ಧಾರಕಾರ ಮಳೆಯಿಂದ ರಾಮನಗರ ರಸ್ತೆಗಳು ಬಂದ್‌: ಎಚ್‌ಡಿಕೆ ಭೇಟಿ

ರಾಮನಗರ: ಧಾರಕಾರ ಮಳೆಯಿಂದ ರಸ್ತೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ಥವಾಗಿರುವ ರಾಮನಗರ ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭೇಟಿಕೊಟ್ಟು ಶೀಘ್ರವೇ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ರಾಮನಗರದಿಂದ ಬೆಂಗಳೂರು, ಮೈಸೂರು ಕಡೆ ಹೋಗುವ ದಾರಿಗಳು ಬಂದ್‌ ಆಗಿದ್ದು ಪ್ರಯಾಣಿಕರು ಈ ಮಾರ್ಗದಲ್ಲಿ ಬರದಿದ್ದರೆ ಒಳಿತು. ಅನಿರ್ವಾಯವಿದ್ದರೆ ಪ್ರಯಾಣಿಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿ ಎಂದು ಎಚ್‌ಡಿಕೆ ಮವನಿ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು