ಇತ್ತೀಚಿನ ಯೂ ಟ್ಯೂಬ್ ಸೂಪರ್ ಸ್ಟಾರ್ ಧ್ರುವ್ ರಾಠಿಯ ಹೊಸ ವಿಡಿಯೋ ರಿಲೀಸ್ ಆದ ಹತ್ತು – ಹನ್ನೊಂದು ಗಂಟೆಯ ಒಳಗೆ ವೀಕ್ಷಣೆಯ ಸಂಖ್ಯೆ ಸುಮಾರು ಐವತ್ತು ಲಕ್ಷದ ಆಸು-ಪಾಸಿಗೆ ತಲುಪಿದೆ.
ಧ್ರುವ್ ರಾಠಿ ಈ ಬಾರಿ ತನ್ನ ಹೊಸ ವಿಡೀಯೋದಲ್ಲಿ ನರೇಂದ್ರ ಮೋದಿ ಹೇಗೆ ಸ್ವತಂತ್ರ ಸಂಸ್ಥೆಗಳನ್ನು ತನ್ನಿಷ್ಟಕ್ಕೆ ಬಳಸಿಕೊಂಡು ವಿರೋಧ ಪಕ್ಷಗಳನ್ನು ಮತ್ತು ಅದರ ನಾಯಕರನ್ನು ಹಣಿಯುತ್ತಿದ್ದಾರೆನ್ನುವುದನ್ನು ತೋರಿಸಿದ್ದಾರೆ.
ಜೊತೆಗೆ ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತಾಗಿಯೂ ಬಹಳ ವಿವರವಾಗಿ ತಿಳಿಸಿದ್ದಾರೆ. ಅದರೊಂದಿಗೆ ಬೆಲೆಯೇರಿಕೆ, ನಿರುದ್ಯೋಗ ಮುಂತಾದ ದೇಶದ ಸಮಸ್ಯೆಗಳ ಕುರಿತು ಸಹ ಮಾತನಾಡಿದ್ದಾರೆ.
ದೇಶ ಹೇಗೆ ಇಂಚಿಂಚಾಗಿ ಸರ್ವಾಧಿಕಾರದತ್ತ ತೆವಳುತ್ತಿದೆ ಮತ್ತು ಅದನ್ನು ಮತ್ತೆ ಪ್ರಜಾಪ್ರಭುತ್ವದತ್ತ ತರಲು ಏನು ಮಾಡಬೇಕು ಎನ್ನುವುದನ್ನು ಸಹ ಈ ವಿಡಿಯೋದಲ್ಲಿ ವಿವರಿಸಲಾಗಿದೆ.
ನೀವು ವಿಡಿಯೋವನ್ನುಈ ಲಿಂಕ್ ಮೂಲಕವೂ ನೋಡಬಹುದು