Thursday, June 13, 2024

ಸತ್ಯ | ನ್ಯಾಯ |ಧರ್ಮ

ಬಿಯರ್ ಬಾಟೆಲ್ ಮೇಲೆ ಡಿಕೆ ಸುರೇಶ್ ಫೋಟೋ ; ವೈರಲ್ ಸುದ್ದಿಯ ಅಸಲೀಯತ್ತೇನು?

ದೇಶದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಸರ್ವೆ ಸಾಮಾನ್ಯವಾಗಿದೆ. ಇದರ ಜೊತೆಗೆ ಫೇಕ್ ನ್ಯೂಸ್ ಗಳ ಹಾವಳಿ ಸಹ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಶಿವಮೊಗ್ಗ ಬಿಜೆಪಿ ಪಕ್ಷದ ಅಧಿಕೃತ ಫೇಸ್ಬುಕ್ ಪೇಜ್ ನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಸದ ಡಿಕೆ ಸುರೇಶ್ ಗೆ ಸಂಬಂಧಿಸಿದ ಫೋಟೋ ಹರಿದಾಡುತ್ತಿದ್ದು, ‘ಹೊಸ ಗ್ಯಾರಂಟಿ’ ಎಂಬ ಶೀರ್ಷಿಕೆ ಅಡಿಯಲ್ಲಿ ವೈರಲ್ ಆಗಿದೆ.

https://www.facebook.com/bjp4shivamogga?mibextid=ZbWKwL

ವೈರಲ್ ಆಗುತ್ತಿರುವ ಫೋಟೋದಲ್ಲಿ ಬಿಯರ್ ಬಾಟಲಿಯ ಮೇಲೆ ಡಿಕೆ ಸುರೇಶ್ ಅವರ ಚಿತ್ರ ಅಂಟಿಸಿದಂತಿದ್ದು, ಮೇಲೆ ಚಿಕ್ಕದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋಟೋ ಕೂಡಾ ಫೋಟೋದ ಒಳಗೆ ಇದೆ.

https://www.facebook.com/bjp4shivamogga?mibextid=ZbWKwL

ಸಧ್ಯ ಶಿವಮೊಗ್ಗ ಬಿಜೆಪಿ ಅಧಿಕೃತ ಫೇಸ್ಬುಕ್ ಪೇಜ್ ಹಾಗೂ ಇತರೆ ಫೇಸ್ಬುಕ್ ಖಾತೆಗಳ ಮೂಲಕ ವೈರಲ್ ಆಗುತ್ತಿರುವ ಫೋಟೋ ಅಸಲಿಯದ್ದು ಅಲ್ಲ ಎಂದು ತಿಳಿದು ಬಂದಿದೆ. ಈ ಫೋಟೋ 2023 ರ ವರ್ಷದ್ದಾಗಿದ್ದು, ಬೇರೆ ಯಾವುದೋ ಫೋಟೋಗೆ ಡಿಕೆ ಸುರೇಶ್ ಫೋಟೋ ಹಾಕಿ ಎಡಿಟ್ ಮಾಡಲಾಗಿದೆ.

2023 ರ ನವೆಂಬರ್ ತಿಂಗಳಲ್ಲಿ ತೆಲಂಗಾಣದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಡೆಸಿದ ಪ್ರಚಾರದ ಸಂದರ್ಭದಲ್ಲಿ ತಗೆದ ಫೋಟೋ ಬಳಸಿಕೊಂಡು ಅದಕ್ಕೆ ಡಿಕೆ ಸುರೇಶ್ ಅವರಿರುವ ಭಾವಚಿತ್ರ ಅಂಟಿಸಿದ ಎಡಿಟ್ ಮಾಡಿದ ಫೋಟೋ ಇದಾಗಿದೆ. ಈ ಒಂದು ಸುಳ್ಳು ಸುದ್ದಿಯನ್ನು ಬಿಜೆಪಿ ಪಕ್ಷ ಎಲ್ಲಾ ಕಡೆಗೂ ವೈರಲ್ ಮಾಡುತ್ತಿದ್ದು ಈಗಾಗಲೇ 150 ಕ್ಕೂ ಹೆಚ್ಚು ಮಂದಿ ಶೇರ್ ಮಾಡಿರುವುದು ಈಗ ಬೆಳಕಿಗೆ ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು