂತೆ ಮಾಡಿವೆ. ಮಹಿಳೆಯರ ಕುರಿತಾಗಿ ಅವರು ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ, ಹೆಣ್ಣಿನ ಬಗ್ಗೆ ಅವರಿಗಿರುವ ದೃಷ್ಟಿಕೋನವನ್ನು ಅವರು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ” ಎಂದು ಹೇಳಿದ್ದಾರೆ.

You cannot copy content of this page

Exit mobile version