Home ರಾಜ್ಯ ಮಂಗಳೂರು ವಿವಿ ಘಟಕ ಕಾಲೇಜುಗಳನ್ನು ರಾಜ್ಯ ಸರಕಾರದ ಅಧೀನಕ್ಕೆ ಪಡೆಯಲು ಆಗ್ರಹ

ಮಂಗಳೂರು ವಿವಿ ಘಟಕ ಕಾಲೇಜುಗಳನ್ನು ರಾಜ್ಯ ಸರಕಾರದ ಅಧೀನಕ್ಕೆ ಪಡೆಯಲು ಆಗ್ರಹ

0

ಬಂಟ್ವಾಳ : ಮಂಗಳೂರು ವಿ ವಿ ಘಟಕ ಕಾಲೇಜುಗಳನ್ನು ರಾಜ್ಯ ಸರಕಾರದ ಅಧೀನಕ್ಕೆ ಪಡೆಯಲು ಆಗ್ರಹಿಸಿ ನಿರ್ಣಯ ಕೈಗೊಳ್ಳವಂತೆ ಮಂಜನಾಡಿ,ಸಜಿಪನಡು ಗ್ರಾಮ ಪಂಚಾಯತ್ ಗಳಿಗೆ ಹೋರಾಟ ಸಮಿತಿಯಿಂದ ಇಂದು ಮನವಿ ಮಾಡಲಾಯಿತು.

ಪ್ರಬಲ ಜನಾಭಿಪ್ರಾಯದಿಂದಾಗಿ ಮುಚ್ಚುವ ನಿರ್ಧಾರವನ್ನು ಸಡಿಲಿಸಿ, ಅಡ್ಮಿಷನ್ ಆರಂಭಿಸಲಾಗಿದ್ದ ಮಂಗಳೂರು ವಿವಿ ಯ ನಾಲಕ್ಕು ಘಟಕ ಪದವಿ ಕಾಲೇಜುಗಳನ್ನು ಮುಚ್ಚುವ ಪ್ರಕ್ರಿಯೆ ಮತ್ತೆ ಆರಂಭಗೊಂಡಿವೆ‌. ಕೊಣಾಜೆಯ ಮಂಗಳೂರು ವಿ ವಿ ಆವರಣದಲ್ಲಿರುವ ಪದವಿ ಕಾಲೇಜು, ಹಾಗೂ ನೆಲ್ಯಾಡಿ ಪದವಿ ಕಾಲೇಜುಗಳಲ್ಲಿ ಬಿ ಕಾಂ ಹೊರತು ಪಡಿಸಿ ಉಳಿದ ವಿಭಾಗಗಳಲ್ಲಿ ಅಡ್ಮಿಷನ್ ತಡೆ ಹಿಡಿದು ಪ್ರಥಮ ವರ್ಷದ ತರಗತಿಗಳನ್ನು ರದ್ದುಗೊಳಿಸಲಾಗುತ್ತಿದೆ. ಇನ್ನುಳಿದ ಎರಡು ಘಟಕ ಪದವಿ ಕಾಲೇಜುಗಳ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಈ ಹಿನ್ನಲೆಯಲ್ಲಿ ವಿ ವಿ ಘಟಕ ಪದವಿ ಕಾಲೇಜುಗಳನ್ನು ರಾಜ್ಯ ಸರಕಾರದ ಅಧೀನಕ್ಕೆ ಪಡೆದು ಶಿಕ್ಷಣ ಇಲಾಖೆಯಿಂದಲೇ ನಡೆಸಬೇಕು ಎಂಬ ಬೇಡಿಕೆಯನ್ನು ಬಲಗೊಳಿಸಲು, ಘಟಕ ಕಾಲೇಜುಗಳನ್ನು ಉಳಿಸುವ ಹೋರಾಟವನ್ನು ತೀವ್ರಗೊಳಿಸಲು ಮಂಗಳೂರು ವಿ ವಿ ಘಟಕ ಪದವಿ ಕಾಲೇಜುಗಳ ಉಳಿಸಿ ಹೋರಾಟ ಸಮಿತಿ ನಿರ್ಧರಿಸಿದೆ‌ ಎಂದು ತೀಳಿಸಿದರು.

ಅದರ ಭಾಗವಾಗಿ ಉಳ್ಳಾಲ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳು “ಘಟಕ ಪದವಿ ಕಾಲೇಜುಗಳನ್ನು ರಾಜ್ಯ ಸರಕಾರವೇ ಅಧೀನಕ್ಕೆ ಪಡೆದು ಶಿಕ್ಷಣ ಇಲಾಖೆಯ ಮೂಲಕ ನಡೆಸಬೇಕು” ಎಂಬ ನಿರ್ಣಯವನ್ನು ಕೈಗೊಂಡು ಸರಕಾರಕ್ಕೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಲು ಹೋರಾಟ ಸಮಿತಿ ನಿರ್ಧರಿಸಿದೆ.

ಅದರಂತೆ ಇಂದು ಮಂಜನಾಡಿ,ಸಜಿಪನಡು ಗ್ರಾಮ ಪಂಚಾಯತ್ ಗಳಿಗೆ ಹೋರಾಟ ಸಮಿತಿಯ ನಿಯೋಗ ಭೇಟಿ ನೀಡಿ ಪಂಚಾಯತ್ ಅಧ್ಯಕ್ಷರುಗಳಿಗೆ ವಿಷಯ ಮನದಟ್ಟು ಮಾಡಿ ವಿನಂತಿ ಪತ್ರವನ್ನು ನೀಡಿದರು ಸಜಿಪನಡು ಪಂಚಾಯತ್ ನಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಬ್ದುಲ್ ರಹಿಮಾನ್ ,ಕಾರ್ಯದರ್ಶಿ ಇಸ್ಮಾಯಿಲ್ ಸಮ್ಮುಖದಲ್ಲಿ ವಿನಂತಿ ಪತ್ರ ನೀಡಲಾಯಿತು. ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸರೋಜಿನಿಯವರಿಗೆ ವಿನಂತಿ ಪತ್ರ ನೀಡಲಾಯಿತು. ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹೋರಾಟ ಸಮಿತಿಯ ವಿನಂತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ಹೋರಾಟ ಸಮಿತಿಯ ನಿಯೋಗದಲ್ಲಿ , ಹೋರಾಟ ಸಮಿತಿಯ ಸಂಚಾಲಕ ರಿಝ್ವಾನ್ ಹರೇಕಳ,ರಝಾಕ್ ಮೊಂಟೆಪದವು,ರಝಾಕ್ ಮುಡಿಪು ಮುಂತಾದವರು ಹಾಜರಿದ್ದರು.

You cannot copy content of this page

Exit mobile version