Home ಬ್ರೇಕಿಂಗ್ ಸುದ್ದಿ ಇಂಡಿಯಾ ಒಕ್ಕೂಟದ ಪ್ರತಿಭಟನೆ ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ – ದೆಹಲಿ ಪೊಲೀಸರು

ಇಂಡಿಯಾ ಒಕ್ಕೂಟದ ಪ್ರತಿಭಟನೆ ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ – ದೆಹಲಿ ಪೊಲೀಸರು

ನವದೆಹಲಿ: SIR ಮತ್ತು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು 9 ಗಂಟೆಗಳ ಕಾಲ ಧರಣಿಗೆ ಬ್ರೇಕ್ ಬಿದ್ದಿದೆ. ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿಯನ್ನು ಕಿಂಗ್ಸ್‌ವೇ ಕ್ಯಾಂಪ್‌ಗೆ ಕರೆದೊಯ್ಯಲಾಗುತ್ತಿದೆ.

ಪ್ರತಿಭಟನಾ ಸ್ಥಳದಲ್ಲಿ ಭಾರಿ ಗದ್ದಲ ಕಂಡುಬಂದಿದೆ. ಪೊಲೀಸರು ಪ್ರತಿಭಟನಾ ನಾಯಕರನ್ನು ತೆರವುಗೊಳಿಸುತ್ತಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಚರಣ್‌ಜಿತ್ ಸಿಂಗ್ ಚನ್ನಿ, ದೀಪೇಂದರ್ ಹೂಡಾ ಮತ್ತು ಪವನ್ ಖೇರಾ ಸೇರಿದಂತೆ ಹಲವಾರು ನಾಯಕರನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಕಾಂಗ್ರೆಸ್ ಪಕ್ಷದಿಂದ ಸಭೆಗಾಗಿ ಆಯೋಗಕ್ಕೆ ಯಾವುದೇ ವಿನಂತಿ ಬಂದಿಲ್ಲ. ಇದಲ್ಲದೆ, ಚುನಾವಣಾ ಆಯೋಗಕ್ಕೆ ಯಾವುದೇ ಇತರ ವಿರೋಧ ಪಕ್ಷದಿಂದ ಸಭೆಗಾಗಿ ಯಾವುದೇ ವಿನಂತಿ ಬಂದಿಲ್ಲ ಎಂದು ಹೇಳಿದೆ.

300ಕ್ಕೂ ಹೆಚ್ಚು ಸಂಸದರು ಚುನಾವಣಾ ಆಯುಕ್ತರನ್ನು ಭೇಟಿಯಾಗಲು ಬಂದಿದ್ದೇವೆ. ಭೇಟಿಯಾಗದೇ ತೆರಳುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಷ್ಟ್ರದ ಧ್ವನಿಯನ್ನು ಅವಮಾನಿಸಲಾಗಿದೆ. ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಭೇಟಿ ಮಾಡಿ ‘ನೀವು ಮತವನ್ನು ಕದ್ದಿದ್ದೀರಿ’ ಎಂದು ಹೇಳಲು ಬಯಸಿದ್ದೇನೆ ಎಂದು ಹೇಳಿದರು. ರಾಹುಲ್ ಗಾಂಧಿಯನ್ನು ಆಕಾಶವಾಣಿ ಭವನಕ್ಕೆ ಪ್ರವೇಶಿಸುವುದನ್ನು ತಡೆಹಿಡಿಯಲಾಯಿತು. ಹೀಗಾಗಿ ಅವರು ಮರದ ಕೆಳಗೆ ಕುಳಿತಿದ್ದರು. ತನಗೆ ಇಲ್ಲಿ ಕುಳಿತುಕೊಳ್ಳಲು ಯಾವುದೇ ತೊಂದರೆ ಇಲ್ಲ. ಅಗತ್ಯವಿರುವಷ್ಟು ಕಾಲ ಕುಳಿತುಕೊಳ್ಳುತ್ತೇನೆ ಎಂದು ಅವರು ಹೇಳಿದರು. ಚುನಾವಣಾ ಆಯೋಗವು ತಾನು ಇಲ್ಲಿ ಕುಳಿತುಕೊಳ್ಳಬಾರದು ಎಂದು ಬಯಸಿದರೆ, ದೆಹಲಿಯ ಯಾವುದೇ ಸ್ಥಳವನ್ನು ಅವರಿಗೆ ತಿಳಿಸಬಹುದು. ತಾನು ಅಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದರು.

ಆಕಾಶವಾಣಿ ಭವನದ ಮೂಲಕ ಚುನಾವಣಾ ಆಯೋಗದ ಕಚೇರಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಆದರೆ ಗೇಟ್ ಬಳಿ ಅವರನ್ನು ತಡೆಹಿಡಿಯಲಾಯಿತು. ವರದಿಗಳ ಪ್ರಕಾರ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಚುನಾವಣಾ ಆಯೋಗದಿಂದ ಸುಮಾರು 200 ಮೀಟರ್ ದೂರದಲ್ಲಿ ಧರಣಿ ಪ್ರತಿಭಟನೆ ನಡೆಸಿದರು. ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಆಕಾಶವಾಣಿ ಭವನದ ಗೇಟ್ ಹೊರಗೆ ತಲುಪಿದರು.

You cannot copy content of this page

Exit mobile version