Home ದೇಶ ಮೊಳೆಗಳಿರುವ ಲಾಠಿಯಿಂದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಹಲ್ಲೆ: ಫ್ಯಾಕ್ಟ್‌ ಚೆಕ್‌ ಮೂಲಕ ಬಹಿರಂಗಗೊಳಿಸಿದ ಆಲ್ಟ್‌ ನ್ಯೂಸ್‌

ಮೊಳೆಗಳಿರುವ ಲಾಠಿಯಿಂದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಹಲ್ಲೆ: ಫ್ಯಾಕ್ಟ್‌ ಚೆಕ್‌ ಮೂಲಕ ಬಹಿರಂಗಗೊಳಿಸಿದ ಆಲ್ಟ್‌ ನ್ಯೂಸ್‌

0

ಜುಲೈ 20 ರಂದು ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಸಂಸತ್ ಮಾರ್ಚ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ದಾಳಿ ತೀವ್ರ ವಿವಾದಕ್ಕೆ ಕಾರಣವಾಗಿರುವುದು ತಿಳಿದೇ ಇದೆ. ಕೆಲವು ಪೊಲೀಸರು ಮೊಳೆಗಳಿರುವ ಲಾಠಿಗಳಿಂದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ ಎಂಬ ಎರಡು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ವೀಡಿಯೊ ನಿಜವಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದರು.

ಈ ಕುರಿತು ಪಿಐಬಿ ಫ್ಯಾಕ್ಟ್‌ಚೆಕ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ದೆಹಲಿ ಪೊಲೀಸರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಆ ವೀಡಿಯೊ ಫೇಕ್ ಹಾಗೂ ಪೊಲೀಸರು ಮೊಳೆಗಳಿರುವ ಲಾಠಿಗಳನ್ನು ಬಳಸಿರಲಿಲ್ಲ ಎಂದು ತಿಳಿಸಿತ್ತು. ಆದರೆ ಆಲ್ಟ್ ನ್ಯೂಸ್ ಮಾತ್ರ ತನ್ನ ವರದಿಯಲ್ಲಿ ಈ ವೀಡಿಯೊಗಳು ನಿಜ ಎಂದು ಉಲ್ಲೇಖಿಸಿದೆ.

ಪೆಲ್ಲೆಟ್ ಗನ್‌ಗಳಿಂದ ವಿದ್ಯಾರ್ಥಿಗಳ ಮೇಲೆ ದಾಳಿ ಚಲೋ ಸಂಸದ್‌ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ವಿವೇಚನಾರಹಿತವಾಗಿ ದಾಳಿ ಮಾಡಿದ್ದಾರೆ ಎಂಬುದಕ್ಕೆ ಹಲವು ಸಾಕ್ಷ್ಯಗಳು ಹೊರಬರುತ್ತಿವೆ. ಗುರುವಾರ ಕೆಲವು ವಿದ್ಯಾರ್ಥಿಗಳು ತಮ್ಮ ಮೇಲೆ ಪೊಲೀಸರು ಪೆಲ್ಲೆಟ್ ಗನ್‌ಗಳಿಂದ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿ ಮೂಲದ 25 ವರ್ಷದ ಯುವಕನೊಬ್ಬ ಇಂಡಿಯಾ ಟುಡೇ ಜೊತೆ ಮಾತನಾಡಿ.. ತಾವು ಸಂಸತ್ ಮಾರ್ಚ್‌ನಲ್ಲಿ ಭಾಗವಹಿಸಿದ್ದಾಗ ಪೊಲೀಸರು ತಮ್ಮ ಮೇಲೆ ಪೆಲ್ಲೆಟ್ ಗನ್‌ಗಳಿಂದ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾನೆ. ಸಫ್ದರ್‌ಜಂಗ್ ಆಸ್ಪತ್ರೆಯ ವರದಿಗಳು ಸಹ ಇದನ್ನೇ ದೃಢೀಕರಿಸುತ್ತಿವೆ ಎಂದಿದ್ದಾನೆ. 19 ವರ್ಷದ ಮತ್ತೊಬ್ಬ ಯುವಕ ಮಾತನಾಡಿ, ಪೆಲ್ಲೆಟ್ ಗನ್ ದಾಳಿಯಿಂದಾಗಿ ತನ್ನ ಒಂದು ಕಣ್ಣಿನ ದೃಷ್ಟಿ ಮಂದವಾಗಿದೆ ಎಂದು ತಿಳಿಸಿದ್ದಾನೆ.

ಪೆಲ್ಲೆಟ್ ಗನ್ ದಾಳಿಯಿಂದ ಇನ್ನೊಬ್ಬ ಯುವಕ ಗಾಯಗೊಂಡಿರುವುದನ್ನು ಇಂಡಿಯನ್ ಎಕ್ಸ್‌ಪ್ರೆಸ್ ಬಹಿರಂಗಪಡಿಸಿದೆ. ತಮ್ಮ ಜೊತೆಗೆ ಇನ್ನೂ ಹಲವರ ಮೇಲೆ ಈ ದಾಳಿಗಳು ನಡೆದಿವೆ ಎಂದು ಅವರು ಹೇಳುತ್ತಿದ್ದಾರೆ.

You cannot copy content of this page

Exit mobile version