ದೆಹಲಿ : ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಬೆಳಕು ಹರಿಸುವ ಅಗತ್ಯವಿರುವುದರಿಂದ ಸುಪ್ರೀಂ ಕೋರ್ಟ್ ಇಂದು ʼವಿವಾಹಿತ ಮತ್ತು ಅವಿವಾಹಿತ ಮಹಿಳೆಯರೂ ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಬಹುದು ʼ ಎಂದು ಮಹತ್ವದ ತೀರ್ಪು ಹೊರಡಿಸಿದೆ.
ನಮ್ಮ ದೇಶದಲ್ಲಿ 1971 ರ ಮೊದಲು ಯಾವುದೇ ರೀತಿಯ ಗರ್ಭಪಾತವನ್ನು ಐಪಿಸಿ 1860ರ ಸೆಕ್ಷನ್ 312 ರ ಪ್ರಕಾರ ಕ್ರಿಮಿನಲ್ ಚಟುವಟಿಗೆ ಎಂದು ಪರಿಗಣಿಸಲಾಗಿತ್ತು. ಕೇವಲ ಗರ್ಭಪಾತ ಮಾಡಿಸದಿದ್ದರೆ ತಾಯಿ ಪ್ರಾಣಕ್ಕೆ ಅಪಾಯ ಎಂದತಹ ಸಮಯದಲ್ಲಿ ಮಾತ್ರ ಗರ್ಭಪಾತಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಗರ್ಭಪಾತವು ಶಿಕ್ಷಾರ್ಹ ಅಪರಾಧವಾಗಿತ್ತು. ಅದಕ್ಕೆ ಸಹಾಯ ಮಾಡಿದವರಿಗೂ ಜೈಲು ಶಿಕ್ಷೆ ನೀಡಲಾಗುತ್ತಿತ್ತು. ಇದರಿಂದ ಅಸುರಕ್ಷಿತ ಗರ್ಭಪಾತಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಗಳು ತಿಳಿಸಿವೆ.
ಈ ಹಿನ್ನಲೆ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಗೊಳಿಸುವಂತೆ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿವಾಹಿತರು ಮತ್ತು ಅವಿವಾಹಿತರೂ ಸುರಕ್ಟಿತ ಗರ್ಭಪಾತ ಮಾಡಿಸಿಕೊಳ್ಳಬಹುದೆಂದು ಆದೇಶ ಹೊರಡಿಸಿದೆ. ʼವಿವಾಹಿತ ಮಹಿಳೆಯರು ಕುಟುಂಬದವರ ಬಲವಂತದಿಂದ ಇಷ್ಟವಿಲ್ಲದೆ ಗರ್ಭ ಧರಿಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಿ ಸಂತ್ರಸ್ತ ಮಹಿಳೆ ಗರ್ಭಪಾತಕ್ಕೆ ಇಚ್ಚಿಸಿದರೆ ಅದನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಿ ಸುರಕ್ಷಿತ ಗರ್ಭಪಾತಕ್ಕೆ ಅವಕಾಶ ನೀಡಬೇಕುʼ ಎಂದು ಹೇಳಿದೆ. ಮತ್ತು ʼʼಮದುವೆಯಾಗದ ಮಹಿಳೆಯರು ಗರ್ಭಧಾರಣೆ ಮಾಡಿಸಿಕೊಳ್ಳಲು ವೈಯಕ್ತಿಕ ಮುಕ್ತಾಯ ಕಾನೂನಿನ ಅಡಿಯಲ್ಲಿ ಹಕ್ಕು ಪಡೆದಿದ್ದಾರೆ. ಹಾಗೆಯೇ ವಿವಾಹಿತ -ಅವಿವಾಹಿತರು ಎಂಬ ಬೇಧವನ್ನು ಗರ್ಭಪಾತ ಕಾನೂನಿನಲ್ಲಿ ಮಾಡಿಲ್ಲʼ ಎಂದು ಸುಪ್ರೀಕೋರ್ಟ್ ಕೊಟ್ಟಿರುವ ಮಹತ್ವದ ತೀರ್ಪಿನಲ್ಲಿ ತಿಳಿಸಿದೆ.
🔸 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನು ನೋಡಿ: tax on share profit | ಶೇರು ಮಾರುಕಟ್ಟೆಯಲ್ಲಿ ಗಳಿಸಿದ ಆದಾಯದ ಮೇಲೆ ಎಷ್ಟು ತೆರಿಗೆ ಕಟ್ಟಬೇಕು ಎಂಬುದು ನಿಮಗೆ ಗೊತ್ತೆ?