Monday, June 17, 2024

ಸತ್ಯ | ನ್ಯಾಯ |ಧರ್ಮ

ಎದೆ ತುಂಬಿ ಬರುವಂತೆ ತನ್ನ 42ನೇ ಹುಟ್ಟಿದ ದಿನ ಆಚರಿಸಿಕೊಂಡ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪ್ರತಿ ಬಾರಿಯೂ ವಿಶೇಷ ರೀತಿಯಲ್ಲಿ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ. ಮಾಹಿ ಅಂತಹ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಿರುತ್ತಾರೆ, ಅವರು ಈ ಬಾರಿ ಮಾಡಿದ ಕೆಲಸ ನೋಡಿದರೆ ಮನಸ್ಸು, ಹೃದಯವೆರಡೂ ತುಂಬಿ ಬರುತ್ತವೆ. ಇದೇ ಶುಕ್ರವಾರ ಅಂದರೆ ಜುಲೈ 7ರಂದು ಧೋನಿಗೆ 42 ವರ್ಷ ತುಂಬಿತು. ಭಾರತದ ಮಾಜಿ ನಾಯಕನಿಗೆ ಜಗತ್ತಿನ ಮೂಲೆ ಮೂಲೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬಂದಿವೆ. ಆದಾಗ್ಯೂ, ಮಾಹಿ ತನ್ನ 42ನೇ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿದರು, ತಮ್ಮ ಹುಟ್ಟು ಹಬ್ಬದ ಆಚರಣೆಯ ವೀಡಿಯೊವನ್ನು ಅವರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಧೋನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಅವರು ತಮ್ಮ ಸಾಕು ನಾಯಿಗಳೊಂದಿಗೆ ಕೇಕ್ ಕತ್ತರಿಸುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ, ಸಣ್ಣ ಕೇಕ್ ಒಂದನ್ನು ಮೇಜಿನ ಮೇಲೆ ಇರಿಸಲಾಗಿದೆ, ಮಾಹಿ ತನ್ನ ನಾಯಿಗಳ ಸಮ್ಮುಖದಲ್ಲಿ ಅದನ್ನು ಕತ್ತರಿಸುತ್ತಿರುವುದನ್ನು ಕಾಣಬಹುದು. ಕೇಕ್ ಕತ್ತರಿಸಿದ ನಂತರ, ಧೋನಿ ಪದೇ ಪದೇ ತಮ್ಮ ನಾಯಿಗಳಿಗೆ ಕೇಕ್ ತಿನ್ನಿಸುತ್ತಾರೆ. ವೀಡಿಯೊದಲ್ಲಿ, ಇದರಲ್ಲಿ ಮಾಹಿ ತನ್ನ ನಾಯಿಗಳೊಡನೆ ಸಂಭ್ರಮಿಸುವುದರ ಜೊತೆಗೆ ಅವುಗಳೊಡನೆ ಮಾತನಾಡುವುದನ್ನು ಸಹ ನೋಡಬಹುದು. ಮಾಹಿ ಈ ಹೊಸ ವಿಡಿಯೋವನ್ನು ಜನರು ಬಹಳವಾಗಿ ಇಷ್ಟಪಡುತ್ತಿದ್ದಾರೆ.

https://www.instagram.com/reel/CubuFqQhDvB/?utm_source=ig_embed&ig_rid=22a0ce6e-eac1-4355-bda3-146711310a57

ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಧೋನಿ

ಐಪಿಎಲ್ 2023ರ ಅಂತ್ಯದ ನಂತರ ಎಂಎಸ್ ಧೋನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಸೀಜನ್ನಿನಲ್ಲಿ, ಮಾಹಿ ತನ್ನ ಎಡಗಾಲಿನ ಮೊಣಕಾಲು ನೋವಿನಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಬಾರಿ ಚಾಂಪಿಯನ್ ಮಾಡಿದ ನಂತರ ಧೋನಿ ನೇರವಾಗಿ ಮುಂಬೈ ತಲುಪಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇತ್ತೀಚಿ ದಿನಗಳಲ್ಲಿ ಮಾಹಿ ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು