ಮನುಷ್ಯ ಮಾಡಬಹುದಾದ ಅತ್ಯಂತ ಗೌರವಾನ್ವಿತ ಕೆಲಸವೆಂದರೆ ದೇಶಕ್ಕೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡುವುದು. ಸೇನೆಯ ಸಮವಸ್ತ್ರವನ್ನು ಧರಿಸುವ ಸಂತೋಷ ಮತ್ತು ಘನತೆ ಬೇರೆ ಯಾವುದೇ ಸೇವೆಗೆ ಸಾಟಿಯಲ್ಲ. ತಮ್ಮ ಜೀವಿತಾವಧಿಯಲ್ಲಿ ಅಪರೂಪದ ಈ ಸವಲತ್ತು ಬೆರಳೆಣಿಕೆಯಷ್ಟು ವ್ಯಕ್ತಿಗಳಿಗೆ ಮಾತ್ರ ಸಿಗುತ್ತದೆ.
ಹಲವಾರು ಬಾಲಿವುಡ್ ತಾರೆಯರು ಮನಮೋಹಕ ಪ್ರಪಂಚದಲ್ಲಿ ಪ್ರಸಿದ್ಧಿ ಗಳಿಸುವ ಮೊದಲು ದೇಶಕ್ಕಾಗಿ ಸೇವೆ ಸಲ್ಲಿಸಿದ್ದರು ಎಂಬುದು ನಿಮಗೆ ತಿಳಿದಿದೆಯೇ?
ನಮ್ಮ ಭಾರತೀಯ ಸಿನಿಮಾ ತಾರೆಯರು ಸಿನಿಮಾಗಳಲ್ಲಿ ದೇಶ ಕಾಯುವ ಸೈನಿಕರ ಪಾತ್ರಗಳನ್ನು ಮಾಡಲು ಇಷ್ಟಪಡುತ್ತಾರೆ. ಏಕೆಂದರೆ ದೇಶಭಕ್ತಿ ಅನ್ನೋದು ನಮ್ಮ ಚಿತ್ರರಂಗದ ಬರಹಗಾರರು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಮತ್ತು ಪ್ರೇಕ್ಷಕರಿಗೆ ಬಹಳ ಹಿಂದಿನಿಂದಲೂ ನೆಚ್ಚಿನ ವಿಷಯ. ಅಯಾರಿ, ಬಾರ್ಡರ್, ಹಾಲಿಡೇ, ದಿ ಘಾಜಿ ಅಟ್ಯಾಕ್, ಲಕ್ಷ್ಯ, ಶೌರ್ಯ, ಉರಿ: ದಿ ಸರ್ಜಿಕಲ್ ಸ್ಟ್ರೈಕ್, ಶೇರ್’ಷಾ ಮತ್ತು ಇತರ ಅನೇಕ ಚಲನಚಿತ್ರಗಳು ನಮ್ಮ ಭಾರತೀಯ ಸೇನೆಗೆ ಸಂಬಂಧಿಸಿದ ಕಥೆಗಳನ್ನು ಹೊಂದಿವೆ.
ನಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಸೇನಾ ಸಮವಸ್ತ್ರದ ಪಾತ್ರಗಳಲ್ಲಿ ನೋಡಲು ಪ್ರೇಕ್ಷಕರು ಇಷ್ಟಪಡುತ್ತಾರೆ.
ಹಾಗಾಗಿ, ಈ ಲೇಖನದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕೆಲವು ನಟರ ಬಗ್ಗೆ ತಿಳಿದುಕೊಳ್ಳೋಣ
ಈ ಹೆಸರು ಕೇಳಿದ ತಕ್ಷಣ ನಮಗೆ ನೆನಪಾಗೋದು ಮಹಾಭಾರತದ ಶಕುನಿ. ಗುಫಿ ಪೈಂಟಲ್, ಪೌರಾಣಿಕ ಸರಣಿ ಮಹಾಭಾರತದಲ್ಲಿ ಮರೆಯಲಾಗದ ಅಭಿನಯ ನೀಡಿದವರು. ಈ ಸರಣಿಯಲ್ಲಿ ಶಕುನಿ ಮಾಮಾ ಪಾತ್ರವನ್ನು ನಿರ್ವಹಿಸಿದ ಗುಫಿ ಪೈಂಟಲ್ ಅವರು 1980 ರ ದಶಕದ ಪ್ರಸಿದ್ಧ ನಟರಾಗಿದ್ದರು. ಈ ನಟ ಮೂಲತಃ ಇಂಜಿನಿಯರ್ ಆಗಿ ತರಬೇತಿ ಪಡೆದಿದ್ದರು. ದೂರದರ್ಶನ ಧಾರಾವಾಹಿಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಅವರ ವೈವಿಧ್ಯಮಯ ಪಾತ್ರಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅವರು ಒಮ್ಮೆ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದರು ಎಂಬುದು ನಮ್ಮಲ್ಲಿ ಕೆಲವರಿಗೆ ಮಾತ್ರ ತಿಳಿದಿದೆ.
2. ಆನಂದ್ ಬಕ್ಷಿ
ಭಾರತ ಚಿತ್ರರಂಗದ ಅತ್ಯುತ್ತಮ ಸಾಹಿತಿಗಳಲ್ಲಿ ಆನಂದ್ ಬಕ್ಷಿ ಕೂಡ ಒಬ್ಬರು. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜನಿಸಿದ ಅವರ ಕುಟುಂಬ ನಂತರ ಭಾರತಕ್ಕೆ ಸ್ಥಳಾಂತರಗೊಂಡಿತು. ಅವರು ತಮ್ಮ ಯೌವನದಿಂದಲೂ ವೈಯಕ್ತಿಕ ಹವ್ಯಾಸವಾಗಿ ಬರವಣಿಗೆಯನ್ನು ಇಷ್ಟಪಡುತ್ತಿದ್ದರು. ಭಲಾ ಆದ್ಮಿ (1958) ಚಿತ್ರದ ಮೂಲಕ ಅವರು ಬಾಲಿವುಡ್‌ನಲ್ಲಿ ಬ್ರೇಕ್ ಪಡೆದರು. ಆನಂದ್ ಅವರು ಒಟ್ಟು 40 ಬಾರಿ ಅತ್ಯುತ್ತಮ ಗೀತರಚನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡು ಅವುಗಳಲ್ಲಿ 4 ಅನ್ನು ಗೆದ್ದಿದ್ದಾರೆ.
ಆನಂದ್ ಬಕ್ಷಿ 1944 ರಲ್ಲಿ ರಾಯಲ್ ಇಂಡಿಯನ್ ನೇವಿಯನ್ನು ಸೇರಿದರು. ವಿಭಜನೆಯ ನಂತರ ಅವರ ಕುಟುಂಬವು ಪಾಕಿಸ್ತಾನವನ್ನು ತೊರೆದು ದೆಹಲಿಗೆ ಪ್ರಯಾಣ ಬೆಳೆಸಿತು. ನಂತರ ಅವರು ಭಾರತೀಯ ಸೇನೆಯನ್ನು ಸೇರಿದರು.
3. ರಾಜ್ ಕುಮಾರ್
ಬಾಲಿವುಡ್ ನಟ ರಾಜ್ ಕುಮಾರ್ ಅವರನ್ನು ಹಿಂದಿ ಚಲನಚಿತ್ರೋದ್ಯಮದಲ್ಲಿ ಸಾಮಾನ್ಯವಾಗಿ “ಜಾನಿ” ಎಂದು ಕರೆಯಲಾಗುತ್ತಿತ್ತು. ರಾಜ್ ಕುಮಾರ್ ಅವರು ವಕ್ತ್, ಪಕೀಜಾ, ತಿರಂಗ, ಮದರ್ ಇಂಡಿಯಾ, ನೌಶೆರ್ವಾನ್-ಇ-ಆದಿಲ್ ಮತ್ತು ಇತರ ಸಿನಿಮ ಮೇರುಕೃತಿಗಳಲ್ಲಿ ತಮ್ಮ ಶಕ್ತಿಯುತ ಅಭಿನಯದೊಂದಿಗೆ ಭಾರತೀಯ ಪ್ರೇಕ್ಷಕರ ಮೇಲೆ ಶಾಶ್ವತವಾದ ಪರಿಣಾಮ ಬೀರಿದ್ದಾರೆ.
ನಾವು ನಟನಾಗಿ ಅವರ ಅತ್ಯುತ್ತಮ ಅಭಿನಯವನ್ನು ಮೆಚ್ಚುತ್ತೇವೆ. ಆದರೆ, ಅವರು 1940 ರ ದಶಕದ ಅಂತ್ಯದಲ್ಲಿ ಗ್ಲಾಮ್ ಇಂಡಸ್ಟ್ರಿಗೆ ಪ್ರವೇಶಿಸುವ ಮೊದಲು ಮುಂಬೈ ಪೊಲೀಸ್ ಇಲಾಖೆಯಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.
4. ಬಿಕ್ರಮಜೀತ್ ಕನ್ವರ್ಪಾಲ್
ದಿವಂಗತ ನಟ ಬಿಕ್ರಮ್‌ಜೀತ್ ಕನ್ವರ್‌ಪಾಲ್, ಅನೇಕ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಪೋಷಕ ನಟನಾಗಿ ತಮ್ಮ ಗಮನಾರ್ಹ ಅಭಿನಯದಿಂದ ಹೆಸರುವಾಸಿಯಾಗಿದ್ದರು. ಡಾನ್, ಗ್ರ್ಯಾಂಡ್ ಮಸ್ತಿ, ಮರ್ಡರ್ 2, ಮತ್ತು 24, ಸ್ಪೆಷಲ್ ಆಪ್ಸ್, ಕ್ರೈಮ್ ಪೆಟ್ರೋಲ್, ಮತ್ತು ಇತರ ಹಲವಾರು ದೂರದರ್ಶನ ಕಾರ್ಯಕ್ರಮಗಳಲ್ಲಿ ಪೋಷಕ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸುವ ಮೂಲಕ ಬಿಕ್ರಮಜೀತ್ ಹೆಸರು ಗಳಿಸಿದರು. ಆದರೆ ಅವರು ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದರು ಎಂಬುದು ನಿಮಗೆ ತಿಳಿದಿತ್ತೇ? 2002 ರಲ್ಲಿ ಸೈನ್ಯದಿಂದ ನಿವೃತ್ತರಾದ ನಂತರ, ನಟ 2003 ರಲ್ಲಿ ಗ್ಲಾಮ್ ಉದ್ಯಮಕ್ಕೆ ಮರಳಿದರು, ಮಧುರ್ ಭಂಡಾರ್ಕರ್ ಪೇಜ್ 3 ಚಿತ್ರದಲ್ಲಿ ನಟಿಸಿದರು.
5. ರೆಹಮಾನ್
ರೆಹಮಾನ್ ಅವರ ವೃತ್ತಿಜೀವನವು 1940 ರ ದಶಕದ ಅಂತ್ಯದಿಂದ 1970 ರ ದಶಕದ ಅಂತ್ಯದವರೆಗೆ ನಡೆಯಿತು, ಅವರನ್ನು ಸುವರ್ಣ ಯುಗದ ಶ್ರೇಷ್ಠ ನಟನನ್ನಾಗಿ ಮಾಡಿತು. ರೆಹಮಾನ್ ಅವರು ಪ್ಯಾಸಾ, ಚೌಧರಿ ಕಾ ಚಂದ್, ವಕ್ತ್, ಜೀತ್, ಬಡಿ ಬೆಹೆನ್, ಪರ್ದೇಸ್ ಮತ್ತು ಇತರ ಚಿತ್ರಗಳನ್ನು ಒಳಗೊಂಡಂತೆ ಅನೇಕ ಪೌರಾಣಿಕ ಮೇರುಕೃತಿಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಪಡೆದರು.
ಇಂದಿನ ಯುವ ಪೀಳಿಗೆಗೆ ಈ ನಟನ ಬಗ್ಗೆ ಹೆಚ್ಚು ತಿಳಿದಿಲ್ಲದಿರಬಹುದು ಅಥವಾ ಕೆಲವರು ಮರೆತಿರಬಹುದು. ಆದರೆ ಅವರು ರಾಯಲ್ ಇಂಡಿಯನ್ ಏರ್ ಫೋರ್ಸ್‌ನಲ್ಲಿ ಪೈಲಟ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎಂಬ ವಿಷಯ ಅವರ ಅಭಿಮಾನಿಗಳಿಗೆ ಸಂಪೂರ್ಣ ಆಶ್ಚರ್ಯಕರ ವಿಷಯವಂತೂ ಹೌದು. ಅವರು ನಟನೆಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ತಮ್ಮ ಪ್ರತಿಷ್ಠಿತ ಪೈಲೆಟ್ ವೃತ್ತಿಯನ್ನು ತೊರೆದರು ಮತ್ತು ನಂತರದ್ದು ಈಗ ಇತಿಹಾಸವಾಗಿದೆ.
6. ರುದ್ರಶಿಶ್ ಮಜುಂದಾರ್
ರುದ್ರಶಿಶ್ ಮಜುಂದಾರ್, ಮಾಜಿ ಸೇನಾ ಅಧಿಕಾರಿಯಾಗಿದ್ದುಕೊಂಡು ನಂತರ ನಟರಾಗಿ, ಚಿಚೋರೆ, ಹವಾ ಸಿಂಗ್, ಮಿಸೆಸ್ ಅಂಡರ್‌ಕವರ್ ಮತ್ತು ಜೆರ್ಸಿಯಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಲಾಸ್ಟ್ ಇನ್ ಟಾಲಿವುಡ್ ಎಂಬ ಬಂಗಾಳಿ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೋಕಾ-ಕೋಲಾ ಮತ್ತು ಎಂಜಿ ಹೆಕ್ಟರ್ ಸೇರಿದಂತೆ ಹಲವಾರು ಜಾಹೀರಾತುಗಳಲ್ಲಿ ಈ ನಟ ಕಾಣಿಸಿಕೊಂಡಿದ್ದಾರೆ. ಅದಕ್ಕೂ ಮುಂಚೆ ಅವರು ಏಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದರು ಎಂಬುದು ಬೆರಳೆಣಿಕೆಯ ಪ್ರೇಕ್ಷಕರಿಗೆ ಮಾತ್ರ ತಿಳಿದಿರುವ ವಿಷಯ.
7. ಅಚ್ಯುತ ಪೋತದಾರ್
ಈ ಮುಖ ನೋಡಿದ ತಕ್ಷಣ ನಮಗೆ ಅವರ ಹೆಸರು ಗೊತ್ತಾಗದಿದ್ದರೂ, ಕೆಹ್ನಾ ಕ್ಯಾ ಚಾಹ್ತೇ ಹೋ ಅನ್ನೋ 3 ಈಡಿಯೆಟ್ಸ್ ಚಿತ್ರದ ದೃಶ್ಯ ನೆನಪಾಗುತ್ತದೆ. 3 ಈಡಿಯಟ್ಸ್, ದಬಾಂಗ್ 2, ಲಗೇ ರಹೋ ಮುನ್ನಾ ಭಾಯ್ ಮತ್ತು ಇತರ ಚಿತ್ರಗಳಲ್ಲಿ ಅವರು ಪುಟ್ಟ ಆದರೆ ಗಮನಾರ್ಹವಾದ ಅಭಿನಯವನ್ನು ನೀಡಿದರು. ಅಚ್ಯುತ್ ಪೋತದಾರ್ ಅವರು ಬಾಲಿವುಡ್‌ನ ಅತ್ಯಂತ ಭರವಸೆಯ ನಟರಾಗಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಸಹ, ಈ ನಟ ಭಾರತೀಯ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದಿದ್ದಾರೆ. ಮತ್ತು ಈಗ ನಾವು ಅವರ ಸಿನಿಮೀಯ ವೃತ್ತಿಜೀವನದ ಬಗ್ಗೆ ಎಲ್ಲವನ್ನೂ ತಿಳಿದಿದ್ದೇವೆ. ಆದರೆ ಚಿತ್ರರಂಗದಲ್ಲಿ ಗಮನ ಸೆಳೆಯುವ ಮೊದಲು ಅವರ ಆರಂಭಿಕ ದಿನಗಳಲ್ಲಿ ಅವರು ಮಧ್ಯಪ್ರದೇಶದ ರೇವಾದಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಭಾರತೀಯ ಸೇನೆಗೆ ಕ್ಯಾಪ್ಟನ್ ಆಗಿ ಸೇರಿದರು ಮತ್ತು 1967 ರಲ್ಲಿ ನಿವೃತ್ತರಾದರು. ಭಾರತೀಯ ತೈಲ ಉದ್ಯಮದಲ್ಲಿ 25 ವರ್ಷಗಳ ಕಾರ್ಯನಿರ್ವಾಹಕರಾಗಿ, ಅವರು ಅಂತಿಮವಾಗಿ ತಮ್ಮ 44ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದರು.
***
🔸 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನೂ ನೋಡಿ: ಭಾರತದಲ್ಲಿ ರೈತರು ಯಾವಾಗಲೂ ಸಾಫ್ಟ್ ಟಾರ್ಗೆಟ್. ಸರ್ಕಾರದ ನೀತಿಗಳು ಉಳ್ಳವರು ಮತ್ತು ಕಾರ್ಪೊರೇಟ್ ಶಕ್ತಿಗಳ ಪರವಾಗಿಯೇ ಇರುತ್ತವೆ. ಇವತ್ತಿನ ಸನ್ನಿವೇಶದಲ್ಲಿ ಭಾರತದ ರೈತ ಅನುಭವಿಸುತ್ತಿರುವ ಸಮಸ್ಯೆ, ಸಂಕಟಗಳ ಕುರಿತು ಬೆಳಕು ಚೆಲ್ಲಿದ್ದಾರೆ ಸಾಮಾಜಿಕ ಹೋರಾಟಗಾರ, ಪತ್ರಕರ್ತ ಮಂಜುನಾಥ ಅದ್ದೆ.
https://www.facebook.com/peepaltvkannada/videos/1081342149415462