‘ಧ್ವಜ ಖರೀದಿಸದಿದ್ದರೆ ಪಡಿತರ ಕೊಡಲ್ಲ’ : ಹರಿಯಾಣದಲ್ಲಿ ಬಡವರ ಮೇಲೆ ಪ್ರಹಾರ

ಬಿಜೆಪಿ ಪಕ್ಷದ ಆಡಳಿತ ಇರುವ ಹರಿಯಾಣ ರಾಜ್ಯದ ಪಡಿತರ ಅಂಗಡಿಗಳಲ್ಲಿ ಅಂಗಡಿ ಮಾಲಿಕರು ಗ್ರಾಹಕರಿಗೆ 20 ರೂಪಾಯಿಯ ರಾಷ್ಟ್ರಧ್ವಜ ಖರೀದಿಸಲು ತಾಕೀತು ಮಾಡಿದೆ. ಅಕಸ್ಮಾತ್ ಗ್ರಾಹಕರು ರಾಷ್ಟ್ರಧ್ವಜ ಖರೀದಿ ಮಾಡದೇ ಇದ್ದರೆ ಪಡಿತರ ನೀಡಲಾಗುವುದಿಲ್ಲ, ಇದು ಸರ್ಕಾರದ ಕಡ್ಡಾಯ ಆದೇಶ ಎಂಬುದಾಗಿ ತಿಳಿಸಿದ್ದಾರೆ.

ಅಂಗಡಿ ಮಾಲಿಕರ ಒತ್ತಾಯಪೂರ್ವಕ ಧ್ವಜ ವಿತರಣೆ ಬಗ್ಗೆ ಸ್ಥಳೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದು, ಹಣವಿಲ್ಲದವರು ಧ್ವಜ ಖರೀದಿಸಲು ಶಕ್ತರಿರುವುದಿಲ್ಲ, ಅವರು ಬರಿಗೈಯಲ್ಲಿ ವಾಪಸಾದರೆ ಹೊಟ್ಟೆಗೆ ಏನು ತಿನ್ನಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಬೆಲೆಯೇರಿಕೆಯಿಂದ ಸಾಮಾನ್ಯ ಜನರು ಕಂಗೆಟ್ಟಿದ್ದು ಅಗತ್ಯ ವಸ್ತುಗಳೂ ಸಹ ಬಡವನಿಗೆ ಕೈಗೆಟುಕದಂತಾಗಿವೆ. ಗ್ಯಾಸ್, ಪೆಟ್ರೋಲ್ ಡೀಸೆಲ್, ಆಹಾರ ಪದಾರ್ಥಗಳಂತಹ ಮೂಲಭೂತ ವಸ್ತುಗಳೂ ಇಂದು ಸಾಮಾನ್ಯ ಜನರ ಕೈಸುಡುವಂತಹ ದಿನದಲ್ಲಿ ಸರ್ಕಾರ ಈ ರೀತಿಯಾಗಿ ಧ್ವಜ ಖರೀದಿಯನ್ನು ಕಡ್ಡಾಯಗೊಳಿಸಿದರ ಬಗ್ಗೆ ಮತ್ತು ಪಡಿತರ ಕೊಡಲು ನಿರಾಕರಿಸಿದ್ದು ಅಕ್ಷರಶಃ ತಪ್ಪು ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು