ಡಿಕೆ ಶಿವಕುಮಾರ್ ಪ್ರೆಸ್ ಮೀಟ್ ಮತ್ತು ಪ್ರಮುಖ ಯೋಜನೆಗಳ ಅವಲೋಕನ

“ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬೆನ್ನೆಲೆ ಇತ್ತೀಚಿನ ಪ್ರೆಸ್ ಮೀಟ್‌ನಲ್ಲಿ ಪ್ರಸ್ತಾಪಿಸಿದ ಪ್ರಮುಖ ಯೋಜನೆಗಳು/ಕಾರ್ಯಕ್ರಮಗಳ ಒಂದು ಅವಲೋಕನ” ಕಾನೂನು ವಿದ್ಯಾರ್ಥಿ ಸಚಿನ್ ಒಕ್ಕಲಿಗ ಅವರ ಬರಹದಲ್ಲಿ

  • ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ.
  • ಎ-ಖಾತಾ ಮತ್ತು ಬಿ-ಖಾತಾ ಸಮಸ್ಯೆಗಳ ಶೀಘ್ರ ಪರಿಹಾರ.
  • ಬೆಂಗಳೂರು ಹಾಗೂ ರಾಜ್ಯದ ರಸ್ತೆ ಅಭಿವೃದ್ಧಿ ಕಾರ್ಯಕ್ರಮ.
  • 10,000 ಭಾರತ್ ಜೋಡೋ ಯುವಕರ ಕ್ಲಬ್‌ಗಳ ಸ್ಥಾಪನೆ.
  • ಎನ್‌ಆರ್‌ಐ (ವಿದೇಶಿ ಕನ್ನಡಿಗರ) ಇಲಾಖೆ ಸ್ಥಾಪನೆ.
  • ಸಾರ್ವಜನಿಕ ದೂರು ನಿವಾರಣಾ ಇಲಾಖೆ ಆರಂಭ.
  • ಯುವಕರಿಗೆ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ.
  • ಹೂಡಿಕೆ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಕ್ರಮಗಳು.

ಇನ್ನು ವಿಸ್ತೃತವಾಗಿ ನೋಡೋದಾದ್ರೆ ನನ್ನ ಅನಿಸಿಕೆ ಮತ್ತು ಅಭಿಪ್ರಾಯಗಳು :-

  1. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್:-
    ರಾಜ್ಯದ ಎಲ್ಲಾ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿಯ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಅನುಕೂಲಕರವಾಗಿದೆ. ಆದ್ರೆ ಇವರುಗಳು ಇದನ್ನೇ ಇನ್ನೊಂದು ರೀತಿಯಲ್ಲೂ ಮಾಡಬಹುದಿತ್ತು ಅದೇನೆಂದರೆ ಕನ್ನಡ ಮತ್ತು ಸರ್ಕಾರಿ ಶಾಲಾ ಕಾಲೇಜಲ್ಲಿ ಮಾತ್ರ ಕಲಿತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯನ್ನು ಕೊಟ್ಟಿದ್ದರೆ ಚೆನ್ನಾಗಿತ್ತು ಏಕೆಂದರೆ ಸರ್ಕಾರಿ ಶಾಲಾ ಕಾಲೇಜುಗಳ ದಾಖಲಾತಿ ಸಂಖ್ಯೆಯು ಇದರಿಂದ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇತ್ತೇನೋ ಅದರಿಂದ.
  2. 10,000 ಭಾರತ್ ಜೋಡೋ ಯುವಕರ ಸಂಘಗಳ ಸ್ಥಾಪನೆ:-
    ರಾಜ್ಯದಾದ್ಯಂತ 10,000 ಯುವಕರ ಸಂಘಗಳನ್ನು ಆರಂಭಿಸಿ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಯೋಜನೆ ರೂಪಿಸುತ್ತೇವೆ ಎಂದು ಹೇಳಿದ್ದಾರೆ. ಇದು ಒಳ್ಳೆಯದೇ ಆದರೆ ಕುತಂತ್ರ ಸಂಸ್ಕೃತದ ಭಾರತ ಜೋಡೊ ಎಂಬ ಹೆಸರನ್ನ ಬದಲಿಸಿ “ಕನ್ನಡ ನಾಡು ಯುವ ಬಳಗ” ಎಂದು ಇಡುವುದು ಒಳ್ಳೆಯದು…ಕನ್ನಡ ನುಡಿ ಆಧಾರಿತ ಕರ್ನಾಟಕದಲ್ಲಿ ಪ್ರತಿಯೊಬ್ಬರನ್ನು ಕನ್ನಡಕರಣಗೊಳಿಸುವುದು ಸರಿಯಾದ ಕ್ರಮ ವಿನಃ ಭಾರತ ರಾಷ್ಟ್ರೀಕರಣಗೊಳಿಸುವುದು ನಾಡದ್ರೋಹದ ಕ್ರಮವಾಗುತ್ತದೆ. ಮೇಲಾಗಿ ಭಾರತ ಎಂಬುದು ಹಲವು ರಾಜ್ಯಗಳ ಒಕ್ಕೂಟ ವ್ಯವಸ್ಥೆ ಮಾತ್ರ ಅದೊಂದು ದೇಶವಲ್ಲ ರಾಷ್ಟ್ರವಲ್ಲ. ಸಂವಿಧಾನದ ಆರ್ಟಿಕಲ್ 1 ಕೂಡ ಇಂಡಿಯಾ ಯಾವಾಗಲೂ ಒಕ್ಕೂಟವಾಗೆ ಇರಬೇಕು ಎಂದು ಹೇಳುತ್ತದೆ.
  3. ಎ-ಖಾತಾ ಮತ್ತು ಬಿ-ಖಾತಾ ಸಮಸ್ಯೆ ಪರಿಹಾರ:-
    ಬೆಂಗಳೂರಿಗೆ ಮಾತ್ರ ಈ ಕಾರ್ಯಕ್ರಮ ಇತ್ತು ಇದನ್ನು ಈಗ ರಾಜ್ಯಾದ್ಯಂತ ಇದನ್ನು ಮಾಡ್ತೀವಿ ಅಂತ ಹೇಳಿದ್ದಾರೆ. ಇನ್ನು ಮನೆ ನಿರ್ಮಾಣ ಮತ್ತು ಆಸ್ತಿ ನೋಂದಣಿ ಸಂಬಂಧಿತ ಎ-ಖಾತಾ ಹಾಗೂ ಬಿ-ಖಾತಾ ಸಮಸ್ಯೆಗಳನ್ನು ಸರಳವಾಗಿ ಮತ್ತು ಶೀಘ್ರವಾಗಿ ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದು ಒಂದು ರೀತಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವಾಗಿದ್ದು, ಇಲ್ಲಿ ಎಷ್ಟೋ ಅಕ್ರಮಗಳನ್ನು ಸಕ್ರಮ ಮಾಡಲು ಹೊರಟಿದ್ದಾರೆ. ಇದನ್ನು ಎಷ್ಟು ದಿನ ಅಥವಾ ಎಷ್ಟರಮಟ್ಟಿಗೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
  4. ರಸ್ತೆ ಅಭಿವೃದ್ಧಿ ಕಾರ್ಯಕ್ರಮ:-
    ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಹದಗೆಟ್ಟ ರಸ್ತೆಗಳನ್ನು ಸುಧಾರಿಸಿ,ಗುಂಡಿ ಮುಕ್ತ ರಸ್ತೆಗಳ ನಿರ್ಮಾಣ ಮಾಡಲು ಸುಮಾರು 2000 ಸಾವಿರ ಕೋಟಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಕಮಿಷನ್ ಆಸೆಗೆ ಕಳಪೆ ಕಾಮಗಾರಿ ಮಾಡದಂತೆ ಜನರು ಕಾಯಬೇಕು.
  5. ಖಾಸಗಿ ಉದ್ಯೋಗ ವಿನಿಮಯ ಕೇಂದ್ರ:-
    ನಿರುದ್ಯೋಗಿ ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಲು ವಿಶೇಷ ಉದ್ಯೋಗ ವಿನಿಮಯ (Employment Exchange) ವ್ಯವಸ್ಥೆ ಆರಂಭಿಸುವುದಾಗಿ ಹೇಳಿದಾರೆ. ಇದು ಒಳ್ಳೆಯ ಕಾರ್ಯಕ್ರಮವೇ,ಈ ಕಾರ್ಯಕ್ರಮ ಜಾರಿಯಾದರೆ ಕನ್ನಡನಾಡಿನ ಸಾಕಷ್ಟು ಲಕ್ಷ ನಿರುದ್ಯೋಗಿ ಯುವಕ ಯುವತಿರಿಗೆ ಅನುಕೂಲ ಆಗುತ್ತದೆ ಆದ್ರೆ ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ, ಯಾಕೆಂದ್ರೆ ಖಾಸಗಿ ವಲಯಗಳಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಥವಾ ಅಲ್ಲಿ ಉದ್ಯೋಗಗಳು ಲಭಿಸುವಂತೆ ಮಾಡುತ್ತೀವಿ ಅಂತ ಹೇಳಿ ನಮ್ಮ ಸರ್ಕಾರಿ ಸೌಮ್ಯದಲ್ಲಿರುವ ಸಂಸ್ಥೆಗಳನ್ನು ಖಾಸಗಿಯವರ ತೆಕ್ಕೆಗೆ ಹಾಕಿಬಿಟ್ಟರೆ ಏನು ಮಾಡೋದು ಅನ್ನುವ ಭಯ ಇದೆ ನನಗೆ. ನೋಡೋಣ ಏನಾಗುತ್ತದೆ ಎಂದು.
  6. ಸರ್ಕಾರಿ ನೇಮಕಾತಿ ಕ್ಯಾಲೆಂಡರ್ :-
    ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಲು ನೇಮಕಾತಿ ವೇಳಾಪಟ್ಟಿಯನ್ನು (Recruitment Calendar) ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇದು ನಮ್ಮ ನಾವು Dravida ಕನ್ನಡಿಗರು ಚಳುವಳಿಯ Yallappa Hegade, ಅಬಿ ಒಕ್ಕಲಿಗ ರವರ ನೇತೃತ್ವದಲ್ಲಿ ಜನ ಸಾಮಾನ್ಯರ ವೇದಿಕೆ ಅಂತ ಮಾಡಿಕೊಂಡು ನಮ್ಮ ಕನ್ನಡನಾಡಿನಲ್ಲಿ ಯುಪಿಎಸ್ಸಿ ಮಾದರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡುವ ಮೂಲಕ ಸರ್ಕಾರಿ ಹುದ್ದೆಗಗಳಿಗೆ ನೇಮಕಾತಿಗಳನ್ನು ಮಾಡಿಕೊಳ್ಳಬೇಕೆಂದು ಒಂದು ಬೇಡಿಕೆಯನ್ನು ಸಹ ಸರ್ಕಾರದ ಮುಂದಿಟ್ಟಿದ್ದರು ಅದು ಸಕರವಾಗುತ್ತಿದೆ. ಜೊತೆಗೆ ಕನ್ನಡನಾಡಿನಲ್ಲಿ ಖಾಲಿಯಿರುವ 2,80,000 ಉದ್ಯೋಗಗಳನ್ನು ಭರ್ತಿ ಮಾಡಬೇಕೆಂದು ಇವರುಗಳೇ ಡಿಸೆಂಬರ್ 1 2025 ರಂದು ಧಾರವಾಡ ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಬೃಹತ್ ಪ್ರತಿಭಟನೆಯನ್ನು ಮಾಡಿದರು. ಇದರ ಬೆನ್ನೆಲೆ ಈ ತಿಂಗಳಿನೊಳಗೆ ಶೀಘ್ರವೇ 56,000 ಉದ್ಯೋಗಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
  7. ಎನ್‌ಆರ್‌ಐ ಇಲಾಖೆ ಸ್ಥಾಪನೆ:-
    ವಿದೇಶದಲ್ಲಿರುವ ಕನ್ನಡಿಗರ ಹೂಡಿಕೆ ಮತ್ತು ಸಂಪರ್ಕವನ್ನು ಹೆಚ್ಚಿಸಲು ವಿಶೇಷ ಎನ್‌ಆರ್‌ಐ ಇಲಾಖೆಯನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ ಇದು ಒಳ್ಳೆಯ ನಡೆ ಪ್ರಪಂಚಾದ್ಯಂತ ಇರುವ ಸುಮಾರು 200 ದೇಶಗಳಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಯಡಿ ತರಲು ಮುಂದಾಗಿರುವುದು ಸರಿಯಾಗಿದೆ. ವಿದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರ ಅಂಕಿ ಸಂಖ್ಯೆಗಳು ಅವರ ಕಷ್ಟ ಸುಖಗಳು ಜೊತೆಗೆ ನಮ್ಮನಾಡಿನ ಕನ್ನಡ ನುಡಿ, ಸಾಹಿತ್ಯ, ಕಲೆ ಸಂಸ್ಕೃತಿಯನ್ನು ವಿದೇಶಗಳಲ್ಲಿ ಪಸರಿಸಲು ಸಹಕಾರಿಯಾಗಲಿದೆ ಎಂಬುದು ನನ್ನ ಅಭಿಪ್ರಾಯ ಇದರ ಜೊತೆಗೆ ಹಿಂದಿ ಭಾಷೆಗೆ ವಿದೇಶಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವಂತೆ ಕನ್ನಡ ಬೆಳವಣಿಗೆಗೂ ಪ್ರಾಮುಖ್ಯತೆ ಕೊಟ್ಟಂತಾಗುತ್ತದೆ. ಹಾಗೆಯೇ ಜನವರಿ 10 ರಂದು ವಿಶ್ವ ಹಿಂದಿ ದಿವಸ ಎಂದು ಆಚರಣೆ ಮಾಡುತ್ತಾರೋ ಅದೇ ರೀತಿಯಲ್ಲಿ ಅದೇ ದಿನ ಪ್ರಪಂಚಾದ್ಯಂತ 200 ದೇಶಗಳಲ್ಲೂ #ವಿಶ್ವಕನ್ನಡದಿನ ಎಂದು ಆಚರಣೆ ಮಾಡುವಂತೆ ಆಗಲಿ….ಜೊತೆಗೆ ವಿದೇಶಗಳಲ್ಲಿರುವ ಕನ್ನಡಿಗರು ಕನ್ನಡ ನಾಡಿನಲ್ಲಿ ಹೂಡಿಕೆ ಮಾಡಲು ಇಚ್ಚಿಸಿದರೆ ಆದಷ್ಟು ಬೆಂಗಳೂರು ನಗರವನ್ನು ಬಿಟ್ಟು ಕನ್ನಡ ನಾಡಿನ ಸಮಗ್ರ ಬೆಳವಣಿಗೆಗಾಗಿ ಉತ್ತರ ಕರ್ನಾಟಕದ ಭಾಗಗಳ ಅಭಿವೃದ್ಧಿಗಾಗಿ ಅಲ್ಲಿ ಹೂಡಿಕೆ ಮಾಡಲು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುವುದು ಒಳ್ಳೆಯದು….
  8. ಸಾರ್ವಜನಿಕ ದೂರು ನಿವಾರಣಾ ಇಲಾಖೆ:-
    ಜನರ ಸಮಸ್ಯೆಗಳನ್ನು ತ್ವರಿತವಾಗಿ ಆಲಿಸಿ ಪರಿಹರಿಸಲು ಪ್ರತ್ಯೇಕ ಸಾರ್ವಜನಿಕ ದೂರು ನಿವಾರಣಾ ಇಲಾಖೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ನೋಡಬೇಕಿದೆ ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂದು…. ಒಂದು ಸೂರಿನಡಿ ದೂರು ಸಲ್ಲಿಸಬೇಕು ಅದನ್ನು ನೋಡಲು ಒಂದು ಇಲಾಖೆ ಒಂದು ಮಂತ್ರಿ ಆದರೆ ಬೇರೆ ಎಲ್ಲಾ ಮಂತ್ರಿಗಳ ಸಂಪರ್ಕಿಸುವಂತೆಯೇ ಇಲ್ಲ ಜನ ಸಾಮಾನ್ಯರು. ಅವರುಗಳು ಆರಾಮಾಗಿ ವೈಯಕ್ತಿಕ ವ್ಯವಹಾರ ಮಾಡಿಕೊಂಡಿರಲು ಇನ್ನೂ ಅನುಕೂಲ. ಆದುದ್ದರಿಂದ ಇದನ್ನು ಕೈ ಬಿಟ್ಟು ಶಾಸಕರಿಗೆ ಮಂತ್ರಿಗಳಿಗೆ ಟೈಂ ಟೇಬಲ್ ನಿಗದಿಗೊಳಿಸಿ ಜನರು ಭೇಟಿ ಮಾಡಲು appointment ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಡುವುದು ಒಳ್ಳೆಯದು.
