Home ರಾಜ್ಯ ಕರ್ನಾಟಕದಾದ್ಯಂತ ಮನೆ-ಮನೆ ಮೇಲೆ ಕನ್ನಡ ಧ್ವಜ ಅಭಿಯಾನ: ಸಿ.ಎಂ. ಇಬ್ರಾಹಿಂ

ಕರ್ನಾಟಕದಾದ್ಯಂತ ಮನೆ-ಮನೆ ಮೇಲೆ ಕನ್ನಡ ಧ್ವಜ ಅಭಿಯಾನ: ಸಿ.ಎಂ. ಇಬ್ರಾಹಿಂ

0

ಬೆಂಗಳೂರು: ನವೆಂಬರ್‌ 1ರಂದು ಕರ್ನಾಟಕದಲ್ಲಿನ ಮನೆ-ಮೆನೆಗಳ ಮೇಲೆ ಕನ್ನಡ ಧ್ವಜ ಹಾರಿಸುವ ಅಭಿಯಾನವನ್ನು ಜೆಡಿಎಸ್‌ ಪಕ್ಷವು ಕೈಗೊಳ್ಳಲಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ.

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ʼ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆʼ ಎಂಬ ರಾಷ್ಟ್ರ ಕವಿ ಕುವೆಂಪು ಅವರ ನುಡಿಯಂತೆ, ಕರ್ನಾಟಕ ರಾಜ್ಯೋತ್ಸವ ದಿನದಂದು ರಾಜ್ಯಾದಾದ್ಯಂತ ಮನೆ- ಮನೆಗಳ ಮೇಲೆ ಕರ್ನಾಟಕದ ಜನತೆ ಕನ್ನಡ ದ್ವಜವನ್ನು ಹಾರಿಸಬೇಕೆಂಬ ಅಭಿಯಾನವನ್ನು ಜನತಾ ದಳದಿಂದ ಮಾಡಲಾಗುತ್ತದೆ ಎಂದು ಹೇಳಿದರು.

You cannot copy content of this page

Exit mobile version