ಬೆಂಗಳೂರು : ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾದ ಡಾ.ಎ ಎಸ್ ಪ್ರಭಾಕರ್‌ರವರು ಬರೆದಿರುವ ʼಚಹರೆಗಳೆಂದರೆ ಗಾಯಗಳೂ ಹೌದುʼ ಎಂಬ ಪುಸ್ತಕವು ಕರ್ನಾಟಕ ಜಾನಪದ ಅಕಾಡೆಮಿಯು ನೀಡುವ 2021ರ ಸಾಲಿನ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕಾರ್ಯಕ್ರಮವು ಸೆಪ್ಟಂಬರ್ 29 ರಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆಯಲಿದೆ. ಇದಕ್ಕೆ ಆಯ್ಕೆಯಾಗಿರುವ ʼಚಹರೆಗಳೆಂದರೆ ಗಾಯಗಳೂ ಹೌದುʼ ಎಂಬ ಕೃತಿಯಲ್ಲಿ ಸಮುದಾಯಗಳನ್ನು ಕುರಿತ ಅಧ್ಯಯನಗಳು ಮತ್ತು ವರ್ತಮಾನದಲ್ಲಿ ನಮ್ಮೊಡನೆ ಬದುಕುತ್ತಿರುವ ಆದಿವಾಸಿ ಬುಡಕಟ್ಟು ಸಮುದಾಯಗಳ ವೈರುಧ್ಯಗಳಿಂದ ಕೂಡಿದ ಸಮಾಜ ಮತ್ತು ಆರ್ಥಿಕ ಬದುಕಿನ ವಾಸ್ತವಗಳನ್ನು ವಿಶ್ಲೇಷಣೆ ಮಾಡಲಾಗಿದೆ.
ಕರ್ನಾಟಕ ಜಾನಪದ ಅಕಾಡೆಮಿಯು ನೀಡುವ 2021ರ ಸಾಲಿನ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಪುಸ್ತಕಗಳಿಗೆ 25 ಸಾವಿರ ಗೌರವ ಪ್ರಶಸ್ತಿ ಮೊತ್ತ ಮತ್ತು ಫಲಕಗಳನ್ನು ಒಳಗೊಂಡಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಮಾಹಿತಿ ನೀಡಿದ್ದಾರೆ.