  9. ರೈತರ ವಲಸೆ ತಡೆ ಕ್ರಮ:-
    ರೈತರು ಕೃಷಿಯನ್ನು ಬಿಟ್ಟು ವಲಸೆ ಹೋಗುವ ಪರಿಸ್ಥಿತಿಯನ್ನು ತಡೆಯಲು ವಿಶೇಷ ಯೋಜನೆಗಳನ್ನು ರೂಪಿಸುವುದಾಗಿ ಸರ್ಕಾರ ತಿಳಿಸಿದ್ದಾರೆ. ಈಗಾಗಲೇ ರೈತರು ವ್ಯವಸಾಯವನ್ನು ಬಿಟ್ಟು ಬೇರೆ ಬೇರೆ ಉದ್ಯೋಗಗಳನ್ನು ಬಯಸಿ ಎಲ್ಲರೂ ದೊಡ್ಡ ದೊಡ್ಡ ನಗರ, ಪಟ್ಟಣಗಳನ್ನು ಸೇರುತ್ತಿದ್ದಾರೆ. ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ವ್ಯವಸಾಯ ಮಾಡಲು ಸರಿಯಾದ ಸಮಯಕ್ಕೆ ನೀರಿನ ಕೊರತೆ, ಮಳೆಯ ಸಮಸ್ಯೆ, ಬಿತ್ತನೆ ಬೀಜ ಸಮಸ್ಯೆ, ರಸ ಗೊಬ್ಬರಗಳ ಬೆಲೆ ಏರಿಕೆ, ಬೆಂಬಲ ಬೆಲೆ ಇಲ್ಲದಿರುವುದು, ಮಾರುಕಟ್ಟೆ ಸಮಸ್ಯೆ,ರೈತ ಯುವಕರಿಗೆ ಮದುವೆಗೆ ಆಗಲು ಹೆಣ್ಣು ಸಿಗದೇ ಇರುವುದು, ಅನಿಶ್ಚಿತ ಮಳೆ, ಕಾಡು ಪ್ರಾಣಿಗಳ ಕಾಟ, ಸಾಲದ ಸುಳಿ ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ….ವ್ಯವಸಾಯ ಎಂದರೆ ನಾನು ಸಾಯ ಮನೆ ಮಂದಿ ಎಲ್ಲಾ ಸಾಯ ಎಂಬಂತಾಗಿದೆ ರೈತನ ಪ್ರಸ್ತುತ ಸ್ಥಿತಿಗತಿ ನೋಡೋಣ ಇದಕ್ಕೆಲ್ಲ ಯಾವ ರೀತಿ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ ಎಂದು…. ಅಷ್ಟೇ!

ಒಟ್ಟಾರೆಯಾಗಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಅವರ ಸರ್ಕಾರದ ಮೊದಲ ಘೋಷಣೆಗಳು ಇವಾಗಿದ್ದು ಇವುಗಳು ಎಷ್ಟರಮಟ್ಟಿಗೆ ಸಾಮಾನ್ಯ ಜನರ ಕೈಗೆ ಏಟುಗುತ್ತವೆ, ಸಿಗುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ… ಏಕೆಂದರೆ ಡಿಕೆ ಶಿವಕುಮಾರ್ ಅವರ ಮೇಲೆ ಜನರು ಯಾವುದೇ ನಿರೀಕ್ಷೆ ಇಟ್ಟುಕೊಳ್ಳದ ಕಾರಣದಿಂದ ಸುಮಾರು ಎರಡು ವರ್ಷದ ಮುಖ್ಯಮಂತ್ರಿ ಅವಧಿಯನ್ನು ಇಂತಹ ಯೋಜನೆಗಳನ್ನು ಘೋಷಣೆ ಮಾಡಿ ದುಡ್ಡನ್ನು ಬಿಡುಗಡೆ ಮಾಡುವ ಮೂಲಕ ದೋಚಿಕೊಂಡರು ಅಥವಾ ಲಪಟಾಯಿಸಿದರು ಆಶ್ಚರ್ಯಪಡಬೇಕಿಲ್ಲ.

Related Articles

ಇತ್ತೀಚಿನ ಸುದ್ದಿಗಳು