Home ದೇಶ ದೆಹಲಿ ಮದ್ಯ ನೀತಿ ಪ್ರಕರಣ: ಫಾರ್ಮಾ ಸಂಸ್ಥೆಯ ಮುಖ್ಯಸ್ಥ ಶರತ್ ರೆಡ್ಡಿ ಬಂಧನ

ದೆಹಲಿ ಮದ್ಯ ನೀತಿ ಪ್ರಕರಣ: ಫಾರ್ಮಾ ಸಂಸ್ಥೆಯ ಮುಖ್ಯಸ್ಥ ಶರತ್ ರೆಡ್ಡಿ ಬಂಧನ

0

ನವದೆಹಲಿ: ಇತ್ತೀಚಿಗೆ ರದ್ದಾದ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮ ಹಾಗು ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಬುಧವಾರ ಜಾರಿ ನಿರ್ದೇಶನಾಲಯವು ಫಾರ್ಮಾ ಕಂಪನಿಯ ನಿರ್ದೇಶಕರಾದ ಶರತ್ ರೆಡ್ಡಿ ಅವರನ್ನು ಬಂಧಿಸಿದೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಹೈದರಾಬಾದ್ ಮೂಲದ ಅರಬಿಂದೋ ಫಾರ್ಮಾದ ನಿರ್ದೇಶಕ ಶರತ್ ರೆಡ್ಡಿ ಮತ್ತು ಪೆರ್ನೋಡ್ ರಿಕಾರ್ಡ್ನ ಬೆನಾಯ್ ಬಾಬು ಅವರನ್ನು, ಬುಧವಾರ ತಡರಾತ್ರಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಅಡಿಯಲ್ಲಿ ಏಜೆನ್ಸಿ ಬಂಧಿಸಿದೆ.

ತನಿಖಾ ಸಂಸ್ಥೆಯು ಈ ಹಿಂದೆ ಶರತ್ ರೆಡ್ಡಿ ಅವರಿಗೆ ಸಂಬಂಧಸಿದ ಸ್ಥಳಗಳಲ್ಲಿ ಶೋಧ ನಡೆಸಿತ್ತು ಮತ್ತು ಎರಡು ಬಾರಿ ವಿಚಾರಣೆ ನಡೆಸಿತ್ತು.

ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಇಲ್ಲಿಯವರೆಗೆ ಅನೇಕ ದಾಳಿಗಳನ್ನು ನಡೆಸಿದೆ. ಸೆಪ್ಟೆಂಬರ್‌ನಲ್ಲಿ ಇಂಡೋಸ್ಪಿರಿಟ್ ಎಂಬ ಮದ್ಯ ತಯಾರಿಕಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನೂ ಸಹ ಬಂಧಿಸಿತ್ತು.

ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಇತರರನ್ನು ಹೊರತುಪಡಿಸಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಆರೋಪಿ ಎಂದು ಹೆಸರಿಸಿ, ಸಿಬಿಐ ಸಲ್ಲಿಸಿದ ದೂರನ್ನು ಗಮನಿಸಿದ ನಂತರ ಕೇಂದ್ರ ಏಜೆನ್ಸಿ ಆಗಸ್ಟ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.

ಈ ತಿಂಗಳ ಆರಂಭದಲ್ಲಿ, ಸಂಸ್ಥೆಯು ಮನೀಶ್ ಸಿಸೋಡಿಯಾ ಅವರ ಸಹಾಯಕನ ನಿವಾಸವನ್ನು ಶೋಧಿಸಿತ್ತು ಮತ್ತು ನಂತರ ದೆಹಲಿಯ ತನ್ನ ಕಚೇರಿಯಲ್ಲಿ ಅವರನ್ನು ವಿಚಾರೆಣೆ ನಡೆಸಿತ್ತು.

ದೆಹಲಿಯ ಅಬಕಾರಿ ನೀತಿ 2021-22 ರ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಮಾಡಿದ ನಂತರ ಅಬಕಾರಿ ಯೋಜನೆ ಸ್ಕ್ಯಾನರ್ ಅಡಿಯಲ್ಲಿ ಬಂದಿದೆ. ಲೆಫ್ಟಿನೆಂಟ್ ಗವರ್ನರ್ ಅವರು 11ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು.

ಗುಜರಾತ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮದ್ಯ ನೀತಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಪ್ರಾರಂಭವಾಯಿತು.

ಈ ಹಿನ್ನಲೆಯಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಪರವಾಗಿ ಕೆಲಸ ಮಾಡುತ್ತಿರುವ ಕೇಂದ್ರವು, ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ, ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಚಾರಕ್ಕೆ ಹಾನಿ ಮಾಡುವ ಉದ್ದೇಶದಿಂದ ಈ ರೀತಿ ತನಿಖೆ ಕೈಗೊಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು.

You cannot copy content of this page

Exit mobile version