ಹಾಸನ: ಹಾಸನಾಂಬೆ ಬಾಗಿಲು ತೆಗೆದು ಒಂದು ದಿನಗಳಾದರೇ ಸಾರ್ವಜನಿಕ ದರ್ಶನೊತ್ಸವ ಶುಕ್ರವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನಿತರಾದರು.
ಇಂದಿನಿಂದ ೯ ದಿನ ಭಕ್ತರಿಗೆ ಹಾಸನಾಂಬೆ ದರ್ಶನವಿದ್ದು, ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ಆರಂಭವಾಗಿರುವ ದರ್ಶನಕ್ಕೆ ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಭಕ್ತರು ಕಾದು ನಿಂತರು. ವರ್ಷದ ಬಳಿಕ ಶಕ್ತಿ ದೇವತೆ ಹಾಸನಾಂಬೆ ದರ್ಶನವನ್ನು ಭಕ್ತರು ಪಡೆಯುತ್ತಿದ್ದಾರೆ. ಈ ವರ್ಷ ಇನ್ನಷ್ಟು ಗಮನವಹಿಸಿ ಧರ್ಮ ದರ್ಶನ ಪಡೆಯುವ ಭಕ್ತರಿಗೆ ಯಾವ ಸಮಸ್ಯೆ ಆಗದಂತೆ ನೆರಳಿನಲ್ಲಿ ನಿಲ್ಲಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲಲ್ಲಿ ಕುಡಿಯುವ ನೀರು ನೀಡಲು ಸ್ಕೌಟ್ ಅಂಡ್ ಗೈಡ್ಸ್ ಸ್ವಯಂ ಸೇವಕರು ಸಿದ್ಧರಿದ್ದರು. ಇನ್ನು ಶೌಚಾಲಯದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಬಂದ ಭಕ್ತರಿಗೆಲ್ಲಾ ರುಚಿಕರವಾದ ಪ್ರಸಾದ ವಿತರಣೆ ಮಾಡಲಾಯಿತು. ಎರಡು ಗಂಟೆಗೊಮ್ಮೆ ವಿಭಿನ್ನವಾದ ಪ್ರಸಾದ ಕೊಡಲಾಗುತಿತ್ತು. ಇನ್ನು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮಗೆ ಕೊಟ್ಟ ಜವಬ್ಧಾರಿಯನ್ನು ಪಾಲಿಸುತ್ತಿದ್ದರು.