Home ರಾಜ್ಯ APL/BPL ಕಾರ್ಡುಗಳಿಗೆ ನೀವಿರುವ ಸ್ಥಳದಿಂದಲೇ ಈಗ e-KYC ಮಾಡಿಸಬಹದು! ಗಡುವು ಮುಗಿಯುತ್ತಿದೆ, ಬೇಗ ಮಾಡಿ!

APL/BPL ಕಾರ್ಡುಗಳಿಗೆ ನೀವಿರುವ ಸ್ಥಳದಿಂದಲೇ ಈಗ e-KYC ಮಾಡಿಸಬಹದು! ಗಡುವು ಮುಗಿಯುತ್ತಿದೆ, ಬೇಗ ಮಾಡಿ!

0

ಬೆಂಗಳೂರು: ನಕಲಿ ಕಾರ್ಡುಗಳನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರವು APL/BPL ರೀತಿಯ ಎಲ್ಲಾ ರೇಷನ್‌ ಕಾರ್ಡುಗಳಿಗೂ e-KYC ಕಡ್ಡಾಯ ಮಾಡಿತ್ತು. ಆದರೆ ಜನರು ಅದರತ್ತ ಆಸಕ್ತಿಯೇ ತೋರಿಲ್ಲ. ಹೀಗಾಗಿ ಕಳೆದ ಆಗಸ್ಟ್‌ ತಿಂಗಳ 31ಕ್ಕೆ ವಿಧಿಸಿದ್ದ ಗಡುವನ್ನು ಸರ್ಕಾರ ಮುಂದಕ್ಕೆ ದೂಡಿತ್ತು.

ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇ ಕೆವೈಸಿ ಮಾಡಿಸಲು ಜನರಿಗೆ ಇನ್ನೊಂದು ಅವಕಾಶವನ್ನು ನೀಡಿದ ಇದೇ ವರ್ಷದ ಅಕ್ಟೋಬರ್‌ 31ನೇ ತಾರೀಖನ್ನು ಅಂತಿಮ ದಿನವಾಗಿ ಘೋಷಣೆ ಮಾಡಿದೆ.

ಆಕ್ಟೋಬರ್ 31ರೊಳಗಾಗಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಬೆ.7.00 ರಿಂದ ರಾ. 9.00ರವರೆಗೆ ಉಚಿತವಾಗಿ ನೀವು ನಿಮ್ಮ ಕಾರ್ಡಿನಲ್ಲಿರುವವರ ಇ ಕೆವೈಸಿ ಮಾಡಿಸಬಹುದು. ಗಡುವಿನೊಳಗೆ ಇ-ಕೆವೈಸಿ ಮಾಡಿಸದಿರುವ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಇಲಾಖೆ ಖಡಕ್ ಎಚ್ಚರಿಕೆಯನ್ನು ನೀಡಿದೆ.

ಕಡ್ಡಾಯ eKYC ಅವಶ್ಯಕತೆ: ಸರ್ಕಾರವು ಎಲ್ಲಾ ಪಡಿತರ ಚೀಟಿದಾರರಿಗೆ eKYC ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲವಾದಲ್ಲಿ ನಿಮ್ಮ ರೇಷನ್ ಕಾರ್ಡ್ ಮತ್ತು ಅದರ ಸಂಬಂಧಿತ ಪ್ರಯೋಜನಗಳು ರದ್ದಾಗುವ ಸಾಧ್ಯತೆ ಇರುತ್ತದೆ.

ಈ ಮೊದಲು e-KYC ಮಾಡಿಸಲು ನೀವು ನಿಮ್ಮ ಊರಿನ ರೇಷನ್‌ ಅಂಗಡಿಗೆ ಹೋಗಿ ಅಲ್ಲಿ ಬೆರಳಚ್ಚು ಹಾಗೂ ಆಧಾರ್‌ ಸಂಖ್ಯೆ ನೀಡಿ ಪರಿಶೀಲನೆ ಮಾಡಿಸಬೇಕಿತ್ತು ಆದರೆ ಪ್ರಸ್ತುತ ಹೊಸ ನಿಯಮವನ್ನು ಸರ್ಕಾರ ತಂದಿದ್ದು, ನೀವು ಹೊರ ರಾಜ್ಯದಲ್ಲಿ ವಾಸವಿದ್ದಲ್ಲಿ ಅಲ್ಲಿನ ಹತ್ತಿರ ನ್ಯಾಯಬೆಲೆ ಅಂಗಡಿಗೆ ಹೋಗಿ ನೀವು ನಿಮ್ಮ e-KYC ಪ್ರಕ್ರಿಯೆಗಳನ್ನು ಪೂರೈಸಬಹುದು.

ಒಂದು ಕಾರ್ಡಿನಲ್ಲಿ ಎಷ್ಟು ಜನರ ಹೆಸರು ಇರುತ್ತದೆಯೋ ಅವರೆಲ್ಲರೂ e-KYC ಮಾಡಿಸುವುದು ಕಡ್ಡಾಯವಾಗಿರುತ್ತದೆ. ಹಾಗೊಂದು ವೇಳೆ ಮಾಡಿಸದೆ ಹೋದರೆ ಅಂತಹ ಸದಸ್ಯರ ಹೆಸರನ್ನು ರೇಷನ್‌ ಕಾರ್ಡಿನಿಂದ ತೆಗೆದು ಹಾಕುತ್ತಾರೆ.

You cannot copy content of this page

Exit mobile version