Home ರಾಜಕೀಯ “ನೋ ಕಾಮೆಂಟ್ಸ್” ರಿಷಬ್ ಶೆಟ್ಟಿಯನ್ನೇ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಮಾಡಲು ಹೊರಟ ಡಿಕೆಶಿ, ಕಾಂಗ್ರೆಸ್‌ನಲ್ಲೇ ತೀವ್ರ...

“ನೋ ಕಾಮೆಂಟ್ಸ್” ರಿಷಬ್ ಶೆಟ್ಟಿಯನ್ನೇ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಮಾಡಲು ಹೊರಟ ಡಿಕೆಶಿ, ಕಾಂಗ್ರೆಸ್‌ನಲ್ಲೇ ತೀವ್ರ ವಿರೋಧ

0

ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ನಟ ರಿಷಬ್ ಶೆಟ್ಟಿ ಅವರನ್ನು ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಅಧಿಕೃತವಾಗಿ ಹೊರಬೀಳುವ ಸಾಧ್ಯತೆಗಳಿವೆ. ಆದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ಬಗ್ಗೆ ಈ ಹಿಂದಿನಿಂದಲೂ ಅಸಡ್ಡೆಯಲ್ಲೇ ತನ್ನನ್ನು ಬಿಂಬಿಸಿಕೊಂಡು ಬಂದ ನಟ ರಿಷಬ್ ಶೆಟ್ಟಿ ಆಯ್ಕೆಯ ಬಗ್ಗೆ ಕಾಂಗ್ರೆಸ್ ಪಾಳೆಯದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.

ಹಲವು ಬಾರಿ ನಟ ರಿಷಬ್ ಶೆಟ್ಟಿ ಕಾಂಗ್ರೆಸ್ ನಾಯಕರ ಬಗ್ಗೆ ತೀರಾ ನಿಕೃಷ್ಟವಾಗಿ ಕಂಡ ವಿಡಿಯೋಗಳು ಮತ್ತು ತನ್ನ ಬಿಜೆಪಿ ಪರ ನಿಲುವುಗಳ ಬಗೆಗಿನ ಹೇಳಿಕೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಡಿಕೆ ಶಿವಕುಮಾರ್ ಅವರ ಸಾಫ್ಟ್ ಹಿಂದುತ್ವದ ನಡೆ ಈ ಮೂಲಕ ಹೊರಬಿದ್ದಿದೆ ಎಂದು ಜಾಲತಾಣದಲ್ಲಿ ಮುಖ್ಯಮಂತ್ರಿ ಡಿಕೆಶಿ ನಡೆ ಬಗ್ಗೆ ವಿರೋಧ ವ್ಯಕ್ತವಾಗಿದೆ.

ಈ ಹಿಂದೆ ಖಾಸಗಿ ಮಾಧ್ಯಮವೊಂದು ನರೇಂದ್ರ ಮೋದಿ ಬಗ್ಗೆ ಕೇಳಿದಾಗ ಅದ್ಭುತ ನಾಯಕ ಎಂದ ರಿಷಬ್ ಶೆಟ್ಟಿ ಮುಂದಿನ ಪ್ರಶ್ನೆ ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ “ನೋ ಕಾಮೆಂಟ್ಸ್” ಎಂದ ಮಾತು ಅತಿ ಹೆಚ್ಚು ಟೀಕೆಗೆ ಗುರಿಯಾಗಿತ್ತು. ಆ ಮೂಲಕ ಮೊದಲ ಬಾರಿಗೆ ಬಹಿರಂಗವಾಗಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯಬರಿತವಾಗಿ ರಿಷಬ್ ಶೆಟ್ಟಿ ಮಾತನಾಡಿದ್ದರು.

ಅಷ್ಟೇ ಅಲ್ಲದೆ, ಈಗ ಕೇವಲ ಒಂದು ತಿಂಗಳ ಹಿಂದೆ ಬಿಜೆಪಿ ನಾಯಕ ಅಮಿತ್ ಷಾ ಭೇಟಿ ಮಾಡಿ, ಅವರ ಭೇಟಿ ರೋಮಾಂಚನ ಎಂಬ ರೀತಿಯಲ್ಲಿ ತಮ್ಮ ಜಾಲತಾಣಗಳಲ್ಲಿ ಬರೆದುಕೊಂಡಿದ್ದ ರಿಷಬ್ ಶೆಟ್ಟಿ, ಅದೇ ಕಾಂಗ್ರೆಸ್ ನಾಯಕರ ಯಾವುದೇ ಭೇಟಿಯಲ್ಲೂ ಈ ರೀತಿ ಬರೆದುಕೊಂಡ ಉದಾಹರಣೆ ಇಲ್ಲ.. ಅಷ್ಟೇ ಅಲ್ಲದೆ, ಸ್ವತಃ ಡಿಕೆ ಶಿವಕುಮಾರ್ ಅವರು ರಿಷಬ್ ಶೆಟ್ಟಿಯನ್ನು ಮಲೆನಾಡು ಕರಾವಳಿಗೆ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಲು ಭೇಟಿ ಮಾಡಿದಾಗಲೂ ರಿಷಬ್ ಶೆಟ್ಟಿ ಕನಿಷ್ಟ ಸೌಜನ್ಯದ ಸಾಮಾಜಿಕ ಜಾಲತಾಣದ ಪೋಸ್ಟ್ ಹಾಕಿರಲಿಲ್ಲ. ಈ ನಡೆ ಕೂಡಾ ತೀವ್ರ ಟೀಕೆಗೆ ವ್ಯಕ್ತವಾಗಿದೆ.

ಅಷ್ಟಕ್ಕೂ ರಿಷಬ್ ಶೆಟ್ಟಿ ಸೈದ್ಧಾಂತಿಕವಾಗಿ ತನ್ನ ಸಿದ್ಧಾಂತ ಮತ್ತು ಪಕ್ಷದ ಆಯ್ಕೆಯ ವಿಷಯದಲ್ಲಿ ತಾವು ಸ್ವತಂತ್ರರು. ಹೀಗಾಗಿ ಅವರು ಅವರ ಇಷ್ಟದ ಆಯ್ಕೆಯನ್ನಾಗಿ ಬಿಜೆಪಿ ಮತ್ತು ಸಂಘ ಪರಿವಾರವನ್ನು ಆಯ್ಕೆ ಮಾಡಿಕೊಂಡದ್ದು ಅವರ ವೈಯಕ್ತಿಕ ನಿಲುವು. ಆದರೆ ಇಷ್ಟೆಲ್ಲಾ ಇರುವಾಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಂಘ ಪರಿವಾರದ ಹಿನ್ನೆಲೆಯ ವ್ಯಕ್ತಿಯನ್ನು ಮಲೆನಾಡು ಮತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡುವ ಉದ್ದೇಶ ಏನಿತ್ತು ಎಂಬ ಬಗ್ಗೆಯೂ ತೀವ್ರ ಟೀಕೆ ವ್ಯಕ್ತವಾಗಿದೆ.

ಅಷ್ಟೇ ಅಲ್ಲದೆ, ತುಳುನಾಡಿಗಾಗಲಿ, ಮಲೆನಾಡಿಗಾಗಲಿ ರಿಷಬ್ ಶೆಟ್ಟಿ ಕೊಡುಗೆ ಏನು ಎಂಬ ಬಗ್ಗೆಯೂ ಈಗ ಪ್ರಶ್ನೆ ಎದುರಾಗಿದೆ. ತನ್ನ ಸಿನಿಮಾಗಳಲ್ಲಿ ತುಳುನಾಡಿನ ದೈವಗಳನ್ನು ತನ್ನಿಷ್ಟಕ್ಕೆ ಬಂದಂತೆ ತಿರುಚಿ ದುಡ್ಡು ಮಾಡುವ ರಿಷಬ್ ಶೆಟ್ಟಿ, ತುಳುನಾಡಿನ ಘನತೆಗೆ ಕುಂದು ಬರುವಂತೆ ನಡೆದುಕೊಂಡಿದ್ದಾರೆ. ಆತನ ಆಯ್ಕೆ ರಾಜ್ಯ ಸರ್ಕಾರದ ಘನತೆಗೆ ತಕ್ಕುದಲ್ಲ. ಅಷ್ಟಲ್ಲದೇ ಕಾಂಗ್ರೆಸ್ ಸಿದ್ಧಾಂತಕ್ಕೂ ರಿಷಬ್ ಶೆಟ್ಟಿಯ ನಡವಳಿಕೆಗೂ ಹೊಂದಿಕೆ ಆಗದು. ತಮ್ಮ ನಾಯಕ ರಾಹುಲ್ ಗಾಂಧಿಯನ್ನು ಅವಹೇಳನ ಮಾಡಿದ ವ್ಯಕ್ತಿಯನ್ನೇ ಡಿಕೆ ಶಿವಕುಮಾರ್ ಬ್ರಾಂಡ್ ಅಂಬಾಸಿಡರ್ ಮಾಡಲು ಹೊರಟಿರುವುದು ಕಾಂಗ್ರೆಸ್ ಗೆ ತಕ್ಕ ನಡೆಯಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

You cannot copy content of this page

Exit mobile version