ಬೆಂಗಳೂರು: T20 ವಿಶ್ವಕಪ್ ಟೂರ್ನಿಯ ಇಂದಿನ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೆ ಖ್ಯಾತ ಸಿನಿಮಾ ಸಾಹಿತಿಯಾದ ಕವಿರಾಜ್ ಅವರು ಕವಿತೆ ಬರೆದು ವಿಶಿಷ್ಟ ರೀತಿಯಲ್ಲಿ ಶುಭಕೋರಿದ್ದಾರೆ.
ಕ್ರಿಕೆಟ್ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಕವಿರಾಜ್ ಅವರು ಬಿಸಿಸಿ ನಡೆಸುವ ಯಾವುದೇ ಪಂದ್ಯಾವಳಿಗಳಿದ್ದರು ತಮ್ಮದೇ ಶೈಲಿಯಲ್ಲಿ ಒಂದಷ್ಟು ಅಭಿಪ್ರಾಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ.
ಈಗ ಅದೇ ರೀತಿ ತಮ್ಮ ಕಾವ್ಯದಲ್ಲಿ ಭಾರತದ ಆಟಗಾರನನ್ನು ಹಿಡಿದಿಟ್ಟು ಚಂದದ ಕವಿತೆ ಬರೆಯುವ ಮೂಲಕ ಭಾರತ ತಂಡಕ್ಕೆ ಶುಭಕೋರಿದ್ದಾರೆ.
ಆ ಕವಿತೆ ಯಾವುದು ಅಂತೀರಾ? ಇಲ್ಲಿದೆ ನೋಡಿ.
ಇವತ್ತಿಗೊಂದು ‘ಹಳೇ ಖಯಾಲಿ’ಯ ಪ್ರಾರ್ಥನೆ
‘Row -ಹಿತ’ವಾಗಲಿ
‘Raw -ಹುಲ್ಲ್ ‘ ಹಸಿರಾಗಲಿ
‘ವಿರಾಟ್’ ರೂಪ ದರ್ಶನವಾಗಲಿ
‘ಸೂರ್ಯ’ ಪ್ರಜ್ವಲಿಸಲಿ
‘ಕಾರ್ತಿಕ’ ಮಾಸದಲ್ಲೇ
‘ಹಾರ್ದಿಕ’ ವಿಜಯ ಪ್ರಾಪ್ತಿಯಾಗಲಿ
ಅ(ಹ)ರ್ಶದೀಪ ಬೆಳಗಲಿ
‘ಅಕ್ಷರ’ ಪ್ರತಿಭೆಯು
‘ಅಶ್ವಿನಿ(ನ್)’ ನಕ್ಷತ್ರದಂತೆ ರಾರಾಜಿಸಲಿ
‘ಶಮೀ’ ವೃಕ್ಷ ಶತ್ರುವಿನಾಶಗೈಯಲಿ
ಭಾರತ ‘ಭುವನೇಶ್ವರ’ನಾಗುವತ್ತ
ಅಂತಿಮ ಚರಣಕ್ಕೆ
ಮುನ್ನಡೆಯಲಿ
-ಇಂತೀ ನಿಮ್ಮ ಕವಿರಾಜ್
ಕವಿರಾಜ್ ಅವರ ಕವಿತೆಯ ಆಶಯದಂತೆ ಇಡೀ ಭಾರತದ ಕ್ರಿಕೆಟ್ ಅಭಿಮಾನಿಗಳು ಅಕ್ಷರಶಃ ಭಾರತದ ಗೆಲುವಿಗಾಗಿ ಕಾತುರದಿಂದ ಕಾಯುತ್ತಿರುವುದೂ ಸಹ ಸತ್ಯ. ಭಾರತ ಈ ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಿಸಲಿ ಎಂದು ಹಾರೈಸೋಣ.